ಸ್ವಚ್ಛತೆ, ಶಿಕ್ಷಣ ಎರಡಕ್ಕೂ ಬದುಕಿನಲ್ಲಿ ಮಹತ್ವದ ಪಾತ್ರ-ಡಾ. ಗೌಡರ

| Published : May 31 2024, 02:15 AM IST

ಸ್ವಚ್ಛತೆ, ಶಿಕ್ಷಣ ಎರಡಕ್ಕೂ ಬದುಕಿನಲ್ಲಿ ಮಹತ್ವದ ಪಾತ್ರ-ಡಾ. ಗೌಡರ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಚ್ಛತೆ ಮತ್ತು ಶಿಕ್ಷಣ ಎರಡೂ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಪ್ರಾಚಾರ್ಯ ಡಾ. ಎಸ್.ಪಿ. ಗೌಡರ ಹೇಳಿದರು.

ಹಿರೇಕೆರೂರು: ಸ್ವಚ್ಛತೆ ಮತ್ತು ಶಿಕ್ಷಣ ಎರಡೂ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಪ್ರಾಚಾರ್ಯ ಡಾ. ಎಸ್.ಪಿ. ಗೌಡರ ಹೇಳಿದರು.

ಅವರು ತಾಲೂಕಿನ ಎತ್ತಿನಹಳ್ಳಿ ಎಂಕೆ ಗ್ರಾಮದಲ್ಲಿ ಹಿರೇಕೆರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಎನ್‌ಎಸ್‌ಎಸ್‌ ಶಿಬಿರ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಬದುಕಿನ ಆಯಾಮಗಳನ್ನು ತಿಳಿಸುವ ಜತೆಗೆ ಸಹಬಾಳ್ವೆಯ ಪಾಠ ಹೇಳಿಕೊಡುವುದು ಎಂದರು. ಶ್ರಮದಾನದ ಮೂಲಕ ಗ್ರಾಮವನ್ನು ಸ್ವಚ್ಛಗೊಳಿಸುವುದರೊಂದಿಗೆ ಜನತೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದೀರಿ ಎಂದು ಶಿಬಿರಾರ್ಥಿಗಳನ್ನು ಅಭಿನಂದಿಸಿದರು. ಶಿಬಿರ ಯಶಸ್ವಿಯಾಗಲು ಸಹಕರಿಸಿದ ಗ್ರಾಮಸ್ಥರನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿ ಸಮಾಜ ಸೇವಕ ಜಿ.ಪಿ. ಪ್ರಕಾಶ ಗೌಡರ ಮಾತನಾಡಿ, ಶಿಕ್ಷಣದಿಂದ ಬದುಕು ಬದಲಾಗಬೇಕು. ನೀವು ಪಡೆಯುವ ಶಿಕ್ಷಣ ಮುಂದಿನ ಬದುಕಿನ ದಾರಿದೀಪವಾಗಬೇಕು ಎಂದರು. ಹಳ್ಳಿಗಳಲ್ಲಿ ಇಂಥ ಶಿಬಿರಗಳು ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಜಾತ್ಯತೀತ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ ಎಂದರು.

ಉತ್ತಮ ಶಿಕ್ಷಣ ಪಡೆದುಕೊಂಡಿದ್ದೇ ಆದಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಮತ್ತು ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದು ಹೇಳಿದರು.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ತಳವಾರ ಅಧ್ಯಕ್ಷತೆ ವಹಿಸಿದ್ದರು.

ಗ್ರಾಪಂ ಸದಸ್ಯೆ ಆಶಾ ತಳವಾರ, ಪುಷ್ಪಾ ಕೆಳಗಿನಮನಿ, ಜಯಕುಮಾರ್ ಹುಲ್ಲಿನಕೊಪ್ಪ, ಕಾರ್ಯಕ್ರಾಧಿಕಾರಿಗಳಾದ ಪ್ರೊ. ಹರೀಶ್ ಡಿ., ಪ್ರೊ. ಗೀತಾ ಎಂ., ಪ್ರಾಧ್ಯಾಪಕ ನವೀನ ಎಂ., ಪ್ರಸನ್ನಕುಮಾರ ಜೆ., ಶಿವಾನಂದ ಸಂಗಾಪುರ, ಸಹ ಶಿಬಿರಾಧಿಕಾರಿ ಡಾ. ಕಾಂತೇಶ ರೆಡ್ಡಿ ಗೋಡಿಹಾಳ, ಬಸವರಾಜ ಮಾಗಳದ ಹಿರೇಕೆರೂರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸಂಜೀವ ಭಜಂತ್ರಿ, ಕಿರಣಕುಮಾರ ಮೊದಲಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಗ್ನಿ ಅವಘಡಗಳು ಮತ್ತು ಅವುಗಳನ್ನು ನಿವಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು.