ಹೃದಯಕ್ಕೆ ಹತ್ತಿರ ಎಂದರೆ ಕಷ್ಟಕ್ಕೆ ನೆರವಾಗುವುದು: ಪೇಜಾವರ ಶ್ರೀ

| Published : Dec 30 2024, 01:02 AM IST

ಹೃದಯಕ್ಕೆ ಹತ್ತಿರ ಎಂದರೆ ಕಷ್ಟಕ್ಕೆ ನೆರವಾಗುವುದು: ಪೇಜಾವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಚಲನಚಿತ್ರ ನಟ ಡಾ.ಶ್ರೀಧರ್ ಮಾತನಾಡಿ, ಶ್ರೀರಾಮ ಸನಾತನ ದೊಡ್ಡ ಶಕ್ತಿ. ಹೃದಯವನ್ನು ಬೆಸೆಯುವ, ಅರಳಿಸುವ, ಜೋಡಿಸುವ, ಎಲ್ಲರನ್ನೂ ಸಮ್ಮಿಲಿಸುವ ಕಾರ್ಯ ಹೃದಯ ಸಮ್ಮೇಳನದ ಮೂಲಕ ಆಗಿದೆ ಎಂದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಮಾತೆ, ಮಾತೃ ಭೂಮಿಯನ್ನು ಗೌರವಿಸುವವರು ನಾವಾಗಬೆಕು. ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ ಗೌರವಿಸುವವರು ದೇವರಿಗೆ ಪ್ರಿಯರು. ಹೃದಯಕ್ಕೆ ಹತ್ತಿರ ಎಂದರೆ, ಕಷ್ಟಗಳಿಗೆ ನೆರವಾಗುವುದು ಎಂದು ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.

ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ ಬೆಂಗಳೂರು ಆಶ್ರಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆದ ತ್ರಿದಿನಗಳ ಹೃದಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ರಾಮನಂತಿರಬೇಕು. ರಾವಣನಂತಲ್ಲ. ರಾಮ ಜಗತ್ತಿಗೆ ಇಂದಿಗೂ ಶ್ರೇಷ್ಠ. ರಾಮ ಎಲ್ಲರ ಹೃದಯಕ್ಕೂ ಆಪ್ತನಾಗಿದ್ದ ಎಂದರು. ವಿಶ್ವ ಹೃದಯ ಸಮ್ಮೇಳನವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇದರ ಮೂಲಕ ವಿಶ್ವಭ್ರಾತೃತ್ವ ಸಂಘಟಿಸೋಣ. ರಾಮನ ವ್ಯಕ್ತಿತ್ವ ಎಲ್ಲರೂ ನಮಗೆಲ್ಲ ಪ್ರೇರಣೆ ಎಂದರು.

ಚಲನಚಿತ್ರ ನಟ ಡಾ.ಶ್ರೀಧರ್ ಮಾತನಾಡಿ, ಶ್ರೀರಾಮ ಸನಾತನ ದೊಡ್ಡ ಶಕ್ತಿ. ಹೃದಯವನ್ನು ಬೆಸೆಯುವ, ಅರಳಿಸುವ, ಜೋಡಿಸುವ, ಎಲ್ಲರನ್ನೂ ಸಮ್ಮಿಲಿಸುವ ಕಾರ್ಯ ಹೃದಯ ಸಮ್ಮೇಳನದ ಮೂಲಕ ಆಗಿದೆ ಎಂದರು.

ಶಿವಮೊಗ್ಗ ಸದ್ಗುರು ಶ್ರೀಸತ್ ಉಪಾಸಿ ದಿವ್ಯಾಶ್ರಮದ ಶ್ರೀ ಬ್ರಹ್ಮಾನಂದ ತೀರ್ಥ ಭಿಕ್ಷು, ಹಿರಿಯೂರು ಶ್ರೀ ದತ್ತಾಶ್ರಮ ಶ್ರೀ ಕ್ಷೇತ್ರದ ಶ್ರೀ ಸುಬೋಧಾನಂದ ಸ್ವಾಮೀಜಿ, ಹೊಸದುರ್ಗ ಶ್ರೀ ಸದ್ಗುರು ಸೇವಾಶ್ರಮದ ಶ್ರೀ ಪುರುಷೋತ್ತಮ ಶ್ರೀ ಶೀಕಾಂತಾನಂದ ಭಗವಾನ್ ಸರಸ್ವತಿ ಮಹಾರಾಜ್, ಟ್ರಸ್ಟ್‌ನ ಸತೀಶ್, ಮನೋಜ್ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಎಸ್. ರಾಮಚಂದ್ರ ಸ್ವಾಗತಿಸಿದರು.ಧನ್ಯತಾ ಪುರಸ್ಕಾರ ಪ್ರದಾನ: ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ ವತಿಯಿಂದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಧನ್ಯತಾ ಪುರಸ್ಕಾರ ಸಮರ್ಪಿಸಿ, ಗೌರವಿಸಲಾಯಿತು. ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಶಿಬಿ ಮಲ್ಲಾರ ಅವರು ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಹಾಗೂ ಇತತರಿಗೆ ತಾವು ಬಿಡಿಸಿದ ಕಲಾ ಚಿತ್ರಗಳನ್ನು ನೀಡಿದರು. ವಿಶ್ವಪ್ರಸನ್ನ ಸ್ವಾಮೀಜಿ ಅವರು ಶಿಬಿ ಮಲ್ಲಾರ ಅವರನ್ನು ಗೌರವಿಸಿ, ಆಶೀರ್ವದಿಸಿದರು. ಕಲಾವಿದ ಕೆ. ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಗುರು ಪೂಜೆ ಜರುಗಿತು.