ಇಪಿಎಸ್‌ ಪಿಂಚಣಿದಾರರಿಂದ ಪ್ರತಿಭಟನೆ

| Published : Sep 28 2024, 01:19 AM IST

ಸಾರಾಂಶ

ಕೇಂದ್ರ ಸರ್ಕಾರದ ಮಂತ್ರಿಗಳು ಆಶ್ವಾಸನೆಗಳನ್ನು ಕೊಟ್ಟರೆ ಸಾಲದು ಅದನ್ನು ಆದಷ್ಟು ಬೇಗನೆ ಕಾರ್ಯರೂಪಕ್ಕೆ ತನ್ನಿ ,

ಕನ್ನಡಪ್ರಭ ವಾರ್ತೆ ಮೈಸೂರು

ರಾಷ್ಟ್ರೀಯ ಸಂಘರ್ಷ ಸಮಿತಿಯ ಕರೆ ಮೇರೆಗೆ ಶುಕ್ರವಾರ ನಗರದ ಭವಿಷ್ಯನಿಧಿ ಕಚೇರಿಯ ಮುಂದೆ ಮೈಸೂರು, ಚಾಮರಾಜನಗರ ಹಾಗೂ ಹಾವೇರಿ ಜಿಲ್ಲೆಯಿಂದ ಇಪಿಎಸ್ 95 ಪಿಂಚಣಿದಾರರು ಪ್ರತಿಭಟಿಸಿದರು.

ಎನ್.ಎಸಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಎನ್ಎಸಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಮಂಜುನಾಥ ಮಾತನಾಡಿ, ಕೇಂದ್ರ ಸರ್ಕಾರದ ಮಂತ್ರಿಗಳು ಆಶ್ವಾಸನೆಗಳನ್ನು ಕೊಟ್ಟರೆ ಸಾಲದು ಅದನ್ನು ಆದಷ್ಟು ಬೇಗನೆ ಕಾರ್ಯರೂಪಕ್ಕೆ ತನ್ನಿ , ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹಿರಿಯ ನಾಯಕರು ಜೀವನವನ್ನು ಹೀನಾಯ ಸ್ಥಿತಿ ತಲುಪಲು ಕಾರಣವಾಗಿದ್ದಾರೆ. ಇದು ಮೈಸೂರು ಅಥವಾ ಕರ್ನಾಟಕ ಮಾತ್ರವಲ್ಲದೆ ಇಡೀ ರಾಷ್ಟ್ರದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದರು.

ಸದ್ಯದಲ್ಲಿ ಕೇಂದ್ರ ಸರ್ಕಾರ ಇಪಿಎಸ್ 95 ದಾರರ ಬಗ್ಗೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ತೀರ್ಮಾನ ಕೈಗೊಳ್ಳುವ ಅವಕಾಶ ಇದೆ ಎಂದು ತಿಳಿಸಿದರು.

ಎನ್.ಎಸಿ ಮೈಸೂರು ಅಧ್ಯಕ್ಷರು ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ಎಂ. ಷಡಕ್ಷರಿ, ಟಿ. ಆರ್. ಶ್ರೀಕಂಠ ಪ್ರಸಾದ್, ಮಹದೇವು, ಚಾಮರಾಜನಗರ ಎನ್.ಎಸಿ ಅಧ್ಯಕ್ಷರು ಇದ್ದರು. ಇಪಿಎಫ್ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.