ಅಮ್ಮತ್ತಿ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ: ತಡೆಗೋಡೆಗೆ ಬಣ್ಣ, ಚಿತ್ರ

| Published : Feb 25 2025, 12:47 AM IST

ಅಮ್ಮತ್ತಿ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ: ತಡೆಗೋಡೆಗೆ ಬಣ್ಣ, ಚಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸಂಸ್ಥೆ ವತಿಯಿಂದ ಅಮ್ಮತ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ತಡೆಗೋಡೆಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಶಾಲಾ ಮಕ್ಕಳಿಗೆ ಅಗತ್ಯವಾದ ಕಲಿಕೋಪಕರಣಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಬೆಂಗಳೂರಿನ ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸಂಸ್ಥೆ ವತಿಯಿಂದ ಅಮ್ಮತ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ತಡೆಗೋಡೆಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಶಾಲಾ ಮಕ್ಕಳಿಗೆ ಅಗತ್ಯವಾದ ಕಲಿಕೋಪಕರಣಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಯಿತು.ಬೆಂಗಳೂರಿನ ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸಂಸ್ಥೆಯ 40 ಸ್ವಯಂಸೇವಕ ಸದಸ್ಯರನ್ನು ಒಳಗೊಂಡ ದಾನಿಗಳ ತಂಡ, ಸರ್ಕಾರಿ ಶಾಲೆಯ ತರಗತಿ ಕೋಣೆಗಳಿಗೆ ಉಪಯುಕ್ತವಾದ ಕಲಿಕೋಪಕರಣ ಚಾರ್ಟ್‌ಗಳನ್ನು ವಿದ್ಯಾರ್ಥಿಗಳೊಂದಿಗೆ ತಯಾರಿಸಿ ನೀಡಿದರು.

ಎರಡು ದಿನ ಶಾಲೆಯಲ್ಲಿ ಕಳೆದ ತಂಡದ ಸದಸ್ಯರು, ಶಾಲೆಯ ಮುಂಭಾಗದಲ್ಲಿರುವ ತಡೆಗೋಡೆಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಗೋಡೆಗಳ ಮೇಲೆ ಸಾಮಾಜಿಕ, ಪರಿಸರ ಕಾಳಜಿ ಮೌಲ್ಯಗಳನ್ನು ತಿಳಿಸುವಂತಹ ವರ್ಣ ರಂಜಿತ ಚಿತ್ರಗಳು ಮತ್ತು ವರ್ಲಿ ಚಿತ್ರಗಳನ್ನು ಸುಂದರವಾಗಿ ಬಿಡಿಸಿದರು ಹಾಗೂ ಶಾಲೆಯ ಹೊರಾಂಗಣದ ಪರಿಸರವನ್ನು ಸ್ವಚ್ಛಗೊಳಿಸಿ ಶಾಲೆಯ ತಡೆಗೋಡೆಗಳ ಮೇಲೆ ವರ್ಣ ರಂಜಿತ ಚಿತ್ರಗಳನ್ನು ಬಿಡಿಸಿ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದರು ಹಾಗೂ ವಿದ್ಯಾರ್ಥಿಗಳಗೆ ಅಗತ್ಯ ಮಾಹಿತಿಗಳನ್ನು ನೀಡಿದರು.ಈ ಸಂದರ್ಭದಲ್ಲಿ ಸಿಸ್ಕೋ ಸಂಸ್ಥೆಯ ಸ್ವಯಂಸೇವಕರು, ಜಾಗೃತಿ ಟ್ರಸ್ಟ್ ಆಡಳಿತ ಅಧಿಕಾರಿ ಶ್ರೀಕಣ್ಣನ್ ಆರ್., ಖಜಾಂಚಿಗಳಾದ ಕೊಂಡಿಂಜಮ್ಮಂಡ ಶರಣು, ನೋಯೆಲ್, ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್. ಸೋಮಕ್ಕ, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮಕ್ಕಳು ಇದ್ದರು.