ಇಲ್ಲಿನ ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಉಡುಪಿ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿ ಅತ್ಯಂತ ಅದ್ದೂರಿ ಹಾಗೂ ಯಶಸ್ವಿಯಾಗಿ ಜರುಗಿತು.
ತಲ್ಲೂರು: ಇಲ್ಲಿನ ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಉಡುಪಿ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿ ಅತ್ಯಂತ ಅದ್ದೂರಿ ಹಾಗೂ ಯಶಸ್ವಿಯಾಗಿ ಜರುಗಿತು.
ಜಿಲ್ಲೆಯ ವಿವಿಧ ಶಾಲೆಗಳ ಬಾಲಕ ಹಾಗೂ ಬಾಲಕಿಯರ ತಂಡಗಳು ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಿದರು.ಪಂದ್ಯಾವಳಿಯನ್ನು ಮಾಜಿ ಗ್ರಾಪಂ ಸದಸ್ಯ ಉದಯಕುಮಾರ್ ತಲ್ಲೂರು ಉದ್ಘಾಟಿಸಿ, ಶುಭ ಹಾರೈಸಿದರು. ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರ ಸಂಘದ ಅಧ್ಯಕ್ಷ ಕುಸುಮಾಕರ್, ಇಸಿಓ ಯೋಗೀಶ್, ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಬೈಂದೂರು ಸಿಆರ್‌ಪಿ ರವಿಚಂದ್ರ ಹಾಗೂ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಶೆಟ್ಟಿ ಇದ್ದರು.
ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅವಿಲಾ, ಆಡಳಿತಾಧಿಕಾರಿ ಸಿಸ್ಟರ್ ಕುಂಚಿತ ಹಾಗೂ ಶಿಕ್ಷಕಿ ರತ್ನಾ ರವಿ ಶೆಟ್ಟಿ ಅವರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಸಂಧ್ಯಾ ರಾಣಿ ನಿರೂಪಿಸಿದರು. ಸುಮಿತ್ರ ವಂದಿಸಿದರು.ಫಲಿತಾಂಶ: ಬಾಲಕಿಯರ ವಿಭಾಗದಲ್ಲಿ ಆವರ್ಸೆ ಸರ್ಕಾರಿ ಹಿ.ಪ್ರಾ.ಶಾಲಾ ತಂಡ ಪ್ರಥಮ ಹಾಗೂ ಮೂವಾಡಿ ಸ.ಹಿ.ಪ್ರಾ.ಶಾಲಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಲಕರ ವಿಭಾಗದಲ್ಲಿ ಕುಚ್ಚೂರು ಸರ್ಕಾರಿ ಪ್ರೌಢಶಾಲಾ ತಂಡ ಪ್ರಥಮ ಸ್ಥಾನ ಹಾಗೂ ಮಣೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.