ವರಮಹಾಲಕ್ಷ್ಮೀ ಹಬ್ಬಕ್ಕೆ ಸೇವಂತಿಗೆ ಹೂ ಖರೀದಿ

| Published : Aug 08 2025, 01:00 AM IST

ವರಮಹಾಲಕ್ಷ್ಮೀ ಹಬ್ಬಕ್ಕೆ ಸೇವಂತಿಗೆ ಹೂ ಖರೀದಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವು ಕೂಡ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧೆ ಭಕ್ತಯಿಂದ ಜನತೆ ಆಚರಿಸುತ್ತಿದ್ದು, ಹಬ್ಬದ ವ್ಯಾಪಾರಕ್ಕಾಗಿ ಒಂದು ದಿವಸದ ಮೊದಲೆ ಗುರುವಾರದಂದು ನಗರದ ಮುಖ್ಯ ಮಾರುಕಟ್ಟೆಯಲ್ಲಿ ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವ್ಯಾಪಾರ ಮಾಡಲು ಮುಗಿ ಬಿದ್ದಿದ್ದರು.ನಗರದ ಮಹಾವೀರ ವೃತ್ತ, ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ಬಿ.ಎಂ. ರಸ್ತೆ, ಸಾಲಗಾಮೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ವ್ಯಾಪಾರ ಜೋರಾಗಿಯೇ ನಡೆಯಿತು. ಪ್ರಮುಖವಾಗಿ ಸೇವಂತಿಗೆ ಒಂದು ಮಾರಿಗೆ ೧೦೦ರಿಂದ ೧೫೦ ರೂಗಳಿದ್ದು, ಪುಟ್ಟಬಾಳೆ ಒಂದು ಕೆಜಿಗೆ ೧೨೦ರಿಂದ ೧೫೦ ರು. ಗಳು, ತಾವರೆ ಎರಡಕ್ಕೆ ೧೦೦ರಿಂದ ೧೨೦, ಸೇಬು ಒಂದು ಕೆಜಿಗೆ ೧೦೦ರಿಂದ ೨೦೦ ಇತ್ತು.

ಕನ್ನಡಪ್ರಭ ವಾರ್ತೆ ಹಾಸನ

ಪ್ರತಿ ವರ್ಷದಂತೆ ಈ ವರ್ಷವು ಕೂಡ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧೆ ಭಕ್ತಯಿಂದ ಜನತೆ ಆಚರಿಸುತ್ತಿದ್ದು, ಹಬ್ಬದ ವ್ಯಾಪಾರಕ್ಕಾಗಿ ಒಂದು ದಿವಸದ ಮೊದಲೆ ಗುರುವಾರದಂದು ನಗರದ ಮುಖ್ಯ ಮಾರುಕಟ್ಟೆಯಲ್ಲಿ ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವ್ಯಾಪಾರ ಮಾಡಲು ಮುಗಿ ಬಿದ್ದಿದ್ದರು.

ನಗರದ ಮಹಾವೀರ ವೃತ್ತ, ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ಬಿ.ಎಂ. ರಸ್ತೆ, ಸಾಲಗಾಮೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ವ್ಯಾಪಾರ ಜೋರಾಗಿಯೇ ನಡೆಯಿತು. ಪ್ರಮುಖವಾಗಿ ಸೇವಂತಿಗೆ ಒಂದು ಮಾರಿಗೆ ೧೦೦ರಿಂದ ೧೫೦ ರೂಗಳಿದ್ದು, ಪುಟ್ಟಬಾಳೆ ಒಂದು ಕೆಜಿಗೆ ೧೨೦ರಿಂದ ೧೫೦ ರು. ಗಳು, ತಾವರೆ ಎರಡಕ್ಕೆ ೧೦೦ರಿಂದ ೧೨೦, ಸೇಬು ಒಂದು ಕೆಜಿಗೆ ೧೦೦ರಿಂದ ೨೦೦, ಅನಾನಸ್ ಎರಡಕ್ಕೆ ೧೦೦ರಿಂದ ೧೩೦, ಬಾಳೆಕಂದು ಎರಡಕ್ಕೆ ೬೦ರಿಂದ ೧೦೦ ರು. ಗಳು, ಮಾವಿನ ಎಲೆ ಕಟ್ಟಿಗೆ ೨೦ ರು. ಗಳು ಇದ್ದರೇ, ಬಳೆಗಳಲು, ರವಿಕೆ ಕಣ, ಇತರೆ ವಸ್ತುಗಳ ವ್ಯಾಪಾರ ಜೋರಾಗಿಯೇ ನಡೆಯಿತು. ಇನ್ನು ಕೆಲ ವ್ಯಾಪಾರಸ್ಥರು ಬೇಗ ಬೇಗ ಮನೆಗೆ ಹೋಗಲು ಕಡಿಮೆ ಬೆಲೆಗೆ ಕೊಡುತ್ತಿದ್ದರು. ಕೆಲ ಮುಖ್ಯ ವ್ಯಾಪರಾದ ರಸ್ತೆಗಳಲ್ಲಿ ಮಹಿಳೆಯರದೆ ಸದ್ದು ಕೇಳಿ ಬಂದಿತು.