ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ (ಜ.12) ಆವಕದಲ್ಲಿ ಚೇತರಿಕೆಯಾಗಿದ್ದು, 75 ಸಾವಿರಕ್ಕೂ ಅಧಿಕ ಮೆಣಸಿಕಾಯಿ ಚೀಲಗಳು ಮಾರುಕಟ್ಟೆಗೆ ಲಭ್ಯವಿತ್ತು.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ (ಜ.12) ಆವಕದಲ್ಲಿ ಚೇತರಿಕೆಯಾಗಿದ್ದು, 75 ಸಾವಿರಕ್ಕೂ ಅಧಿಕ ಮೆಣಸಿಕಾಯಿ ಚೀಲಗಳು ಮಾರುಕಟ್ಟೆಗೆ ಲಭ್ಯವಿತ್ತು.

ಕಳೆದ ಗುರುವಾರ ಆವಕದಲ್ಲಿ ಕೊಂಚ ಇಳಿಕೆ ಕಂಡು ಬಂದಿತ್ತಾದರೂ ಇಂದು ಸುಮಾರು 20 ಸಾವಿರ ಚೀಲಗಳಷ್ಟು ಏರಿಕೆ ಕಂಡು ಬಂದಿದೆ. ಅಂತಿಮವಾಗಿ ಒಟ್ಟು 75617 ಮೆಣಸಿನಕಾಯಿ ಚೀಲಗಳು ಸೋಮವಾರ ಮಾರಾಟಕ್ಕಿದ್ದವು, ಉಳಿದಂತೆ ಮಾರುಕಟ್ಟೆಯಲ್ಲಿ ಮೂರು ತಳಿಯ ಮೆಣಸಿನಕಾಯಿಗೆ ಉತ್ತಮ ದರಗಳು ದೊರೆತಿದೆಯಲ್ಲದೇ, ಡಬ್ಬಿತಳಿ ಮೆಣಸಿನಕಾಯಿ ₹ 63 ಸಾವಿರ ಪ್ರತಿ ಕ್ವಿಂಟಲ್‌ ಮಾರಾಟವಾದ ಬಗ್ಗೆ ಎಪಿಎಂಸಿ ಮೂಲಗಳು ದೃಢಪಡಿಸಿವೆ.

ಸೋಮವಾರ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೊಮವಾರ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹ 4509 ಗರಿಷ್ಠ 60119 ಸರಾಸರಿ 38209, ಡಬ್ಬಿತಳಿ ಕನಿಷ್ಠ ₹ 4809, ಗರಿಷ್ಠ 63786, ಸರಾಸರಿ 40129, ಗುಂಟೂರು ಕನಿಷ್ಠ ₹ 1529 ಗರಿಷ್ಠ 16009 ಸರಾಸರಿ ₹ 13659 ಗಳಿಗೆ ಮಾರಾಟವಾಗಿವೆ.