ರಿಕ್ರಿಯೇಷನ್ ಕ್ಲಬ್‌ಗೆ ಸಿ.ಎಲ್.ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆ

| Published : Jan 01 2025, 12:02 AM IST

ರಿಕ್ರಿಯೇಷನ್ ಕ್ಲಬ್‌ಗೆ ಸಿ.ಎಲ್.ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಎಚ್.ಹೊಂಬೇಗೌಡ ಮೆಮೋರಿಯಲ್ ಅಡ್ವೋಕೇಟ್ಸ್ ಅಸೋಸಿಯೇಸನ್ ರಿಕ್ರಿಯೇಷನ್ ಕ್ಲಬ್‌ನ 2025 ಮತ್ತು 2026 ನೇ ಸಾಲಿನ ಎರಡು ವರ್ಷಗಳ ಅವಧಿಗೆ ನಡೆದ ಕಾರ್ಯಕಾರಿ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಲ್.ಶಿವಕುಮಾರ್ ಚುನಾಯಿತರಾದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಎಚ್.ಹೊಂಬೇಗೌಡ ಮೆಮೋರಿಯಲ್ ಅಡ್ವೋಕೇಟ್ಸ್ ಅಸೋಸಿಯೇಸನ್ ರಿಕ್ರಿಯೇಷನ್ ಕ್ಲಬ್‌ನ 2025 ಮತ್ತು 2026 ನೇ ಸಾಲಿನ ಎರಡು ವರ್ಷಗಳ ಅವಧಿಗೆ ನಡೆದ ಕಾರ್ಯಕಾರಿ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಲ್.ಶಿವಕುಮಾರ್ ಚುನಾಯಿತರಾದರು.

ಉಪಾಧ್ಯಕ್ಷರಾಗಿ ಬಿ.ಸಿದ್ದೇಗೌಡ, ಕಾರ್ಯದರ್ಶಿಯಾಗಿ ಎಸ್.ಪಿ.ಬೋರೇಗೌಡ, ಖಜಾಂಚಿಯಾಗಿ ಸಿ.ಸತೀಶ್, ಕ್ರೀಡಾ ಸಂಚಾಲಕರಾಗಿ ಕೃಷ್ಣೇಗೌಡ, ಹಿರಿಯ ನಿರ್ದೇಶಕರಾಗಿ ಪಿ.ಎಸ್.ಕೀರ್ತಿ,ವಿ.ಎಂ. ಮಹದೇವಸ್ವಾಮಿ, ಎಂ.ನಾಗೇಶ್, ಕೆ.ಬಿ.ಯೋಗಾನಂದ, ಮಹಿಳಾ ನಿರ್ದೇಶಕರಾಗಿ ಬಿ.ಕೆ.ಲತಾ, ಕಿರಿಯ ನಿರ್ದೇಶಕರಾಗಿ ಎಸ್.ಮಂಜುನಾಥ್, ಎಸ್.ಎಲ್.ಪುಟ್ಟಸ್ವಾಮಿ, ಎಸ್.ಬಿ.ರಾಘವೇಂದ್ರ ಪ್ರಸಾದ್, ವಕೀಲೇತರ ಹಿರಿಯ ನಿರ್ದೇಶಕರಾಗಿ ಎಂ.ಸಿ.ರೋಹಿತ್ ಕುಮಾರ್, ಎಂ.ಎಸ್.ಸತೀಶ್, ಎಂ.ತಮ್ಮಯ್ಯ, ವಕೀಲೆತರ ಕಿರಿಯ ನಿರ್ದೇಶಕರಾಗಿ ಎಚ್.ಎಸ್. ದೇವರಾಜು ಅವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಜಿ.ಕೆ.ಶಿವಕುಮಾರ್ ತಿಳಿಸಿದರು. ಸಹಾಯಕ ಚುನಾವಣಾಧಿಕಾರಿಗಳಾಗಿ ಎಲ್. ನಂದೀಶ್, ಬೋರ ಲಿಂಗೇಗೌಡ, ಕೃಷ್ಣ,ಗೀತಾ, ಸುನಿಲ್ ಕುಮಾರ್ ಕಾರ್ಯ ನಿರ್ವಹಿಸಿದರು.

ಕುವೆಂಪು ಸಾಧನೆ ಕುರಿತು ರಸಪ್ರಶ್ನೆ ಕೆಪಿಎಸ್ ಶಾಲೆಗೆ ಪ್ರಥಮ ಸ್ಥಾನ

ದೇವಲಾಪುರ: ರಾಷ್ಟ್ರಕವಿ ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ಕುವೆಂಪುರ ಕುರಿತು ನಡೆದ ರಸಪ್ರಶ್ನೆಯಲ್ಲಿ ದೇವಲಾಪುರ ಕೆಪಿಎಸ್ ಶಾಲೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ನಾಗಮಂಗಲ ಕನ್ನಡ ಸಂಘ ಆಯೋಜನೆ ಮಾಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ದೇವಲಾಪುರ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳಾದ 8ನೇ ತರಗತಿ ಭೂಮಿಕ ಮತ್ತು ಸಿಂಚನ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಕನ್ನಡ ಸಂಘದ ಅಧ್ಯಕ್ಷೆ ಅಲಮೇಲು ಬಹುಮಾನ ವಿತರಿಸಿದರು. ಶಿಕ್ಷಕರಾದ ಉಮಾ ಇದ್ದರು.