ಮಸ್ಟ್ ಜಾಹಿರಾತು ಸುದ್ದಿ.. ಮಸ್ಟ್ಸ್ವಚ್ಛತೆಯ ಜಾಗೃತಿಗೆ ಮೊದಲ ಪ್ರಾಶಸ್ತ್ಯ

| Published : Mar 14 2024, 02:01 AM IST

ಮಸ್ಟ್ ಜಾಹಿರಾತು ಸುದ್ದಿ.. ಮಸ್ಟ್ಸ್ವಚ್ಛತೆಯ ಜಾಗೃತಿಗೆ ಮೊದಲ ಪ್ರಾಶಸ್ತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಾಪುರ: ನಗರ ಪ್ರದೇಶಗಳಂತೆಯೇ ಪಟ್ಟಣಗಳಲ್ಲಿಯೂ ಶುಚಿತ್ವ ಕಾಪಾಡಲು ಮತ್ತು ಘನ, ದ್ರವ ತ್ಯಾಜ್ಯ ನಿರ್ವಹಣೆ ಮಾಡುವುದರ ಕುರಿತು ಗ್ರಾಮೀಣ ಜನರಿಗೆ ಮನವರಿಕೆ ಮಾಡಲು ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ. ಪಟ್ಟಣಗಳನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಜನತೆಗೆ ಅರಿವು ಮೂಡಿಸಲು ಮೊದಲು ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ನಗರ ಪ್ರದೇಶಗಳಂತೆಯೇ ಪಟ್ಟಣಗಳಲ್ಲಿಯೂ ಶುಚಿತ್ವ ಕಾಪಾಡಲು ಮತ್ತು ಘನ, ದ್ರವ ತ್ಯಾಜ್ಯ ನಿರ್ವಹಣೆ ಮಾಡುವುದರ ಕುರಿತು ಗ್ರಾಮೀಣ ಜನರಿಗೆ ಮನವರಿಕೆ ಮಾಡಲು ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ. ಪಟ್ಟಣಗಳನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಜನತೆಗೆ ಅರಿವು ಮೂಡಿಸಲು ಮೊದಲು ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ಹೇಳಿದರು.

ಪಟ್ಟಣ ಪಂಚಾಯತ ವತಿಯಿಂದ ಘನತಾಜ್ಯ ವಸ್ತು ನಿರ್ವಹಣೆ ಕಾಯಿದೆ - ೨೦೧೬ರಡಿಯಲ್ಲಿ ಕಸದ ನಿರ್ವಹಣೆ ಕುರಿತು ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲೆಂದರಲ್ಲಿ ಕಸ ಎಸೆಯುವುದು ನಿಲ್ಲಬೇಕು. ಜನರು ಘನ ಮತ್ತು ದ್ರವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪಟ್ಟಣಗಳಲ್ಲಿ ಉಂಟಾಗುತ್ತಿರುವ ಅನೈರ್ಮಲ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾವು ಇದೀಗ ಮೊದಲ ಹೆಜ್ಜೆ ಇಡಬೇಕಾಗಿದೆ ಎಂದರು.

ಕಸವನ್ನು ಮೂಲದಲ್ಲೇ ಬೇರ್ಪಡಿಸಬೇಕು. ಮನೆಯಲ್ಲಿ ಹಸಿ, ಒಣ ಕಸವಾಗಿ ಬೇರ್ಪಡಿಸುವುದು ಕಡ್ಡಾಯ. ಆದರೆ, ಅನೇಕ ಮಂದಿ ಬೇರ್ಪಡಿಸದೇ ಹಾಗೆಯೇ ಕಸದ ವಾಹನಗಳಿಗೆ ಹಾಕುತ್ತಾರೆ, ಇದರಿಂದ ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸುವ ಕೆಲಸಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ. ಜನರು ಈ ಬಗ್ಗೆ ಅರಿವು ಪಡೆದುಕೊಳ್ಳಬೇಕಿದೆ ಎಂದು ಪಟ್ಟಣ ಪಂಚಾಯತ ಆರೋಗ್ಯ ನಿರೀಕ್ಷಕ ಭಾಗ್ಯಾಶ್ರೀ ಪಾಟೀಲ ಹೇಳಿದರು.

ಮಾಜಿ ಗ್ರಾಪಂ ಸದಸ್ಯ ಎಂ.ಎಂ.ರಾಮದುರ್ಗ ಮಾತನಾಡಿ, ಪ್ಲಾಸ್ಟಿಕ್ ಸೇರಿದಂತೆ ಇತರ ಕಸಗಳ ರಾಶಿಗೆ ಬೆಂಕಿ ಹಚ್ಚುವ ಪರಿಪಾಠವೂ ಪಟ್ಟಣದಲ್ಲಿ ಹೆಚ್ಚಾಗಿದೆ. ಜನರು ಹಚ್ಚುತ್ತಾರೆ, ಪೌರಕಾರ್ಮಿಕರು ಬೆಂಕಿ ಹಾಕುತ್ತಾರೆ, ಬೆಂಕಿಯಿಂದ ಬರುವ ಹೊಗೆಯಿಂದ ಪರಿಸರ ಮಾಲಿನ್ಯದ ಜೊತೆಗೆ ಮನುಷ್ಯರ ಆರೋಗ್ಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಕಸಕ್ಕೆ ಬೆಂಕಿ ಹೆಚ್ಚುವುದು ಅಪರಾಧ ಎಂಬ ನಿಯಮ ಕಾಗದದ ಮೇಲಿನ ಬರಹವಾಗಿಯಷ್ಟೇ ಉಳಿದಿದೆ ಎಂದರು.

ಈ ವೇಳೆ ವರ್ತಕರ ಸಂಘದ ಅಧ್ಯಕ್ಷ ಸದಾಶಿವ ಉದಪುಡಿ, ಸ್ವಚ್ಛತಾ ರಾಯಭಾರಿ ಸವಿತಾ ಗಂಗಾವತಿ, ಎಂ.ಎಂ.ರಾಮದುರ್ಗ, ಡಾ. ಸಂತೋಷ ಶೆಟ್ಟರ್‌, ಆನಂದ ಹವಳಖೋಡ, ಮಹೇಶ ಹುಗ್ಗಿ, ಗೋವಿಂದ ಕೌಲಗಿ, ಶಿವಾನಂದ ಗಂಗಣ್ಣವರ, ಅರುಣ ನರಗುಂದ, ಈಶ್ವರ ಹವಳಖೋಡ, ರಾಜಪುರೋಹಿತ, ಸದಾಶಿವ ಬೋಳಿಶೆಟ್ಟಿ, ಆರ್‌.ಬಿ.ಜಿ. ಶಾಲೆ ಶಿಕ್ಷಕರು ಹಾಗೂ ಪಟ್ಟಣ ಪಂಚಾಯತ ಆರೋಗ್ಯ ವಿಭಾಗದ ಸಿಬ್ಬಂದಿ ಇದ್ದರು.