ಸಮಾಜದ ಅಂಕು-ಡೊಂಕುಗಳು, ಮೌಢ್ಯದ ವಿರುದ್ಧ 12ನೇ ಶತಮಾನದಲ್ಲಿ ಪ್ರಮುಖ ಪಾತ್ರವಹಿಸಿ, ತಮ್ಮ ವಚನಗಳ ಮೂಲಕ ಸಮಾಜದ ವ್ಯವಸ್ಥೆಯನ್ನು ತಿದ್ದುವ ಕೆಲಸ ಮಾಡಿದ್ದ ಶ್ರೇಷ್ಠ ಶರಣರು ಅಂಬಿಗರ ಚೌಡಯ್ಯನವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಸಮಾಜದ ಅಂಕು-ಡೊಂಕುಗಳು, ಮೌಢ್ಯದ ವಿರುದ್ಧ 12ನೇ ಶತಮಾನದಲ್ಲಿ ಪ್ರಮುಖ ಪಾತ್ರವಹಿಸಿ, ತಮ್ಮ ವಚನಗಳ ಮೂಲಕ ಸಮಾಜದ ವ್ಯವಸ್ಥೆಯನ್ನು ತಿದ್ದುವ ಕೆಲಸ ಮಾಡಿದ್ದ ಶ್ರೇಷ್ಠ ಶರಣರು ಅಂಬಿಗರ ಚೌಡಯ್ಯನವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ನಗರದ ಗಿರಿಗಾಂವ ಆರ್.ಸಿ ಕೇಂದ್ರದಲ್ಲಿನ ಅಂಬಿಗರ ಚೌಡಯ್ಯನವರ ಸಮುದಾಯ ಭವನದಲ್ಲಿ ಬುಧವಾರ ನಡೆದ ಅಂಬಿಗರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆ ಮತ್ತು ಸಾಮಾಜಿಕ ನ್ಯಾಯ ವಿಧಾನವನ್ನು ಬಲಪಡಿಸುವ ಮೂಲಕ ಪ್ರಸಿದ್ಧರಾಗಿದ್ದರು. ಚೌಡಯ್ಯನವರ ವಚನಗಳು ಮತ್ತು ಸಂದೇಶಗಳು, ಜಾತಿ, ವರ್ಗ ಹಾಗೂ ಸಾಮಾಜಿಕ ಅಸಮಾನತೆ ವಿರುದ್ಧದ ಹೋರಾಟದಲ್ಲಿ ತುಂಬಾ ಪ್ರೇರಣೆಯಾದವು. ಅವರು ತಮ್ಮ ವಚನಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಪ್ರಯತ್ನಿಸಿದರು ಎಂದರು.ಸಂಸದ ಪಿ.ಸಿ.ಗದ್ದಿಗೌಡರ್ ಮಾತನಾಡಿ, ಅಂಬಿಗರ ಚೌಡಯ್ಯನವರ ಪರಂಪರೆ ಇಂದಿಗೂ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಾದ ಪಾಠ ಕೊಡುತ್ತದೆ. ಅವರ ಜೀವನ ಮತ್ತು ತತ್ವಗಳು ಕರ್ನಾಟಕದ ಶರಣ ಸಾಹಿತ್ಯದಲ್ಲಿ ಮತ್ತು ದಾರ್ಶನಿಕತೆಯಲ್ಲಿ ತುಂಬಾ ಪ್ರಮುಖವಾಗಿವೆ. ಅಂಬಿಗರ ಚೌಡಯ್ಯನವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಅಂಬಿಗರ ಚೌಡಯ್ಯನವರ ಭಾವಚಿತ್ರದೊಂದಿಗೆ ನಗರದ ಆರ್.ಎಂ.ಜಿ ಕಾಲೇಜು ಮೈದಾನದಿಂದ ಕುಂಭಮೇಳ, ವಿವಿಧ ಕಲಾತಂಡಗಳೊಂದಿಗೆ ಹೊರಟ ಮೆರವಣಿಗೆ ನಗರದ ಪ್ರಮುಖ ವೃತ್ತಗಳಲ್ಲಿ ಹಾಯ್ದು ವೇದಿಕೆಗೆ ತಲುಪಿತು. ಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಅಧ್ಯಕ್ಷ ಸದಾಶಿವ ಹೊಸಮನಿ, ಮುಖಂಡರಾದ ಮುದಕಣ್ಣ ಅಂಬಿಗೇರ, ನಾಗಪ್ಪ ಅಂಬಿ, ಚಿನ್ನು ಅಂಬಿ, ಪ್ರಭು ಸುಣಗಾರ, ಸಿದ್ದು ಉತ್ತೂರ, ರಂಗಪ್ಪ ಮಮಕನ್ನವರ, ತಾ.ಪಂ ಇಒ ಎಂ.ಐ.ಅಂಬಿಗೇರ್, ಆರ್.ಎಚ್.ನಿಡೋಣಿ, ಎಚ್.ಎಂ.ಪಾಟೀಲ್, ಎಚ್.ಬಿ.ದೋಣಿ, ಐ.ಎಂ.ಧಾರವಾಡಮಠ ಸೇರಿದಂತೆ ಸಮಾಜದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.ಸಮಾಜದ ಬಹುದಿನಗಳ ಬೇಡಿಕೆಯಾಗಿರುವ ಎಸ್ಟಿಗೆ ಸೇರಿಸಬೇಕು ಅನ್ನೊದು ಸಮಾಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸರ್ಕಾರದಿಂದ 4 ಬಾರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಮರಳಿ ಬಂದಿದೆ. ಆದರೆ, ಮತ್ತೊಮ್ಮೆ ಮುಖ್ಯಮಂತ್ರಿಗಳ ಮೂಲಕ ಶಿಫಾರಸ್‌ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಂಸದರು ಕೂಡಾ ವರದಿಯನ್ನು ಮರಳಿಸಿದಂತೆ ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ಅವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

-ಆರ್.ಬಿ.ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವರು.