ಸಾರಾಂಶ
ಶಾಂತಿ, ಸೌಹಾರ್ದತೆ ಸಾರುವ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಾಲೂಕು ಕ್ರೈಸ್ತ ಹಿತರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿ, ಪೊಲೀಸ್ ಇಲಾಖೆ, ಪುರಸಭೆ ಹಾಗೂ ಸರ್ಕಾರಿ ಕಚೇರಿಗಳಿಗೆ ತೆರಳಿ ಅಲ್ಲಿಯ ಅಧಿಕಾರಿಗಳನ್ನು ಸನ್ಮಾನಿಸಿ ಶುಭಾಶಯ ತಿಳಿಸಿ ಕೇಕ್ ವಿತರಿಸಿದರು. ೨ ಸಾವಿರ ವರ್ಷಗಳ ಹಿಂದೆ ಏಸುಕ್ರಿಸ್ತನು ಈ ಭೂಮಿ ಮೇಲೆ ಮಾನವನಾಗಿ ಬಂದು ಮನುಷ್ಯನ ಪಾಪಗಳಿಗೋಸ್ಕರ ತಡೆಯಲು ಸ್ವತಃ ಮನುಷ್ಯನಾಗಿ ಬಂದು ಸ್ವತಃ ಶಿಲುಬೆಯಲ್ಲಿ ತನ್ನ ಪ್ರಾಣವನ್ನು ಕೊಡುವ ಮೂಲಕ ನಮ್ಮೆಲ್ಲರ ಪಾಪಗಳನ್ನು ಪರಿಹಾರ ಮಾಡಿ ಸ್ವರ್ಗಕ್ಕೆ ಏಕಮಾರ್ಗವಾಗಿ ಪ್ರಕಟಿಸಿಕೊಂಡಿದ್ದು ತನ್ನನ್ನು ತಾನೇ ಬೆಳಕು ಎಂದು ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೇಲೂರು
ಶಾಂತಿ, ಸೌಹಾರ್ದತೆ ಸಾರುವ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಾಲೂಕು ಕ್ರೈಸ್ತ ಹಿತರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿ, ಪೊಲೀಸ್ ಇಲಾಖೆ, ಪುರಸಭೆ ಹಾಗೂ ಸರ್ಕಾರಿ ಕಚೇರಿಗಳಿಗೆ ತೆರಳಿ ಅಲ್ಲಿಯ ಅಧಿಕಾರಿಗಳನ್ನು ಸನ್ಮಾನಿಸಿ ಶುಭಾಶಯ ತಿಳಿಸಿ ಕೇಕ್ ವಿತರಿಸಿದರು.ಈ ವೇಳೆ ಮಾತನಾಡಿದ ಅಧ್ಯಕ್ಷ ಪಾಸ್ಟರ್ ಕೃಷ್ಣಮೂರ್ತಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಬೇಲೂರು ತಾಲೂಕು ಕ್ರೈಸ್ತ ಹಿತರಕ್ಷಣಾ ವೇದಿಕೆ ವತಿಯಿಂದ ಹಲವಾರು ಸಮಾಜ ಸೇವೆ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಅದರಲ್ಲಿ ಆರೋಗ್ಯ ಶಿಬಿರ, ರಕ್ತದಾನ, ಶಾಲೆಗಳಿಗೆ ಚೇರ್ ವಿತರಣೆ ಹಾಗೂ ಸರ್ಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳನ್ನು ಸನ್ಮಾನಿಸಿ ಸಿಹಿ ಹಂಚಿ ಶುಭಾಶಯ ತಿಳಿಸಿದ್ದೇವೆ. ೨ ಸಾವಿರ ವರ್ಷಗಳ ಹಿಂದೆ ಏಸುಕ್ರಿಸ್ತನು ಈ ಭೂಮಿ ಮೇಲೆ ಮಾನವನಾಗಿ ಬಂದು ಮನುಷ್ಯನ ಪಾಪಗಳಿಗೋಸ್ಕರ ತಡೆಯಲು ಸ್ವತಃ ಮನುಷ್ಯನಾಗಿ ಬಂದು ಸ್ವತಃ ಶಿಲುಬೆಯಲ್ಲಿ ತನ್ನ ಪ್ರಾಣವನ್ನು ಕೊಡುವ ಮೂಲಕ ನಮ್ಮೆಲ್ಲರ ಪಾಪಗಳನ್ನು ಪರಿಹಾರ ಮಾಡಿ ಸ್ವರ್ಗಕ್ಕೆ ಏಕಮಾರ್ಗವಾಗಿ ಪ್ರಕಟಿಸಿಕೊಂಡಿದ್ದು ತನ್ನನ್ನು ತಾನೇ ಬೆಳಕು ಎಂದು ಹೇಳಿದ್ದಾರೆ. ತಾಲೂಕಿನ ಜನರಿಗೆ ಸುಖಶಾಂತಿ ನೆಮ್ಮದಿ ನೀಡಲಿ ನಾಡಿಗೆ ಒಳಿತನ್ನು ಮಾಡಲಿ ಎಂದು ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಫಾಸ್ಟರ್ ರೇವಣ್ಣ ಮೂರ್ತಿ, ಪ್ರಧಾನ ಕಾರ್ಯದರ್ಶಿ ಪಾಸ್ಟರ್ ಸಂದೇಶ್, ಫಾಸ್ಟರ್ ದರ್ಶನ್, ಸುರೇಶ್ ಪೌಲ್, ಜೋಯಿಲ್ ಕುಮಾರ್ ಕಿರಣ್, ಶಿವಪ್ಪ, ವೆಂಕಟೇಶ್, ಮಂಜಯ್ಯ ಶಾಂತ, ಇತರರು ಹಾಜರಿದ್ದರು.