ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾರೇಹಳ್ಳಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಪ್ರತಿಭಾ ಕಾರಂಜಿ, ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಬಸಪ್ಪನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 20 ಮಕ್ಕಳು ಬಹುಮಾನ ಗಳಿಸುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ.ಹನೂರು ಶೈಕ್ಷಣಿಕ ವಲಯದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಸ್ಪರ್ಧೆಯಲ್ಲಿ 9 ಪ್ರಥಮ, 10 ದ್ವೀತಿಯ, 1 ತೃತೀಯ ಬಹುಮಾನಕ್ಕೆ ಬಸಪ್ಪನದೊಡ್ಡಿ ಶಾಲಾ ಮಕ್ಕಳು ಭಾಜನರಾಗಿದ್ದಾರೆ. ಸ್ಪರ್ಧಾ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಕೀರ್ತಿ ವಾಸನ್, ಆಕಾಶ್, ನವಿತ್, ಸಲಾಂ, ರಿಹಾನ್ ಪಾಶಾ, ಮುಸ್ಕಾನ್, ಫರ್ ಹೀನ್, ರೆಹಮಾನ್, ಮೇಘನ, ಹಿದಾಯತ್ ಉಲ್ಲಾ, ಅಭಿಷೇಕ್, ಅಯೋಷಾ ಭಾನು, ಅಭಿಷೇಕ, ಸಿಂಚನ, ಫಮೇಹನಿ, ಅಯಾನ್ ಪಾಶ, ಫರ್ಜೈನ್ ತಂಡ, ಉಮೈಹನಿ ಮತ್ತು ತಂಡದ ಮಕ್ಕಳು ಸಾಧನೆಗೈದ ವಿದ್ಯಾರ್ಥಿಗಳಾಗಿದ್ದು ಕ್ಲೈಮಾಡಲ್ ತಯಾರಿಕೆ, ಆಂಗ್ಲಭಾಷಾ ಕಂಠಪಾಠ ಸ್ಪರ್ಧೆ, ಧಾರ್ಮಿಕ ಪಠಣ, ಹಿಂದಿ ಕಂಠಪಾಠ, ಪ್ರಬಂಧ ರಚನೆ, ಕನ್ನಡ ಭಾಷಣ, ಹಿಂದಿ ಭಾಷಣ, ಅರೇಬಿಕ್ (ಧಾರ್ಮಿಕ ಪಠಣ), ಭಾವಗೀತೆ, ಚಿತ್ರಕಲೆ, ಗಝಲ್, ಕವನ ವಾಚನ, ಕ್ವಿಜ್, ಕವಾಲಿ ಹೀಗೆ ಅನೇಕ ಸ್ಪರ್ಧೆಗಳಲ್ಲಿ ಬಸಪ್ಪನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಡಶಾಲೆಯ 20ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಬಹುಮಾನ ಗಳಿಸಿದ್ದು ಸಾಧಕ ಮಕ್ಕಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಬಸಪ್ಪನದೊಡ್ಡಿ ಶಾಲೆಯ ಮುಖ್ಯಶಿಕ್ಷಕ ವೀರಪ್ಪ, ಮತ್ತು ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಭಿನಂದಿಸಿದೆ.