ಸ್ವಚ್ಛತೆ ಮನೆಯಿಂದಲೇ ಪ್ರಾರಂಭವಾಗಬೇಕು: ನಂದೇಟಿರ ರಾಜ ಮಾದಪ್ಪ

| Published : Oct 03 2025, 01:07 AM IST

ಸ್ವಚ್ಛತೆ ಮನೆಯಿಂದಲೇ ಪ್ರಾರಂಭವಾಗಬೇಕು: ನಂದೇಟಿರ ರಾಜ ಮಾದಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷ ವಾರ್ಷಿಕ ಶಿಬಿರದಲ್ಲಿ ಪಕ್ಷಿ ವೈವಿಧ್ಯತೆ ಮತ್ತು ಪ್ರಕೃತಿ ಎಂಬ ವಿಷಯದ ಕುರಿತು ಶಿಬಿರಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮೂರ್ನಾಡು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಕ್ಷಿ ವೈವಿಧ್ಯತೆ ಮತ್ತು ಪ್ರಕೃತಿ ಎಂಬ ವಿಷಯದ ಕುರಿತು ವಿರಾಜಪೇಟೆಯ ವೈದ್ಯರು ಹಾಗೂ ಪಕ್ಷಿ ತಜ್ಞರಾದ ಡಾ. ನರಸಿಂಹನ್ ಎಸ್ ವಿ ಅವರು ಶಿಬಿರಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು.

ವಿವಿಧ ರೀತಿಯ ಪಕ್ಷಿಗಳು, ಪಕ್ಷಿಗಳಿಗೂ ಪ್ರಕೃತಿಗೂ ಇರುವ ಸಂಬಂಧ ಈ ವಿಚಾರಗಳನ್ನು ಸ್ಲೈಡ್ ಶೋ ಮುಖಾಂತರ ವಿದ್ಯಾರ್ಥಿಗಳಿಗೆ ವಿವರಿಸಿದರು. ಕುಟ್ರ ಹಕ್ಕಿ, ಸೂರಕ್ಕಿ, ಕಾಜಾಣ ಮಂಗಟ್ಟೆ ಹಕ್ಕಿ, ರಣಹದ್ದುಗಳು ಇವುಗಳ ಕಾರ್ಯವೈಖರಿ ಮರದ ಆರೋಗ್ಯ, ಪ್ರಕೃತಿ ಮಾನವ ಜೀವಿಗಳ ಉಳಿವಿಗೆ ಕೀಟಗಳ ಅಗತ್ಯತೆ, ಹಕ್ಕಿಗಳಿಂದ ಕೀಟ ನಿಯಂತ್ರಣ, ಪರಾಗಸ್ಪರ್ಶ, ಬೀಜ ಪ್ರಸರಣ, ಹಕ್ಕಿಗಳಿಂದ ಪರಿಸರ ನೈರ್ಮಲ್ಯ, ಹಕ್ಕಿಗಳನ್ನು ನೋಡಿ ವಿಜ್ಞಾನ ಬೆಳೆದದ್ದು ಈ ಮೊದಲಾದ ವಿಚಾರಗಳ ಬಗ್ಗೆ ಚಿತ್ರಗಳನ್ನು ತೋರಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಿದರು.

ಮೂರ್ನಾಡು ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರಾದ ನಂದೇಟಿರ ರಾಜ ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು.

ಮೂರ್ನಾಡು ಗ್ರಾಮಸ್ಥರಾದ ಬಡುವಂಡ ಸೀತಾದೇವಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಈರ ಸುಬ್ಬಯ್ಯ, ಸುಮಾ ಸುಂದರಿ, ಬಾಡಗ ಗ್ರಾಮಸ್ಥರಾದ ಕಂಭೀರಂಡ ಯೋಗೇಶ್, ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಕಿ, ಕಾರ್ಯಾಕ್ರಮಾಧಿಕಾರಿ ದಮಯಂತಿ ಮತ್ತಿತರರಿದ್ದರು.