ರೈಲ್ವೆ ನಿಲ್ದಾಣ, ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ

| Published : Nov 24 2025, 01:15 AM IST

ರೈಲ್ವೆ ನಿಲ್ದಾಣ, ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಸಿಸಿಯ 78ನೇ ಸಂಸ್ಥಾಪನಾ ದಿನದ ಅಂಗವಾಗಿ ಎನ್‌ಸಿಸಿ ೪ನೇ ಕರ್ನಾಟಕ ಬೆಟಾಲಿಯನ್‌ವತಿಯಿಂದ ಭಾನುವಾರ ನಗರದ ರೈಲ್ವೆ ನಿಲ್ದಾಣ ಹಾಗೂ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ, ತುಮಕೂರು

ಎನ್‌ಸಿಸಿಯ 78ನೇ ಸಂಸ್ಥಾಪನಾ ದಿನದ ಅಂಗವಾಗಿ ಎನ್‌ಸಿಸಿ ೪ನೇ ಕರ್ನಾಟಕ ಬೆಟಾಲಿಯನ್‌ವತಿಯಿಂದ ಭಾನುವಾರ ನಗರದ ರೈಲ್ವೆ ನಿಲ್ದಾಣ ಹಾಗೂ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಈ ಅಭಿಯಾನದಲ್ಲಿ 300 ಎನ್‌ಸಿಸಿ ಕೆಡೆಟ್‌ಗಳು ಹಾಗೂ 14 ಅಧಿಕಾರಿಗಳು ಭಾಗವಹಿಸಿದ್ದರು. ರೈಲ್ವೆ ನಿಲ್ದಾಣದ ಆವರಣ, ರೈಲ್ವೆ ಹಳಿ ಮೇಲಿನ ಕಸ ತೆಗೆದು ಸ್ವಚ್ಛಗೊಳಿಸಿದರು. ಈ ಮೂಲಕ ಪ್ರಯಾಣಿಕರು ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಮಹತ್ವ ಸಾರಿದರು.

ಎನ್‌ಸಿಸಿಯ ಮೇಜರ್ ಅರುಣ್‌ಕುಮಾರ್ ಈ ವೇಳೆ ಮಾತನಾಡಿ, ಏಕತೆ, ಶಿಸ್ತು ಮತ್ತು ಸೇವೆಗೆ ಹೆಸರಾದ ಎನ್‌ಸಿಸಿ ದೊಡ್ಡ ಸಂಘಟನೆ. ಶಾಲಾಕಾಲೇಜು ವಿದ್ಯಾರ್ಥಿಗಳು ಎನ್‌ಸಿಸಿ ಸೇರಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು. ಇಂದು ಎನ್‌ಸಿಸಿಯ 78ನೇ ಸಂಸ್ಥಾಪನಾದಿನದ ಸ್ಮರಣಾರ್ಥ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ವಲಯ ರೈಲ್ವೆ ಮಂಡಳಿ ನಿರ್ದೇಶಕ ಡಾ.ಧನಿಯಾಕುಮಾರ್ ಮಾತನಾಡಿ, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮಹಾತ್ಮ ಗಾಂಧೀಜಿ ಸಾರಿ ಹೇಳಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ್ ಅಭಿಯಾನ ಆರಂಭಿಸಿ ಸ್ವಚ್ಛತೆ ಬಗ್ಗೆ ದೇಶದ ಜನರಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಲು ಕಾರಣರಾಗಿದ್ದಾರೆ. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಎಲ್ಲರೂ ಕಾಳಜಿವಹಿಸಬೇಕು ಎಂದರು.

ಸುಬೇದಾರ್ ಮೇಜರ್ ದಿನೇಶ್ ಸಿಂಗ್, ಸುಬೇದಾರ್ ಯೋಗೀಶ್, ಎನ್‌ಸಿಸಿ ಅಧಿಕಾರಿಗಳಾದ ಕ್ಯಾಪ್ಟನ್ ಜಯಪ್ರಕಾಶ್, ಲೆಫ್ಟಿನೆಂಟ್ ಪ್ರದೀಪ್‌ಕುಮಾರ್, ಲೆಫ್ಟಿನೆಂಟ್ ಶ್ರೀನಿವಾಸ್, ಲೆಫ್ಟಿನೆಂಟ್ ಕವಿತಾ, ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ರಮೇಶ್‌ಬಾಬು ಹಾಗೂ ಜಿಲ್ಲಾ ಆಸ್ಪತ್ರೆ ಸ್ವಚ್ಛತಾ ಕಾರ್ಯದಲ್ಲಿ ಆಸ್ಪತ್ರೆಯ ಆರ್‌ಎಂಓ ಡಾ.ಯಶವಂತ್ ಮೊದಲಾದವರು ಭಾಗವಹಿಸಿದ್ದರು.