Cleanliness is the duty of every citizen: Manjunath
-ಪೌರ ಕಾರ್ಮಿಕರ ದಿನ
-ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಸಮವಸ್ತ್ರ, ಪರಿಕರ ವಿತರಣೆಕನ್ನಡಪ್ರಭ ವಾರ್ತೆ ಬೀರೂರುಸುತ್ತಲಿನ ಪ್ರದೇಶಗಳು ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳಿಗಿಂತ ಪೌರಕಾರ್ಮಿಕರಿಗೆ ಹೆಚ್ಚು ಇದೆ ಎಂದು ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.
ಗಣಪತಿ ಪೆಂಡಾಲ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸ್ವಚ್ಛತೆ ಎನ್ನುವುದು ಕೇವಲ ಪೌರಕಾರ್ಮಿಕರ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಪೌರಕಾರ್ಮಿಕರ ಅಮೂಲ್ಯ ಸೇವೆ ಮತ್ತು ಶ್ರಮಕ್ಕೆ ಗೌರವ ಸಲ್ಲಿಸೋಣ.
ಪೌರಕಾರ್ಮಿಕರಿಗೆ ಇಲಾಖೆಯಿಂದ ದೊರಕುವ ಎಲ್ಲಾ ಸೌಲಭ್ಯ ನಿಗದಿತ ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿದೆ. ಆರೋಗ್ಯ ತಪಾಸಣಿ, ರಕ್ಷಣಾ ಪರಿಕರ ವಿತರಣಿ ಹಾಗೂ ಇನ್ನಿತರ ಸೌಲಭ್ಯ ಒದಗಿಸಲಾಗಿದೆ ಎಂದರು.ಪುರಸಭೆ ಆಶ್ರಯ ಸಮಿತಿ ಸದಸ್ಯ ಬಿ.ಟಿ. ಚಂದ್ರಶೇಖರ್ ಮಾತನಾಡಿ, ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಪ್ರಶಂಸನೀಯ. ಚಳಿ, ಮಳೆ, ಬಿಸಿಲೆನ್ನದೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪೌರಕಾರ್ಮಿಕರು ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಸ್ವಚ್ಛತೆ ಕಾರ್ಯದ ವೇಳೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸರ್ಕಾರದಿಂದ ಲಭಿಸುವ ಸವಲತ್ತು ಕೇಳಿ ಪಡೆಯಬೇಕು ಎಂದರು.
ಪೌರಸೇವಾ ನೌಕರರ ಸಂಘದ ಅಧ್ಯಕ್ಷೆ ಹೆಚ್.ಜಯಮ್ಮ ಮಾತನಾಡಿ, ಸ್ವಚ್ಚತೆ ಮತ್ತು ನೀರು ಸರಬರಾಜು ಮಾಡುವ ಪೌರಕಾರ್ಮಿಕರು ಯೋಧರಿದ್ದಂತೆ. ಪೌರ ಕಾರ್ಮಿಕರನ್ನು ಸಮಾಜ ನಿಷ್ಕೃಷ್ಟವಾಗಿ ಕಾಣುವುದನ್ನು ಬಿಡಬೇಕು.ಗಡಿಯಲ್ಲಿನ ಯೋಧರು ದೇಶ ರಕ್ಷಣೆ ಕೆಲಸ ಮಾಡಿ ದೇಶ ರಕ್ಷಿಸುತ್ತಾರೆ. ಅದೇ ರೀತಿ ಪೌರಕಾರ್ಮಿಕರು ಪಟ್ಟಣದ ಸ್ವಚ್ಚತೆ ಕೈಗೊಂಡು ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸುತ್ತಾರೆ. ಪೌರ ಕಾರ್ಮಿಕರಿಗೆ ಹಲವು ಮೂಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಮುಖ್ಯವಾಗಿ ಇವರುಗಳಿಗೆ ನಿವೇಶನ, ಯೋಗ್ಯ ಸಂಬಳ, ಭತ್ಯೆಯನ್ನು ಸರ್ಕಾರ ಹೆಚ್ಚಿಸಬೇಕು. ಇವರ ಸಂಕಷ್ಟಗಳಿಗೆ ಶಾಸಕ ಆನಂದ್ ಗಮನಹರಿಸಬೇಕು ಎಂದರು.ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ. ಲಕ್ಷ್ಮಣ ಮಾತನಾಡಿ, ಪೌರಕಾರ್ಮಿಕರ ಆರೋಗ್ಯ ದೃಷ್ಠಿಯಿಂದ ಪುರಸಭೆ ವತಿಯಿಂದ ಕಾಲಕಾಲಕ್ಕೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಜೊತೆಗೆ ಸರ್ಕಾರ ನೀಡಿರುವ ಮುಂಜಾಗ್ರತ ಕ್ರಮ ಕಿಟ್ ತಾವು ಕರ್ತವ್ಯ ನಿರ್ವಹಿಸುವಾಗ ಕಡ್ಡಾಯವಾಗಿ ಧರಿಸಬೇಕೆಂದರು.
ಪುರಸಭೆ ಪರಿಸರ ಅಭಿಯಂತರ ನೂರುದ್ದೀನ್, ಇಂಜಿನಿಯರ್, ವೀಣಾ, ಪೌರ ನೌಕರರ ಸಂಘದ ಗೌರವಾಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷ ಮಲ್ಲೇಶ್, ಖಜಾಂಚಿ ದಿನೇಶ್, ಕಾರ್ಯದರ್ಶಿ ಲೋಕೇಶಪ್ಪ, ಕುಮಾರಿ, ಗಿರಿರಾಜ್, ಸೇರಿದಂತೆ ಪುರಸಭಾ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಇದ್ದರು.ಕಾರ್ಯಕ್ರಮಕ್ಕೆ ಗಣಪತಿ ಪೆಂಡಾಲ್ ನಲ್ಲಿ ಪೂಜೆ ಸಲ್ಲಿಸಿ ನಂತರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಮಹಾತ್ಮಾಗಾಂಧಿ ವೃತ್ತದ ಗಾಂಧಿಪ್ರತಿಮೆ ಹಾಗೂ ಬಸ್‌ನಿಲ್ದಾಣ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಫೋಟೊ: 23ಬೀರೂರು1ಬೀರೂರಿನ ಪುರಸಭೆ ಕಚೇರಿಯ ಸಭಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಪರಿಕರಗಳನ್ನು ಮುಖ್ಯಾಧಿಕಾರಿ ಮಂಜುನಾಥ್ ವಿತರಿಸಿದರು. ಪೌರಸೇವಾ ನೌಕರರ ಸಂಘದ ಅಧ್ಯಕ್ಷೆ ಹೆಚ್.ಜಯಮ್ಮ ಮತ್ತಿತರಿದ್ದರು.