ಸಾರಾಂಶ
ಶ್ರೀಆದಿರಂಗನಾಥ ಮತ್ತು ಶ್ರೀಗಂಗಾಧರೇಶ್ವರ, ಶ್ರೀನಿಮಿಷಾಂಬ ದೇವಾಲಯ ಹಾಗೂ ಶ್ರೀಕ್ಷಣಾಂಭಿಕಾ ದೇಗುಲಗಳು ಪಟ್ಟಣಕ್ಕೆ ಕಿರೀಟದಂತಿವೆ. ಪಟ್ಟಣದ ಪಾರಂಪರಿಕೆಯನ್ನು ಎತ್ತಿ ಹಿಡಿದಿವೆ. ಅವುಗಳ ಸಂರಕ್ಷಣೆ ಹಾಗೂ ಸ್ವಚ್ಛತೆಯನ್ನು ನಾವುಗಳು ಸದಾ ಕಾಪಾಡಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ದೇವಾಲಯಗಳನ್ನು ಸ್ವಚ್ಛಗೊಳಿಸಿ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಗಣಪತಿ ಭಟ್ ಹೇಳಿದರು.ಪಟ್ಟಣದ ಶ್ರೀಕ್ಷಣಾಂಭಿಕಾ ದೇವಸ್ಥಾನದಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಪಾರಂಪರಿಕ ನಗರಿ ಹೆಮ್ಮೆಯ ಶ್ರೀರಂಗಪಟ್ಟಣದಲ್ಲಿ ಪ್ರಾಚೀನ ದೇಗುಲಗಳಿವೆ. ಮೂಲ ಧಾರ್ಮಿಕ ಪದ್ಧತಿಗೂ ಹೆಸರಾಗಿವೆ ಎಂದರು.
ಶ್ರೀಆದಿರಂಗನಾಥ ಮತ್ತು ಶ್ರೀಗಂಗಾಧರೇಶ್ವರ, ಶ್ರೀನಿಮಿಷಾಂಬ ದೇವಾಲಯ ಹಾಗೂ ಶ್ರೀಕ್ಷಣಾಂಭಿಕಾ ದೇಗುಲಗಳು ಪಟ್ಟಣಕ್ಕೆ ಕಿರೀಟದಂತಿವೆ. ಇದಲ್ಲದೇ, ಪಟ್ಟಣದ ಸುತ್ತಲು ಪವಿತ್ರ ಕಾವೇರಿ ನದಿ ಹರಿಯುತ್ತಿದ್ದು ನದಿ ತೀರದಲ್ಲೇ ಹೆಸರುವಾಸಿಯಾದ ಹಲವು ಧಾರ್ಮಿಕ ಕೇಂದ್ರದ ಜೊತೆ ಪ್ರವಾಸಿತಾಣಗಳು ಈ ಪಟ್ಟಣದ ಪಾರಂಪರಿಕೆಯನ್ನು ಎತ್ತಿ ಹಿಡಿದಿವೆ ಅವುಗಳ ಸಂರಕ್ಷಣೆ ಹಾಗೂ ಸ್ವಚ್ಛತೆಯನ್ನ ನಾವುಗಳು ಸದಾ ಕಾಪಾಡಿಕೊಳ್ಳಬೇಕು ಎಂದರು.ಈ ವೇಳೆ ಕೃಷಿ ಅಧಿಕಾರಿ ಕಾರ್ತಿಕ್, ವಲಯದ ಮೇಲ್ವಿಚಾರಕರು, ಸೇವಾವಲಯದ ಸದಸ್ಯರು, ಕ್ಷಣಾಂಭಿಕಾ ದೇವಸ್ಥಾನದ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿ, ಕಸವನ್ನು ಸ್ವಚ್ಛಗೊಳಿಸಿದರು.ಆ.15 ರಂದು ಉಚಿತ ಬೃಹತ್ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ
ಮದ್ದೂರು: ತಾಲೂಕಿನ ನಗರಕೆರೆ ಗ್ರಾಮದ ಕೆಂಪೇಗೌಡರ ವೃತ್ತದಲ್ಲಿ ಆ.15 ರಂದು ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಶ್ರೀ ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ ನಗರಕೆರೆ, ಸುಮುಖ ಸೇವಾ ಟ್ರಸ್ಟ್, ಸುಮುಖ ನಿಧಿ ಲಿಮಿಟೆಡ್ ಮದ್ದೂರು ಹಾಗೂ ನಗರಕೆರೆಯ ಎಲ್ಲಾ ಸಂಘ,ಸಂಸ್ಥೆಗಳು, ಯಜಮಾನರುಗಳು ಯುವಕ ಮಿತ್ರರು ಮತ್ತು ಗ್ರಾಮಸ್ಥರು ಮದ್ದೂರು ಪೊಲೀಸ್ ಠಾಣೆ ಸಿಬ್ಬಂದಿವರ್ಗ ಸಹಯೋಗದೊಂದಿಗೆ 78 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶಿಬಿರ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಿದ್ದೇಶ್, ಮೊ- 9742094475, ಅನಿಜಿತ್ ಮೊ- 9964606777 ಸಂಪರ್ಕಿಸಬಹುದು.