ನಗರದ ಪಾಂಡೇಶ್ವರದಲ್ಲಿರುವ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ಸಮುದ್ರ ಮತ್ತು ಕರಾವಳಿ ಸಮೀಕ್ಷಾ ವಿಭಾಗ ‘ಸ್ವಚ್ಛತಾ ಮೇ ಸಹಭಾಗ್, ಸ್ವಚ್ಛ ಭಾರತ, ವಿಕಸಿತ ಭಾರತ’ (ಸ್ವಚ್ಛತೆಯಲ್ಲಿ ಸಹಭಾಗಿತ್ವ, ಸ್ವಚ್ಛ ಭಾರತ, ವಿಕಸಿತ ಭಾರತ) ಎಂಬ ಧ್ಯೇಯವಾಕ್ಯದಡಿ ‘ಸ್ವಚ್ಛತಾ ಹೀ ಸೇವಾ 2026’ ಕಾರ್ಯಕ್ರಮವನ್ನು ಆಚರಿಸಿತು.

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ಸಮುದ್ರ ಮತ್ತು ಕರಾವಳಿ ಸಮೀಕ್ಷಾ ವಿಭಾಗ ‘ಸ್ವಚ್ಛತಾ ಮೇ ಸಹಭಾಗ್, ಸ್ವಚ್ಛ ಭಾರತ, ವಿಕಸಿತ ಭಾರತ’ (ಸ್ವಚ್ಛತೆಯಲ್ಲಿ ಸಹಭಾಗಿತ್ವ, ಸ್ವಚ್ಛ ಭಾರತ, ವಿಕಸಿತ ಭಾರತ) ಎಂಬ ಧ್ಯೇಯವಾಕ್ಯದಡಿ ‘ಸ್ವಚ್ಛತಾ ಹೀ ಸೇವಾ 2026’ ಕಾರ್ಯಕ್ರಮವನ್ನು ಆಚರಿಸಿತು.

ಸಮುದಾಯದ ಭಾಗವಹಿಸುವಿಕೆ ಮತ್ತು ಸಫಾಯಿ ಮಿತ್ರರ (ಸ್ವಚ್ಛತಾ ಕಾರ್ಯಕರ್ತರ) ಕಲ್ಯಾಣದ ಮೇಲೆ ಗಮನಹರಿಸಿ, ಮಂಗಳೂರು ಜಿ.ಎಸ್.ಐ.ಯ ಉಪ ಮಹಾನಿರ್ದೇಶಕ ಮತ್ತು ವಿಭಾಗದ ಮುಖ್ಯಸ್ಥ ಡಾ.ಎನ್.ಎಂ.ಶರೀಫ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.‘ಸಫಾಯಿ ಮಿತ್ರ ಸುರಕ್ಷಾ ಏವಂ ಸಮ್ಮಾನ್ ಶಿಬಿರ’ದ ಭಾಗವಾಗಿ, ಸಫಾಯಿ ಮಿತ್ರರಿಗಾಗಿ ಏಕ-ಗವಾಕ್ಷಿ (ಸಿಂಗಲ್-ವಿಂಡೋ) ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಸಫಾಯಿ ಮಿತ್ರರೊಂದಿಗೆ ಒಂದು ದಿನಎಂಬ ಉಪಕ್ರಮದಡಿ, ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿನ ಅವರ ಸಮರ್ಪಿತ ಸೇವೆ ಹಾಗೂ ಪ್ರಮುಖ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನದ ಭಾಗವಾಗಿ, ಮಂಗಳೂರು ಜಿ.ಎಸ್.ಐ.ಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಂಗಳೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೆಳಗ್ಗೆ 8 ರಿಂದ 9 ರವರೆಗೆ ಒಂದು ದಿನ, ಒಂದು ಗಂಟೆ, ಒಟ್ಟಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಯಂಪ್ರೇರಿತ ಶ್ರಮದಾನ ನಡೆಸಿದರು.