ಟ್ರ್ಯಾಕ್ಟರ್ ಹರಿದು ಪೌರಕಾರ್ಮಿಕ ಸಾವು

| Published : Feb 21 2025, 12:47 AM IST

ಸಾರಾಂಶ

ಪೌರಕಾರ್ಮಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜು (35) ಎನ್ನುವವರನ್ನು ಪೊಲೀಸರು ಕರೆದುದ್ಯೊಯ್ದು ಟ್ರ್ಯಾಕ್ಟರ್‌ ಮೂಲಕ ಬ್ಯಾರಿಕೇಡ್‌ಗಳನ್ನು ಸಾಗಿಸುತ್ತಿದ್ದರೆನ್ನಲಾಗಿದೆ.

ಪಾವಗಡ: ಟ್ರ್ಯಾಕ್ಟರ್ ಹರಿದು ಪೌರಕಾರ್ಮಿಕ ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ 12 ಗಂಟೆಯ ವೇಳೆಯಲ್ಲಿ ಪಟ್ಟಣದ ಶನಿಮಹಾತ್ಮ ದೇವಸ್ಥಾನದ ವೃತ್ತದಲ್ಲಿ ಜರುಗಿದೆ.ಕಳ್ಳತನ, ಟ್ರಾಫಿಕ್‌ ಹಾಗೂ ಅಕ್ರಮ ಚಟುವಟಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಇಲ್ಲಿನ ಠಾಣಾ ಪೊಲೀಸರು ಪಟ್ಟಣದ ನಾಲ್ಕು ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧಡೆ ನಿಲ್ಲಿಸಲು ಬ್ಯಾರಿಕೇಡ್‌ಗಳನ್ನು ಖಾಸಗಿ ಟ್ರ್ಯಾಕ್ಟರ್‌ನಲ್ಲಿ ಸ್ಥಳಾಂತರಿಸುತ್ತಿದ್ದ ಈ ವೇಳೆ, ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜು (35) ಎನ್ನುವವರನ್ನು ಪೊಲೀಸರು ಕರೆದುದ್ಯೊಯ್ದು ಟ್ರ್ಯಾಕ್ಟರ್‌ ಮೂಲಕ ಬ್ಯಾರಿಕೇಡ್‌ಗಳನ್ನು ಸಾಗಿಸುತ್ತಿದ್ದರೆನ್ನಲಾಗಿದೆ. ಪಟ್ಟಣದ ತುಮಕೂರು ರಸ್ತೆ ಸಮೀಪದ ಎಂಎಜಿ ಸರ್ಕಲ್‌ನಲ್ಲಿರುವಂತಹ ಬ್ಯಾರಿಕೇಡ್‌ಗಳನ್ನು ಚಳ್ಳಕೆರೆ ಕ್ರಾಸ್ ಕಡೆ ಸಾಗಿಸುತ್ತಿರುವ ವೇಳೆ ಪಟ್ಟಣದ ಶನಿ ಮಹಾತ್ಮ ವೃತ್ತದಲ್ಲಿ ಇದ್ದಕ್ಕಿದ್ದಂತೆ ಮಂಜುನಾಥ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದಿದ್ದು, ಆತನ ತಲೆಯ ಮೇಲೆ ಟ್ರ್ಯಾಕ್ಟರ್ ಹರಿದಿದೆ. ಕೂಡಲೇ ಸ್ಥಳೀಯರ ನೆರವಿನಿಂದ ಆತನನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗಿದೆ ಇದೇ ದಿನ ಸಂಜೆ ಐದು ಗಂಟೆಯಲ್ಲಿ ಪುರಸಭೆಯ ಖಾಯಂ ಪೌರಕಾರ್ಮಿಕ ಮಂಜುನಾಥ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮೃತ ಶವಪರೀಕ್ಷೆಯ ಬಳಿಕ ಸಂಬಂಧಿಕರಿಗೆ ಮೃತ ದೇಹ ಹಸ್ತಾಂತರಿಸಲಾಗಿದೆ. ಘಟನೆ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ