ಕ್ಲಸ್ಟರ್‌ ಮಾದರಿ ಚಿಕ್ಕಪೇಟೆ ರಸ್ತೆಗಳಿಗೀಗ ಹೊಸ ಲುಕ್‌

| Published : Mar 27 2025, 01:10 AM IST

ಕ್ಲಸ್ಟರ್‌ ಮಾದರಿ ಚಿಕ್ಕಪೇಟೆ ರಸ್ತೆಗಳಿಗೀಗ ಹೊಸ ಲುಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಲ್ಲೊಂದು ರಸ್ತೆ, ಇಲ್ಲೊಂದು ರಸ್ತೆಯನ್ನು ವೈಟ್‌ ಟಾಪಿಂಗ್‌ ಮಾಡಿ, ಒಳ ಚರಂಡಿ, ಕೇಬಲ್‌ ಅಳವಡಿಕೆಗೆ ಡಕ್ಸ್‌ ಮಾಡುತ್ತಿದ್ದ ಬಿಬಿಎಂಪಿಯು ಇದೀಗ, ನಗರದಲ್ಲಿ ಮೊದಲ ಬಾರಿಗೆ ಕ್ಲಸ್ಟರ್‌ ಮಾದರಿಯಲ್ಲಿ ಚಿಕ್ಕಪೇಟೆಯ ಪ್ರಮುಖ ರಸ್ತೆಗಳಿಗೆ ಹೊಸ ಹೊಳಪು ನೀಡುವುದಕ್ಕೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಲ್ಲೊಂದು ರಸ್ತೆ, ಇಲ್ಲೊಂದು ರಸ್ತೆಯನ್ನು ವೈಟ್‌ ಟಾಪಿಂಗ್‌ ಮಾಡಿ, ಒಳ ಚರಂಡಿ, ಕೇಬಲ್‌ ಅಳವಡಿಕೆಗೆ ಡಕ್ಸ್‌ ಮಾಡುತ್ತಿದ್ದ ಬಿಬಿಎಂಪಿಯು ಇದೀಗ, ನಗರದಲ್ಲಿ ಮೊದಲ ಬಾರಿಗೆ ಕ್ಲಸ್ಟರ್‌ ಮಾದರಿಯಲ್ಲಿ ಚಿಕ್ಕಪೇಟೆಯ ಪ್ರಮುಖ ರಸ್ತೆಗಳಿಗೆ ಹೊಸ ಹೊಳಪು ನೀಡುವುದಕ್ಕೆ ಮುಂದಾಗಿದೆ.

ಬಿಬಿಎಂಪಿಯ ಯೋಜನಾ ವಿಭಾಗವೂ ಚಿಕ್ಕಪೇಟೆಯ 6 ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಈಗಾಗಲೇ ₹45.2 ಕೋಟಿ ವೆಚ್ಚದಲ್ಲಿ ಟೆಂಡರ್‌ ಆಹ್ವಾನಿಸಲಾಗಿದ್ದು, ಗುತ್ತಿಗೆದಾರರನ್ನು ನೇಮಕ ಮಾಡಿ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ಅನುಮೋದನೆ ನೀಡುತ್ತಿದಂತೆ ಕಾಮಗಾರಿ ಆರಂಭಿಸುವುದಕ್ಕೆ ನಿರ್ಧರಿಸಲಾಗಿದೆ.

ವ್ಯಾಪಾರಿಗಳೊಂದಿಗೆ ಸಭೆ:

ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಹಗಲು ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸುವುದಕ್ಕೂ ಮುನ್ನ ಅಲ್ಲಿನ ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ಕಾಮಗಾರಿ ನಡೆಸುವ ಕುರಿತು ರೂಪರೇಷೆ ಸಿದ್ಧಪಡಿಸಲಾಗುವುದು. ಒಟ್ಟು 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ, ಹೆಚ್ಚಿನ ಸಮಯ ಬೇಕಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಯಾವೆಲ್ಲಾ ರಸ್ತೆ ಅಭಿವೃದ್ಧಿ

ಬಿಬಿಎಂಪಿಯು ಮೊದಲ ಹಂತದಲ್ಲಿ ಚಿಕ್ಕಪೇಟೆ ಪ್ರದೇಶದ ವ್ಯಾಪ್ತಿಯ ಬಿಟಿ ರಸ್ತೆ, ರಂಗಸ್ವಾಮಿ ದೇವಸ್ಥಾನ ರಸ್ತೆ, ಸುಲ್ತಾನ್‌ ಪೇಟೆ ಮುಖ್ಯ ರಸ್ತೆ, ಕಿಲಾರಿ ರಸ್ತೆ, ಹಾಸ್ಪೆಟಲ್‌ ರಸ್ತೆ, ಟ್ಯಾಂಕ್‌ ಬಂಡ್‌ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ನಿರ್ಧರಿಸಲಾಗಿದೆ. ಈ ಆರು ರಸ್ತೆಗಳು ಸುಮಾರು 4 ಕಿ.ಮೀ ಉದ್ದ ಹೊಂದಿವೆ.