ರುದ್ರಭೂಮಿ ಸ್ವಚ್ಛತೆ ಮಾಡಿ ಸಸಿ ನೆಟ್ಟು ಶ್ರಮದಾನ

| Published : May 26 2024, 01:30 AM IST

ಸಾರಾಂಶ

ಲೋಕಾಪುರದ ವೆಂಕಟಾಪುರ ಓಣಿಯ ಸಾರ್ವಜನಿಕ ಹಿಂದು ರುದ್ರಭೂಮಿ ಮುಕ್ತಿಧಾಮದಲ್ಲಿ ಗ್ರಾಮದ ಪದಾಧಿಕಾರಿಗಳು ಹಾಗೂ ಇತರರು ಸೇರಿ ರುದ್ರಭೂಮಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿ ಸಸಿಗಳನ್ನು ನೆಟ್ಟು ಶ್ರಮದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಮೀಪದ ವೆಂಕಟಾಪುರ ಓಣಿಯ ಸಾರ್ವಜನಿಕ ಹಿಂದು ರುದ್ರಭೂಮಿ ಮುಕ್ತಿಧಾಮದಲ್ಲಿ ಗ್ರಾಮದ ಪದಾಧಿಕಾರಿಗಳು ಹಾಗೂ ಇತರರು ಸೇರಿ ರುದ್ರಭೂಮಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿ ಸಸಿಗಳನ್ನು ನೆಟ್ಟು ಶ್ರಮದಾನ ಮಾಡಿದರು.

ಇಂತಹ ಸಮಾಜಮುಖಿ ಕೆಲಸ ಮಾಡಿದ ಗ್ರಾಮಸ್ಥರ ಕಾರ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಬೆಳಗ್ಗೆಯಿಂದ ಮದ್ಯಾಹ್ನದವರೆಗೆ ನಡೆದ ಶ್ರಮದಾನದಲ್ಲಿ ರುದ್ರಭೂಮಿಯ ಸುತ್ತಮುತ್ತಲಿನ ಬೆಳೆದಿದ್ದ ಕಸ, ಕಂಟಿ, ಪೀಕಜಾಲಿ ಮುಳ್ಳು, ಬಟ್ಟೆಗಳು, ಹುಲ್ಲು, ಕಸಕಡ್ಡಿಗಳನ್ನು ಸ್ವಚ್ಛಗೊಳಿಸಲಾಯಿತು.

ವಾರಸುದಾರರು ನಿಧನ ಹೊಂದಿದ ವ್ಯಕ್ತಿ ಉಪಯೋಗಿಸಿದ ಚಾದರ, ದಿಂಬು, ಚಾಪೆ, ಬಟ್ಟೆಗಳನ್ನು ಸ್ಮಶಾನದಲ್ಲಿ ಬಿಸಾಡುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಜನರು ಇಂತಹ ನಿರುಪಯುಕ್ತ ವಸ್ತುಗಳನ್ನು ಬಿಸಾಡದೆ ಸುಟ್ಟುಹಾಕಿ ಪರಿಸರ ಸ್ವಚ್ಛವಾಗಿಡಬೇಕೆಂದು ಶಿಕ್ಷಕ ಎಂ.ಎನ್. ಕೋಲ್ಹಾರ ಮನವಿ ಮಾಡಿದರು.

ಶ್ರಮದಾನದಲ್ಲಿ ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ಪ್ರಭು ಹೊನವಾಡ, ಈರಣ್ಣ ಬೆಳಗಲಿ, ಮಾರುತಿ ಚಿನ್ನಪ್ಪಗೋಳ, ಸುಭಾಸ ದೊಡಮನಿ, ಈರಣ್ಣ ಬುದ್ನಿ, ನಿಂಗಪ್ಪ ಮುದ್ದಾಪುರ, ರಾಚಣ್ಣ ಬಳಗಾರ, ಹೊಳಬಸು ಬಳಗಾರ, ಬಸವರಾಜ ಬೆಳಗಲಿ, ಶ್ರೀಶೈಲ ಮುದ್ದಾಪುರ, ಲೋಕಣ್ಣ ಮುದ್ದಾಪುರ, ನಾಗಪ್ಪ ಮುದ್ದಾಪುರ, ಹೊಳಬಸು ಮುದ್ದಾಪುರ, ಶಿಕ್ಷಕ ಎಂ.ಎನ್. ಕೊಲ್ಹಾರ ಇತರರು ಇದ್ದರು.