ಸ್ವಚ್ಛ ಸರ್ವೇಕ್ಷಣಾ ಅಭಿಯಾನ: ಕುಶಾಲನಗರ ಪುರಸಭೆ ರಾಜ್ಯದಲ್ಲಿ 29ನೇ ರ್‍ಯಾಂಕ್

| Published : Jul 24 2025, 01:45 AM IST

ಸ್ವಚ್ಛ ಸರ್ವೇಕ್ಷಣಾ ಅಭಿಯಾನ: ಕುಶಾಲನಗರ ಪುರಸಭೆ ರಾಜ್ಯದಲ್ಲಿ 29ನೇ ರ್‍ಯಾಂಕ್
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಕುಶಾಲನಗರ ಪುರಸಭೆ ರಾಜ್ಯದಲ್ಲಿ 29ನೇ ರ್‍ಯಾಂಕ್ ಗಳಿಸಿದ್ದು, ರಾಷ್ಟ್ರಮಟ್ಟದಲ್ಲಿ 993ನೇ ರ್‍ಯಾಂಕ್ ಪಡೆದಿದೆ. ರಾಷ್ಟ್ರಮಟ್ಟದಲ್ಲಿ 2035 ಪಟ್ಟಣಗಳ ಪೈಕಿ ಕುಶಾಲನಗರ ಪುರಸಭೆಗೆ 993ನೇ ಸ್ಥಾನ, ರಾಜ್ಯಮಟ್ಟದಲ್ಲಿ 115ರಲ್ಲಿ 29ನೇ ರ್‍ಯಾಂಕ್ ಲಭಿಸಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಕುಶಾಲನಗರ ಪುರಸಭೆ ರಾಜ್ಯದಲ್ಲಿ 29ನೇ ರ್‍ಯಾಂಕ್ ಗಳಿಸಿದ್ದು, ರಾಷ್ಟ್ರಮಟ್ಟದಲ್ಲಿ 993ನೇ ರ್‍ಯಾಂಕ್ ಪಡೆದಿದೆ.ಕುಶಾಲನಗರ ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್ ಈ ಬಗ್ಗೆ ಮಾಹಿತಿ ನೀಡಿ, ರಾಷ್ಟ್ರಮಟ್ಟದಲ್ಲಿ 2035 ಪಟ್ಟಣಗಳ ಪೈಕಿ ಕುಶಾಲನಗರ ಪುರಸಭೆಗೆ 993ನೇ ಸ್ಥಾನ, ರಾಜ್ಯಮಟ್ಟದಲ್ಲಿ 115ರಲ್ಲಿ 29ನೇ ರ್‍ಯಾಂಕ್ ಲಭಿಸಿದೆ ಎಂದು ತಿಳಿಸಿದರು.

ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಿಬ್ಬಂದಿ, ಪಟ್ಟಣದ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಂತರ್ ಗೌಡ, ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ನಾಗರಿಕರು ಎಲ್ಲ ರೀತಿಯ ಸಹಕಾರ ನೀಡಬೇಕಾಗಿದೆ. ಹಸಿ ಕಸ, ಒಣ ಕಸ ಸಂಗ್ರಹ ವಾಹನಕ್ಕೆ ನೀಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.ಸ್ವಚ್ಛತಾ ಕಾರ್ಯಕ್ಕೆ ಪುರಸಭೆ ಮೂಲಕ ಎಲ್ಲ ಸೌಲಭ್ಯಗಳನ್ನು ಸರ್ಕಾರದ ಮೂಲಕ ಕಲ್ಪಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.