ಮನೆ ಪಂಚಾಂಗ ತೆರವು: ಅರಣ್ಯ ಇಲಾಖೆ- ಶಾಸಕರ ಮಧ್ಯೆ ಮಾತಿನ ಚಕಮಕಿ
KannadaprabhaNewsNetwork | Published : Oct 08 2023, 12:02 AM IST
ಮನೆ ಪಂಚಾಂಗ ತೆರವು: ಅರಣ್ಯ ಇಲಾಖೆ- ಶಾಸಕರ ಮಧ್ಯೆ ಮಾತಿನ ಚಕಮಕಿ
ಸಾರಾಂಶ
ಮನೆ ಪಂಚಾಂಗ ತೆರವು: ಶಾಸಕ - ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಕಳೆಂಜ ಗ್ರಾಮದಲ್ಲಿ ಶುಕ್ರವಾರ, ಮನೆಗಾಗಿ ನಿರ್ಮಿಸಿದ್ದ ಪಂಚಾಗವನ್ನು ಅರಣ್ಯಾಧಿಕಾರಿಗಳು ಕಿತ್ತೆಸೆದಿರುವ ವಿದ್ಯಮಾನ ನಡೆದಿತ್ತು. ಸ್ಥಳ ಪರಿಶೀಲನೆಗೆ ಶನಿವಾರ ಆಗಮಿಸಿದ ಶಾಸಕ ಹರೀಶ್ ಪೂಂಜ , ಘಟನೆ ಕುರಿತಂತೆ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಸಚಿವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಚಿವರ ಸೂಚನೆಯಂತೆ ಯಥಾಸ್ಥಿತಿಯನ್ನು ಕಾಪಾಡುವಂತೆ ತಿಳಿಸಲಾಯಿತು. ಘಟನೆ ವಿವರ: ಕಳೆಂಜ ಗ್ರಾಮದ ಅಮ್ಮಿನಡ್ಕ ಕುದ್ದಮನೆ ದೇವಣ್ಣ ಗೌಡ ಎಂಬವರ ಪುತ್ರ ಲೋಲಾಕ್ಷ ಕುಟುಂಬ ಸುಮಾರು 150 ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣಕ್ಕೆಂದು ಪಂಚಾಂಗದ ಕೆಲಸ ಮಾಡಿದ್ದರು. ಆದರೆ ಅ.6ರಂದು ಅರಣ್ಯ ಇಲಾಖೆ ಮನೆ ನಿರ್ಮಾಣಕ್ಕೆ ಹಾಕಿದ್ದ ಪಂಚಾಂಗವನ್ನು ಕಿತ್ತೆಸೆದು ಬಡ ಕುಟುಂಬದ ಮುಂದೆ ದರ್ಪ ತೋರಿರುವ ಬಗ್ಗೆ ತೀವ್ರ ನೊಂದು ಆತ್ಮಹತ್ಯೆಗೆ ಮುಂದಾಗಿದ್ದರು. ಈ ವಿಚಾರ ತಿಳಿದ ಶಾಸಕ ಹರೀಶ್ ಪೂಂಜ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸ್ಥಳದಲ್ಲೆ ಶೆಡ್ ನಿರ್ಮಾಣಕ್ಕೆ ಮುಂದಾದರು. ಈ ವೇಳೆ ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. 309 ಸರ್ವೆ ನಂಬರ್‌ನಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಆದರೆ ಇದು ಅರಣ್ಯ ಎಂದಿರುವುದರಿಂದ ಅರಣ್ಯ ಇಲಾಖೆ ಪಂಚಾಂಗ ಕೆಡವಿದೆ, ಮನೆ ಮಂದಿಗೆ ಯಾವುದೇ ನೋಟಿಸ್ ಮಾಹಿತಿ ನೀಡದೆ ತೆರವುಗೊಳಿಸಿದ್ದಾರೆ ಎಂದು ಶಾಸಕರಲ್ಲಿ ಊರವರು ದೂರು ಹೇಳಿದರು. ಈ ಸಂದರ್ಭ ಮಾತನಾಡಿದ ಶಾಸಕರು ಮನೆ ನಿರ್ಮಾಣದ ಜಾಗ ಅರಣ್ಯ ಇಲಾಖೆಗೆ ಸೇರಿದ ಜಾಗವಲ್ಲ ಇಲ್ಲಿ ಅಡ್ಡಿಪಡಿಸುವ ಮೊದಲು ಕಂದಾಯ ಇಲಾಖೆ ಹಾಗೂ ಅರಣ್ಯ ಜಂಟಿ ಸರ್ವೇ ನಡೆಸಿ, ಇಲ್ಲಿ ತಾತ್ಕಾಲಿಕ ಮನೆ ನಿರ್ಮಾಣ ಮಾಡುತ್ತೇವೆ. ನೀವು ಜಾಗದ ಸರ್ವೆ ನಡೆಸಿ ಅದರಲ್ಲಿ ಮನೆ ನಿರ್ಮಾಣದ ಜಾಗ ಅರಣ್ಯ ಎಂದಾದರೆ ನಾನೇ ಮನೆ ತೆರವುಗೊಳಿಸಲು ಸೂಚಿಸುತ್ತೇನೆ ಎಂದು ಶಾಸಕರು ಅರಣ್ಯಾಧಿಕಾರಿಗಳಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಸಮವಸ್ತ್ರ ಧರಿಸದೆ ಘಟನಾ ಸ್ಥಳಕ್ಕೆ ಆಗಮಿಸಿದ ಆರ್.ಎಫ್.ಒ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡು ಅವರನ್ನು ಅಮಾನತು ಮಾಡುವಂತೆ ಎ.ಸಿ.ಎಫ್.ಗೆ ಸೂಚನೆ ನೀಡಿದರು. ಸ್ಥಳದಿಂದಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ ಶಾಸಕರು ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಸಚಿವರು, ಸದ್ಯಕ್ಕೆ ತೆರವು ಮಾಡದೆ ಯಥಾಸ್ಥಿತಿ ಕಾಪಾಡಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಜಾಗದ ಸರ್ವೇ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿದರು. ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ ಉಪ್ಪಿನಂಗಡಿ ಅರಣ್ಯಧಿಕಾರಿ ಜಯಪ್ರಕಾಶ್, ಕಳೆಂಜ ಉಪ ವಲಯರಣ್ಯಾಧಿಕಾರಿ ಪ್ರಶಾಂತ್, ಧರ್ಮಸ್ಥಳ ಎಸ್.ಐ. ಸ್ಥಳದಲ್ಲಿದ್ದರು. ಬಾಕ್ಸ್ಯಥಾಸ್ಥಿತಿಗೆ ಸಚಿವ ಖಂಡ್ರೆ ಸೂಚನೆಅರಣ್ಯ ಜಮೀನಿನಲ್ಲಿ ಒತ್ತುವರಿ ಮಾಡಿ ಮನೆಕಟ್ಟಿದರೆ ನ್ಯಾಯಾಲಯ ಕ್ರಮ ಕೈಗೊಳ್ಳುತ್ತದೆ..ಇದೀಗ ನಿಮ್ಮ ವ್ಯಾಪ್ತಿಯಲ್ಲಿ 100 ವರ್ಷ ಹಿಂದೆ ಮನೆ ಕಟ್ಟಿ ಕೂತಿದ್ದೀರಿ ಎಂಬ ಮಾಹಿತಿ ನೀಡಿದ್ದೀರಿ. ಈಗ ಯಥಾಸ್ಥಿತಿ ಇರಲಿ. ಮೇಲಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ಸಮೀಕ್ಷೆ ಮಾಡಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಶಾಸಕ ಹರೀಶ್ ಪೂಂಜಾರಿಗೆ ಭರವಸೆ ನೀಡಿದರು. ಅರಣ್ಯಾದಿಕಾರಿಗಳಿಗೂ ಮೌಖಿಕ ಅದೇಶ ನೀಡಿದರು. ಬಾಕ್ಸ್ ಬಡವರು ಮನೆಕಟ್ಟಿದರೆ ಅವರನ್ನು ಬೆದರಿಸಿ ಅವರ ಮೇಲೆ ಅಧಿಕಾರಿಗಳು ಅಧಿಕಾರ ಚಲಾಯಿಸುತ್ತಾರೆ. ಬಡವರಿಗೆ ಅನ್ಯಾಯವಾದರೆ ಸಹಿಸೋದಿಲ್ಲ. ಬಡವರಿಗೋಸ್ಕರ ಜೈಲಿಗೆ ಹೋಗಲೂ ಸಿದ್ಧ. ಕಳೆಂಜ ಗ್ರಾಮದ ಅಮ್ಮಿಗದ್ದೆ ಎಂಬಲ್ಲಿ 100 ವರ್ಷಕ್ಕು ಹಿಂದೆ ನೂರೈವತ್ತಕ್ಕು ಅದಿಕ ಕುಟುಂಬಗಳು ವಾಸಿಸುತ್ತಿವೆ. ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡೋದಿಲ್ಲ. ಅರಣ್ಯ, ಕಂದಾಯ, ಡಿ.ಪಿಆರ್‌ಎಲ್ ಜಂಟಿ ಸರ್ವೆ ಮಾಡಿ ಬಳಿಕವೇ ತೀರ್ಮಾನಿಸಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಕಳೆಂಜ ಗ್ರಾಮದಲ್ಲಿ ಶುಕ್ರವಾರ, ಮನೆಗಾಗಿ ನಿರ್ಮಿಸಿದ್ದ ಪಂಚಾಗವನ್ನು ಅರಣ್ಯಾಧಿಕಾರಿಗಳು ಕಿತ್ತೆಸೆದಿರುವ ವಿದ್ಯಮಾನ ನಡೆದಿತ್ತು. ಸ್ಥಳ ಪರಿಶೀಲನೆಗೆ ಶನಿವಾರ ಆಗಮಿಸಿದ ಶಾಸಕ ಹರೀಶ್ ಪೂಂಜ , ಘಟನೆ ಕುರಿತಂತೆ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಸಚಿವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಚಿವರ ಸೂಚನೆಯಂತೆ ಯಥಾಸ್ಥಿತಿಯನ್ನು ಕಾಪಾಡುವಂತೆ ತಿಳಿಸಲಾಯಿತು. ಘಟನೆ ವಿವರ: ಕಳೆಂಜ ಗ್ರಾಮದ ಅಮ್ಮಿನಡ್ಕ ಕುದ್ದಮನೆ ದೇವಣ್ಣ ಗೌಡ ಎಂಬವರ ಪುತ್ರ ಲೋಲಾಕ್ಷ ಕುಟುಂಬ ಸುಮಾರು 150 ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣಕ್ಕೆಂದು ಪಂಚಾಂಗದ ಕೆಲಸ ಮಾಡಿದ್ದರು. ಆದರೆ ಅ.6ರಂದು ಅರಣ್ಯ ಇಲಾಖೆ ಮನೆ ನಿರ್ಮಾಣಕ್ಕೆ ಹಾಕಿದ್ದ ಪಂಚಾಂಗವನ್ನು ಕಿತ್ತೆಸೆದು ಬಡ ಕುಟುಂಬದ ಮುಂದೆ ದರ್ಪ ತೋರಿರುವ ಬಗ್ಗೆ ತೀವ್ರ ನೊಂದು ಆತ್ಮಹತ್ಯೆಗೆ ಮುಂದಾಗಿದ್ದರು. ಈ ವಿಚಾರ ತಿಳಿದ ಶಾಸಕ ಹರೀಶ್ ಪೂಂಜ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸ್ಥಳದಲ್ಲೆ ಶೆಡ್ ನಿರ್ಮಾಣಕ್ಕೆ ಮುಂದಾದರು. ಈ ವೇಳೆ ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. 309 ಸರ್ವೆ ನಂಬರ್‌ನಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಆದರೆ ಇದು ಅರಣ್ಯ ಎಂದಿರುವುದರಿಂದ ಅರಣ್ಯ ಇಲಾಖೆ ಪಂಚಾಂಗ ಕೆಡವಿದೆ, ಮನೆ ಮಂದಿಗೆ ಯಾವುದೇ ನೋಟಿಸ್ ಮಾಹಿತಿ ನೀಡದೆ ತೆರವುಗೊಳಿಸಿದ್ದಾರೆ ಎಂದು ಶಾಸಕರಲ್ಲಿ ಊರವರು ದೂರು ಹೇಳಿದರು. ಈ ಸಂದರ್ಭ ಮಾತನಾಡಿದ ಶಾಸಕರು ಮನೆ ನಿರ್ಮಾಣದ ಜಾಗ ಅರಣ್ಯ ಇಲಾಖೆಗೆ ಸೇರಿದ ಜಾಗವಲ್ಲ ಇಲ್ಲಿ ಅಡ್ಡಿಪಡಿಸುವ ಮೊದಲು ಕಂದಾಯ ಇಲಾಖೆ ಹಾಗೂ ಅರಣ್ಯ ಜಂಟಿ ಸರ್ವೇ ನಡೆಸಿ, ಇಲ್ಲಿ ತಾತ್ಕಾಲಿಕ ಮನೆ ನಿರ್ಮಾಣ ಮಾಡುತ್ತೇವೆ. ನೀವು ಜಾಗದ ಸರ್ವೆ ನಡೆಸಿ ಅದರಲ್ಲಿ ಮನೆ ನಿರ್ಮಾಣದ ಜಾಗ ಅರಣ್ಯ ಎಂದಾದರೆ ನಾನೇ ಮನೆ ತೆರವುಗೊಳಿಸಲು ಸೂಚಿಸುತ್ತೇನೆ ಎಂದು ಶಾಸಕರು ಅರಣ್ಯಾಧಿಕಾರಿಗಳಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಸಮವಸ್ತ್ರ ಧರಿಸದೆ ಘಟನಾ ಸ್ಥಳಕ್ಕೆ ಆಗಮಿಸಿದ ಆರ್.ಎಫ್.ಒ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡು ಅವರನ್ನು ಅಮಾನತು ಮಾಡುವಂತೆ ಎ.ಸಿ.ಎಫ್.ಗೆ ಸೂಚನೆ ನೀಡಿದರು. ಸ್ಥಳದಿಂದಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ ಶಾಸಕರು ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಸಚಿವರು, ಸದ್ಯಕ್ಕೆ ತೆರವು ಮಾಡದೆ ಯಥಾಸ್ಥಿತಿ ಕಾಪಾಡಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಜಾಗದ ಸರ್ವೇ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿದರು. ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ ಉಪ್ಪಿನಂಗಡಿ ಅರಣ್ಯಧಿಕಾರಿ ಜಯಪ್ರಕಾಶ್, ಕಳೆಂಜ ಉಪ ವಲಯರಣ್ಯಾಧಿಕಾರಿ ಪ್ರಶಾಂತ್, ಧರ್ಮಸ್ಥಳ ಎಸ್.ಐ. ಸ್ಥಳದಲ್ಲಿದ್ದರು. ಸಚಿವ ಖಂಡ್ರೆ ಸೂಚನೆ ಅರಣ್ಯ ಜಮೀನಿನಲ್ಲಿ ಒತ್ತುವರಿ ಮಾಡಿ ಮನೆಕಟ್ಟಿದರೆ ನ್ಯಾಯಾಲಯ ಕ್ರಮ ಕೈಗೊಳ್ಳುತ್ತದೆ..ಇದೀಗ ನಿಮ್ಮ ವ್ಯಾಪ್ತಿಯಲ್ಲಿ 100 ವರ್ಷ ಹಿಂದೆ ಮನೆ ಕಟ್ಟಿ ಕೂತಿದ್ದೀರಿ ಎಂಬ ಮಾಹಿತಿ ನೀಡಿದ್ದೀರಿ. ಈಗ ಯಥಾಸ್ಥಿತಿ ಇರಲಿ. ಮೇಲಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ಸಮೀಕ್ಷೆ ಮಾಡಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಶಾಸಕ ಹರೀಶ್ ಪೂಂಜಾರಿಗೆ ಭರವಸೆ ನೀಡಿದರು. ಅರಣ್ಯಾದಿಕಾರಿಗಳಿಗೂ ಮೌಖಿಕ ಅದೇಶ ನೀಡಿದರು. ಬಡವರು ಮನೆಕಟ್ಟಿದರೆ ಅವರನ್ನು ಬೆದರಿಸಿ ಅವರ ಮೇಲೆ ಅಧಿಕಾರಿಗಳು ಅಧಿಕಾರ ಚಲಾಯಿಸುತ್ತಾರೆ. ಬಡವರಿಗೆ ಅನ್ಯಾಯವಾದರೆ ಸಹಿಸೋದಿಲ್ಲ. ಬಡವರಿಗೋಸ್ಕರ ಜೈಲಿಗೆ ಹೋಗಲೂ ಸಿದ್ಧ. ಕಳೆಂಜ ಗ್ರಾಮದ ಅಮ್ಮಿಗದ್ದೆ ಎಂಬಲ್ಲಿ 100 ವರ್ಷಕ್ಕು ಹಿಂದೆ ನೂರೈವತ್ತಕ್ಕು ಅದಿಕ ಕುಟುಂಬಗಳು ವಾಸಿಸುತ್ತಿವೆ. ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡೋದಿಲ್ಲ. ಅರಣ್ಯ, ಕಂದಾಯ, ಡಿ.ಪಿಆರ್‌ಎಲ್ ಜಂಟಿ ಸರ್ವೆ ಮಾಡಿ ಬಳಿಕವೇ ತೀರ್ಮಾನಿಸಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.