ಚೌಲಗೆರೆ ಟೋಲ್ ವಿವಾದಕ್ಕೆ ಸಂಸದರಿಂದ ತೆರೆ

| Published : Dec 24 2024, 12:45 AM IST

ಚೌಲಗೆರೆ ಟೋಲ್ ವಿವಾದಕ್ಕೆ ಸಂಸದರಿಂದ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಆಲೂರು ಸಮೀಪದ ಚೌಲಗೆರೆ ಟೋಲ್ ಬಳಿ ಸುಂಕ ವಸೂಲಿ ಕುರಿತಾಗಿ ಏರ್ಪಟ್ಟಿದ್ದ ಗೊಂದಲಕ್ಕೆ ಸಂಸದ ಶ್ರೇಯಸ್ ಪಟೇಲ್ ತೆರೆ ಹೇಳಿದರು. ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳೀಯರು, ಕನ್ನಡಪರ ಸಂಘಟನೆಗಳು, ಟೋಲ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಸಂಸದರು, ಸಮಸ್ಯೆಯನ್ನು ಸೌಹಾರ್ದತಹಿತವಾಗಿ ಇತ್ಯರ್ಥಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಂಸದರ ಮಾತಿಗೆ ಒಪ್ಪಿದ ಟೋಲ್ ಕಂಟ್ರಾಕ್ಟರ್, ಸುಂಕ ವಸೂಲಿ ಕೇಂದ್ರದ 20 ಕಿಲೋಮೀಟರ್ ವ್ಯಾಪ್ತಿಯ ಜನರು ಇನ್ನು ಮುಂದೆ ತಮ್ಮ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.