ಬನಹಟ್ಟಿಯ ಮಂಗಳವಾರ ಪೇಟೆಯ ವಿಠ್ಠಲ ದೇವಸ್ಥಾನ ಹತ್ತಿರ ಪ್ರತಿಷ್ಠಾಪಿಸಿದ ಕಾಮಣ್ಣ ಮೂರ್ತಿ ನೋಡುಗರ ಗಮನ ಸೆಳೆಯಿತು.
ರಬಕವಿ-ಬನಹಟ್ಟಿ: ಬನಹಟ್ಟಿಯ ಮಂಗಳವಾರ ಪೇಟೆಯ ವಿಠ್ಠಲ ದೇವಸ್ಥಾನ ಹತ್ತಿರ ಪ್ರತಿಷ್ಠಾಪಿಸಿದ ಕಾಮಣ್ಣ ಮೂರ್ತಿ ನೋಡುಗರ ಗಮನ ಸೆಳೆಯಿತು. ಮಂಗಳವಾರ ಹೋಳಿ ಹಬ್ಬದ ನಿಮಿತ್ತ ಕೂಡ್ರಿಸಲಾದ ಕಾಮಣ್ಣ ವಿಮಾನವೇರಿ ಕುಳಿತರೆ, ಒಂದೆಡೆ ಸಿಎಂ ಸಿದ್ದರಾಮಯ್ಯ ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಭಾವಚಿತ್ರ ಅಂಟಿಸಿ ದಿಲ್ಲಿ ಚಲೋ ಹೈಕಮಾಂಡ್ ಭೇಟಿ, ಮುಖ್ಯಮಂತ್ರಿ ನಾನಾ? ನೀನಾ? ಎಂದು ಬರೆದಿದ್ದು, ಮುಂದೆ ಖಾಲಿ ಕುರ್ಚಿ ಚಿತ್ರ ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಪ್ರತಿಬಿಂಬಿಸಿತು.