ಸಾರಾಂಶ
ಚನ್ನಪಟ್ಟಣ: ಪ್ರಗತಿಪರ ಚಿಂತಕ, ನಿವೃತ್ತ ಕನ್ನಡ ಪ್ರಾಧ್ಯಾಪಕ ಅಂಕಯ್ಯ ನಾಗವಾರ ಅವರ ೧೧ನೇ ಪುಣ್ಯಸ್ಮರಣೆ ನಿಮಿತ್ತ ಅವರ ಸ್ವಗ್ರಾಮದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಒಕ್ಕಲಿಗ ಸಾರ್ವಜನಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಕವಿ ಕುವೆಂಪು ಅವರ ಕೃತಿಗಳನ್ನು ವಿತರಿಸಲಾಯಿತು.

ಸ್ವಗ್ರಾಮದ ಪ್ರಾಥಮಿಕ ಶಾಲೆಯ ೨೦೦ ವಿದ್ಯಾರ್ಥಿಗಳು ಹಾಗೂ ಒಕ್ಕಲಿಗ ಸಾರ್ವಜನಿಕ ವಿದ್ಯಾಸಂಸ್ಥೆಯ ೨೫೦ ವಿದ್ಯಾರ್ಥಿಗಳಿಗೆ ರಾಷ್ಟ್ರಕವಿ ಕುವೆಂಪು ಅವರ ಕೃತಿಗಳಾದ ಮರಿ ವಿಜ್ಞಾನಿ, ಮೋಡಣ್ಣನ ತಮ್ಮ, ನರಿಗಳಿಗೇಕೆ ಕೋಡಿಲ್ಲ, ಜಲಗಾರ (ನಾಟಕ) ಹಾಗೂ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ " ವಿತರಣೆ ಮಾಡಲಾಯಿತು.ಬಳಿಕ ಮಾತನಾಡಿದ ಅಂಕಯ್ಯ ನಾಗವಾರರ ಪುತ್ರ, ವೈಚಾರಿಕ ಚಿಂತಕ ಅಭಿನಂದನ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ, ಮನುಜ ಮತ ವಿಶ್ವಪಥ, ಸರ್ವೋದಯ, ಸಮನ್ವಯ, ಮತ್ತು ಪೂರ್ಣದೃಷ್ಟಿ ವಿಚಾರಧಾರೆ ಎಲ್ಲೆಡೆಯೂ ಪಸರಿಸಬೇಕು ಎಂಬುದು ಅಂಕಯ್ಯ ನಾಗವಾರ ಅವರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಇಂತಹ ವಿಚಾರಧಾರೆಗಳು ತಲುಪಲೆಂದು ಅವರ ಪುಣ್ಯ ಸ್ಮರಣೆಯ ದಿನದಂದು ಕುವೆಂಪು ರಚಿತ ಪುಸ್ತಕಗಳನ್ನು ವಿಸ್ತರಿಸಲಾಗಿದೆ ಎಂದರು.
ಅಂಕಯ್ಯ ನಾಗವಾರ ಅವರ ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.ಪೊಟೋ೧೫ಸಿಪಿಟಿ೨:
ಅಂಕಯ್ಯ ನಾಗವಾರ ಸ್ಮರಣಾರ್ಥ ನಾಗವಾರ ಸರ್ಕಾರಿ ಶಾಲಾ ಮಕ್ಕಳಿಗೆ ಕುವೆಂಪು ಕೃತಿಗಳನ್ನು ವಿತರಿಸಲಾಯಿತು.