ಪಲ್ಲಕ್ಕಿ ಸೇವೆಯೊಂದಿಗೆ ನಗರ ಪ್ರದಕ್ಷಿಣೆ ಸಂಪನ್ನ

| Published : Aug 25 2025, 01:00 AM IST

ಸಾರಾಂಶ

ಭಜನಾ ಹಾಗೂ ದೀಪಾರಾಧನೆ ಸೇವೆ ಮಾಡಿದ ಭಕ್ತರಿಗೆ ಹಾಗೂ ಗಣ್ಯರಿಗೆ ಭಜನಾ ಮಂಡಳಿಯಿಂದ ಗೌರವಿಸಲಾಯಿತು

ಕನಕಗಿರಿ: ಇಲ್ಲಿನ ಶ್ರೀಕನಕಾಚಲ ಭಜನಾ ಸಂಘದಿಂದ ಶ್ರಾವಣ ಪ್ರಯುಕ್ತ ಹಮ್ಮಿಕೊಂಡಿದ್ದ ತಿಂಗಳ ಪರ್ಯಂತ ನಗರ ಪ್ರದಕ್ಷಿಣೆ ಕಾರ್ಯಕ್ರಮ ಭಾನುವಾರ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಮುಕ್ತಾಯಗೊಂಡಿತು.

ನಾಗರ ಅಮಾವಾಸ್ಯೆಯಿಂದ ಆರಂಭಗೊಂಡಿರುವ ತಿಂಗಳ ಪರ್ಯಂತ ಭಜನಾ ಕಾರ್ಯಕ್ರಮದ ಜತೆಗೆ ಪ್ರತಿದಿನ ಸೂರ್ಯ ಉದಯಿಸುವ ಮುನ್ನ ನಾನಾ ದೇವಸ್ಥಾನಗಳಿಗೆ ದೀಪಾರಾಧನೆ ನಡೆಸಲಾಗುತ್ತಿತ್ತು. ಶ್ರಾವಣ ಮಾಸದ ನಂತರ ಬರುವ ಬೆನಕನ ಅಮಾವಾಸ್ಯೆಯ ಮರುದಿನವಾದ ಭಾನುವಾರ ಶ್ರೀಕನಕಾಚಲಪತಿ ದೇವಸ್ಥಾನದಿಂದ ರಾಜಬೀದಿಯ ಮಾರ್ಗವಾಗಿ ತೇರಿನ ಹನುಮಪ್ಪ ದೇವಸ್ಥಾನದವರೆಗೆ ಭಜನೆಯೊಂದಿಗೆ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ದೇವಸ್ಥಾನದಲ್ಲಿ ಭಜನೆ ಮಾಡುವ ಮೂಲಕ ತಿಂಗಳದ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.

ಭಜನಾ ಹಾಗೂ ದೀಪಾರಾಧನೆ ಸೇವೆ ಮಾಡಿದ ಭಕ್ತರಿಗೆ ಹಾಗೂ ಗಣ್ಯರಿಗೆ ಭಜನಾ ಮಂಡಳಿಯಿಂದ ಗೌರವಿಸಲಾಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಭಜನಾ ಸಂಘದ ಅಧ್ಯಕ್ಷ ಗೋಪಾಲರೆಡ್ಡಿ ಮಹಲಿನಮನಿ, ಕಾರ್ಯದರ್ಶಿ ಗುಂಡಪ್ಪ ಚಿತ್ರಗಾರ, ಪದಾಧಿಕಾರಿಗಳಾದ ಕನಕರಾಯ ನಾಯಕ, ವೆಂಕಟೇಶ ಸೌದ್ರಿ, ಶ್ರೀನಿವಾಸರೆಡ್ಡಿ ಓಣಿಮನಿ, ಗಣೇಶ, ಶರಣಪ್ಪ ಕೊರೆಡ್ಡಿ, ವೀರಪ್ಪ ಕೊಡ್ಲಿ, ಚಂದ್ರಹಾಸರೆಡ್ಡಿ ಅಳ್ಳಳ್ಳಿ, ಸುಬ್ಬಾರೆಡ್ಡಿ ರೌಡೂರು, ಪರಂಧಾಮರೆಡ್ಡಿ ಬೀರಳ್ಳಿ, ಭೀಮರೆಡ್ಡಿ ಓಣಿಮನಿ, ರಾಮಣ್ಣ ಗುಂಜಳ್ಳಿ, ಕನಕಾಚಲರೆಡ್ಡಿ, ನಾಗೇಶ ಮಹಿಪತಿ, ಕರುಣಾಕರ ರೆಡ್ಡಿ, ರಾಮಾಂಜನೇಯ ರೆಡ್ಡಿ ಓಣಿಮನಿ ಸೇರಿದಂತೆ ಇತರರಿದ್ದರು.