ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಮಳೆ, ಚಳಿ, ಗಾಳಿ, ಬಿಸಿಲು ಎನ್ನದೆ ನಸುಕಿನ ಜಾವದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರು ನಿಜವಾದ ಕಾಯಕಯೋಗಿಗಳು. ಕೊರೋನಾ ಸಮಯದಲ್ಲಿ ಸಂದಿಗ್ಧದ ಸ್ಥಿತಿಯಲ್ಲಿಯೂ ಜೀವದ ಹಂಗನ್ನು ಸ್ವಚ್ಛತೆ ಮಾಡಿದ್ದು ಶ್ಲಾಘನೀಯ ಎಂದು ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮಳೆ, ಚಳಿ, ಗಾಳಿ, ಬಿಸಿಲು ಎನ್ನದೆ ನಸುಕಿನ ಜಾವದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರು ನಿಜವಾದ ಕಾಯಕಯೋಗಿಗಳು. ಕೊರೋನಾ ಸಮಯದಲ್ಲಿ ಸಂದಿಗ್ಧದ ಸ್ಥಿತಿಯಲ್ಲಿಯೂ ಜೀವದ ಹಂಗನ್ನು ಸ್ವಚ್ಛತೆ ಮಾಡಿದ್ದು ಶ್ಲಾಘನೀಯ ಎಂದು ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ ಶ್ಲಾಘಿಸಿದರು.ಪಟ್ಟಣದ ಪುರಸಭೆಯಿಂದ ಹುಡ್ಕೋ ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ, ಸನ್ಮಾನ ಮತ್ತು ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಪಟ್ಟಣ ಸ್ವಚ್ಛತೆಯಿಂದ ಸುಂದರವಾಗಿ ಇರಲು ಪೌರ ಕಾರ್ಮಿಕರ ಪರಿಶ್ರಮವೇ ಪ್ರಮುಖ ಕಾರಣ. ರೋಗ ರುಜಿನಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೇ ವೈದ್ಯರಂತೆ ಕೆಲಸ ಮಾಡುತ್ತಿದ್ದಾರೆ. ಪೌರ ಕಾರ್ಮಿಕರನ್ನು ಎಲ್ಲರೂ ಗೌರವದಿಂದ ಕಾಣುವಂತಾಗಬೇಕು. ಅವರ ಶ್ರೇಯೋಭಿವೃದ್ಧಿಗೆ ಸರ್ಕಾರ ಮತ್ತು ಸಂಘ, ಸಂಸ್ಥೆಗಳು ಮನಸ್ಸು ಮಾಡಬೇಕಿದೆ ಎಂದು ಹೇಳಿದರು.
ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಪೌರ ಕಾರ್ಮಿಕರು ಪಟ್ಟಣದ ಜೀವನಾಡಿಗಳು. ಅಂತಹ ಸೇವಾನಿರತ ಪೌರ ಕಾರ್ಮಿಕರ ದಿನವನ್ನು ಸರ್ಕಾರದಿಂದ ಆಚರಿಸುತ್ತಿರುವುದು ಸ್ವಾಗತಾರ್ಹ. ಪೌರ ಕಾರ್ಮಿಕರು ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದರು.ಈ ವೇಳೆ ಕಾಯಂ ಪೌರಕಾರ್ಮಿಕರಿಗೆ ತಲಾ ₹7 ಸಾವಿರದಂತೆ ಒಟ್ಟು 51 ಪೌರ ಕಾರ್ಮಿಕರಿಗೆ ₹3.57 ಸಾವಿರ ವಿಶೇಷ ಭತ್ಯೆಯ ಚೆಕ್ ಅನ್ನು ಅಧ್ಯಕ್ಷ ಮೈಬೂಬ್ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಹಾಗೂ ಸದಸ್ಯರು ಮತ್ತು ಅಧಿಕಾರಿಗಳು ವಿತರಿಸಿದರು. ದಿನಗೂಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ರಫೀಕ ದ್ರಾಕ್ಷಿ, ರಿಜಾಜ್ ಅಹ್ಮದ್ ಢವಳಗಿ, ಶಿವು ಶಿವಪುರಿ, ಹಣಮಂತ ಭೋವಿ, ಅಶೋಕ ಒನಹಳ್ಳಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ಭಾರತಿ ಪಾಟೀಲ, ಕಂದಾಯ ಅಧಿಕಾರಿ ಎನ್.ಎಸ್ ಪಾಟೀಲ, ಆರೋಗ್ಯಾಧಿಕಾರಿ ಮಹಾಂತೇಶ ಕಟ್ಟಿಮನಿ, ವಿನೋದ ಝಿಂಗಾಡೆ, ಜಾವಿದ್ ನಾಯ್ಕೋಡಿ, ಶಂಶುದ್ಧಿನ ಮೂಲಿಮನಿ, ಸಂತೋಷ ಮಠ, ಸೈಪನ್ ಮಾನ್ಯಾಳ, ಶಿವಾನಂದ ಗಂಜಾಳ, ಶರಣು ಚಲವಾದಿ, ಪ್ರಸನ್ನಕುಮಾರ ಅವಟಿ, ಉಮೇಶ ದೇವರ, ರಾಮಣ್ಣ ಚಲವಾದಿ, ಚನ್ನಪ್ಪ ಮೂಖಿಹಾಳ, ರೇಣುಕಾ ಚಲವಾದಿ, ಲಕ್ಕವ್ವ ಹರಿಜನ, ಶಿವಣ್ಣ ಬೋಳಿ ಸೇರಿ ಇತರರು ಇದ್ದರು.