ನಮ್ಮ ಊರು ಸ್ವಚ್ಛವಾಗಿರಬೇಕು ಎಂದರೆ ಪಟ್ಟಣದ ಪೌರಕಾರ್ಮಿಕ ಕೊಡುಗೆ ದೊಡ್ಡದು, ಗ್ರಾಮಗಳು ಸುಂದರವಾಗಿಬೇಕು ಎನ್ನವ ಉದ್ದೇಶದಿಂದ ಪತ್ರಿದಿನ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸಣ್ಣ ಉಡುಗೊರೆ ಎಂದು ಜಿಪಂ ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ನಮ್ಮ ಊರು ಸ್ವಚ್ಛವಾಗಿರಬೇಕು ಎಂದರೆ ಪಟ್ಟಣದ ಪೌರಕಾರ್ಮಿಕ ಕೊಡುಗೆ ದೊಡ್ಡದು, ಗ್ರಾಮಗಳು ಸುಂದರವಾಗಿಬೇಕು ಎನ್ನವ ಉದ್ದೇಶದಿಂದ ಪತ್ರಿದಿನ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸಣ್ಣ ಉಡುಗೊರೆ ಎಂದು ಜಿಪಂ ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ತಿಳಿಸಿದರು.ಕೊರಟಗೆರೆ ಪಟ್ಟಣದಲ್ಲಿ ಮಾಜಿ ಜಿಪಂ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಅಭಿಮಾನಿ ಬಳಗ ಏರ್ಪಡಿಸಲಾಗಿದ್ದ ಕೊರಟಗೆರೆ ಪಪಂ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಬೆಡ್‌ಶೀಟ್, ಜರ್ಕಿನ್ ವಿತರಣೆ ಮಾಡಿ ಮಾತನಾಡಿದರು.ಪೌರಕಾರ್ಮಿಕರು ಚಳಿ, ಗಾಳಿ, ಮಳೆ ಎನ್ನದೆ ಬೆಳಿಗ್ಗೆ ೫ ಗಂಟೆಗೆ ಎದ್ದು ಪಟ್ಟಣವನ್ನು ಸ್ವಚ್ಛಗೊಳಿಸಿ ನಮಗೆ ಉತ್ತಮ ಪರಿಸರ ಸೃಷ್ಠಿ ಮಾಡಿಕೊಡುತ್ತಾರೆ. ಅವರು ಚಳಿಯಲ್ಲಿ ನಡುಗಬಾರದು ಎನ್ನವ ಉದ್ದೇಶದಿಂದ ಪಟ್ಟಣದ ಎಲ್ಲಾ ಪೌರಕಾರ್ಮಿಕರಿಗೆ ಬೆಡ್‌ಶೀಟ್, ಜರ್ಕಿನ್ ವಿತರಣೆ ಮಾಡಲಾಗಿದೆ. ಕೊರಟಗೆರೆ ಹಾಗೂ ತುಮಕೂರಿನ ನನ್ನ ಅಭಿಮಾನಿ ಬಳಗ ಸರಳವಾಗಿ ಆಚರಣೆ ಮಾಡಲು ತಿಳಿಸಿದ್ದೇನೆ ಎಂದರು. ಕೊರಟಗೆರೆ ಕ್ಷೇತ್ರದ ಜನತೆಯ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ನಾನು ೩೦ ವರ್ಷದಿಂದ ಕೊರಟಗೆರೆ ಜನತೆಯ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದು, ಅವರ ಕಷ್ಟ ಸುಖಗಳಲ್ಲಿ ಭಾಗವಹಿಸಿ ನನ್ನ ಕೈಲಾದ ಸಹಾಯ ಮಾಡಿಕೊಂಡು ಬಂದಿದ್ದೇನೆ. ಮುಂದೆನೂ ಸಹ ನಾನು ನಿಮ್ಮ ಜೊತೆ ಇರುತ್ತೇನೆ. ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾನು ಅಭಾರಿಯಾಗಿದ್ದೇನೆ. ಇದೆ ರೀತಿ ನಿಮ್ಮ ಆರ್ಶಿವಾದ ನನ್ನ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.ಈ ಸಂದರ್ಭದಲ್ಲಿ ಮಾಜಿ ಪ.ಪಂ ಸದಸ್ಯ ಅಶ್ವಥನಾರಾಯಣರಾಜು, ಮುಖಂಡರುಗಳಾದ ವಿಜಯ್‌ಕುಮಾರ್, ಆರ್.ಎಸ್.ರಾಜಣ್ಣ, ಕಾಂತರಾಜು, ಚೌಡಪ್ಪ, ಕೃಷ್ಣಪ್ಪ, ರಮೇಶ್, ಲಕ್ಷ್ಮೀಕಾಂತ, ಕಾಂತಣ್ಣ, ಸೇರಿದಂತೆ ಹಲವರು ಹಾಜರಿದ್ದರು.