ಸಾರಾಂಶ
ಎಂ ಹೊಸಹಳ್ಳಿ ಗ್ರಾಮದ "ಯೇಸು ನಡೆಸುತ್ತಾನೆ " ಪ್ರಾರ್ಥನ ಮಂದಿರದಲ್ಲಿ ಕ್ರಿಸ್ಮಸ್ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು. ನಾಡಿನ ಎಲ್ಲಾ ಜನರಿಗೆ ಕ್ರಿಸ್ಮಸ್ ಶುಭಾಶಯಗಳು ತಿಳಿಸಿದರು. ಅದೇ ರೀತಿಯಾಗಿ ಯೇಸು ನಡೆಸುತ್ತಾನೆ ಪ್ರಾರ್ಥನೆ ಮಂದಿರದ ಸಭಾ ಪಾಲಕರಾದ ಸೋಮಣ್ಣ ಮಾತನಾಡಿ, ಎಲ್ಲ ಜನರಿಗೆ ಆರೋಗ್ಯ ಆಯಸ್ಸು ಹಾಗೂ ರಕ್ಷಣೆಯನ್ನು ಕರ್ತನಾದ ಯೇಸು ಕ್ರಿಸ್ತನು ನೀಡಲಿ ಎಂದು ಪ್ರಾರ್ಥಿಸಿದರು.
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನ ಎಂ ಹೊಸಹಳ್ಳಿ ಗ್ರಾಮದ "ಯೇಸು ನಡೆಸುತ್ತಾನೆ " ಪ್ರಾರ್ಥನ ಮಂದಿರದಲ್ಲಿ ಕ್ರಿಸ್ಮಸ್ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು.ಹಾಸನದ ಬೆಥೆಲ್ ಚರ್ಚ್ ಸಭಾ ಪಾಲಕರಾದ ರೆವೆರೆಂಡ್ ಜಾಕೋಬ್ ಮಾತನಾಡಿ, ಲೋಕದ ರಕ್ಷಕನಾಗಿ ಜನಿಸಿದ ಯೇಸುವಿನ ಜನನದ ಸುದಿನವನ್ನು ಬಹಳ ಸಂತೋಷದಿಂದ ಸಡಗರದಿಂದ ಆಚರಿಸುತ್ತಿದ್ದೇವೆ. ಈ ಸಂತೋಷ ನಮಗೆ ಮಾತ್ರ ಅಲ್ಲ ಲೋಕದ ಎಲ್ಲಾ ಜನರು ಈ ಹಬ್ಬವನ್ನು ಆಚರಿಸುತ್ತಾರೆ. ಕಾರಣ ಯೇಸುವು ನಿಜವಾದ ರಕ್ಷಕನು ಆತನನ್ನ ನಂಬುವವರು ಒಬ್ಬರಾದರೂ ನಾಶವಾಗುವುದಿಲ್ಲ ಎಲ್ಲರೂ ನಿತ್ಯ ಜೀವ ಪಡೆಯುವರು ಎಂದರು. ಹಾಗೂ ನಾಡಿನ ಎಲ್ಲಾ ಜನರಿಗೆ ಕ್ರಿಸ್ಮಸ್ ಶುಭಾಶಯಗಳು ತಿಳಿಸಿದರು. ಅದೇ ರೀತಿಯಾಗಿ ಯೇಸು ನಡೆಸುತ್ತಾನೆ ಪ್ರಾರ್ಥನೆ ಮಂದಿರದ ಸಭಾ ಪಾಲಕರಾದ ಸೋಮಣ್ಣ ಮಾತನಾಡಿ, ಎಲ್ಲ ಜನರಿಗೆ ಆರೋಗ್ಯ ಆಯಸ್ಸು ಹಾಗೂ ರಕ್ಷಣೆಯನ್ನು ಕರ್ತನಾದ ಯೇಸು ಕ್ರಿಸ್ತನು ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕಣತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕಾರ್ಜುವಳ್ಳಿ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನಿಲುವಾಗಿಲು ರವಿ ಹಾಗೂ ಸುತ್ತಮುತ್ತಲಿನ ಜನರು ಸಭೆಯವರು ಹಾಜರಿದ್ದರು.