ಫುಟ್ಪಾತ್ ತೆರವು ಕಾರ್ಯಾಚರಣೆ

| Published : Sep 09 2025, 01:00 AM IST

ಸಾರಾಂಶ

ವ್ಯಾಪಾರಿಗಳಿಗೆ ಒತ್ತುವರಿಯನ್ನು ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಸೂಚನೆ ಪಾಲಿಸದ ವ್ಯಾಪಾರಿಗಳ ವಿರುದ್ದ ಮೆಕದ್ದಮೆ ಹೂಡಲಾಗಿದೆ,

ಕನ್ನಡಪ್ರಭ ವಾರ್ತೆ ನಂಜನಗೂಡು

ಇಲ್ಲಿನ ರಾಷ್ಟ್ರಪತಿ ರಸ್ತೆಯಲ್ಲಿ ಪಾದಾಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಶೆಡ್ ಗಳು ಹಾಗು ಪುಟ್ ಬಾತ್ ಮಾರ್ಗವನ್ನು ಆವರಿಸಿಕೊಂಡಿದ್ದ ಅಂಗಡಿ ಮುಂಭಾಗದ ಸೆಲ್ಟರ್ ಗಳನ್ನು ಸೋಮವಾರ ನಗರಸಭೆ ಅಧಿಕಾರಿಗಳು ಜೆ.ಸಿ.ಬಿ ಯಂತ್ರ ಬಳಸಿ ತೆರವುಗೊಳಿಸಿದರು.

ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ನಗರಸಭೆ ಆಯುಕ್ತ ವಿಜಯ್ ಹಾಗೂ ಸಂಚಾರ ಪೊಲೀಸ್ ಠಾಣೆಯ ಎಸ್ಐ ಕೃಷ್ಣಕಾಂತ ಕೋಳಿ ನೇತೃತ್ವದಲ್ಲಿ ಪುಟ್ಬಾತ್ ಒತ್ತುವರಿಯನ್ನು ತೆರವುಗೊಳಿಸಲಾಯಿತು.

ಎಸ್ಐ ಕೃಷ್ಣಕಾಂತ ಕೋಳಿ ಸುದ್ದಿಗಾರರೊಂದಿಗೆ ಮಾತನಾಡಿ, ವ್ಯಾಪಾರಿಗಳಿಗೆ ಒತ್ತುವರಿಯನ್ನು ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಸೂಚನೆ ಪಾಲಿಸದ ವ್ಯಾಪಾರಿಗಳ ವಿರುದ್ದ ಮೆಕದ್ದಮೆ ಹೂಡಲಾಗಿದೆ, ತೆರವು ಕಾರ್ಯಾಚರಣೆ ಮಂಗಳವಾರವು ಕೂಡ ಮುಂದುವರೆಯಲಿದೆ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಪೊಲೀಸ್ ಠಾಣೆ ವತಿಯಿಂದ ವಾಹನ ನಿಲ್ದಾಣಕ್ಕೆ ಜಾಗ ಗುರುತಿಸಿ ಸೂಚನಾಫಲಕಗಳನ್ನು ನೆಡಲಾಗಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರ ವಿರುದ್ದ ಕ್ರಮವಹಿಸಲಾಗುವುದು.

ಪುಟ್ಬಾತ್ ರಸ್ತೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ವ್ಯಾಪಾರಸ್ಥರಿಗೆ ಸಂಚಾರ ಪೊಲೀಸ್ ನಿಯಮ 92 (ಡಿ) ಕರ್ನಾಟಕ ಪೊಲೀಸ್ ಆಕ್ಟ್ ರಿತ್ಯಾ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ತೆರವು ಕಾರ್ಯಚರಣೆಯಲ್ಲಿ ನಗರಸಭೆ ಪರಿಸರ ಮತ್ತು ನೈರ್ಮಲ್ಯಾಧಿಕಾರಿ ಮೈತ್ರಿಯ ದೇವಿ, ಆರೋಗ್ಯಾಧಿಕಾರಿ ವಸಂತ್, ಆದರ್ಶ್ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಇದ್ದರು.