ಸಿಎಂ ಆಗಮನ ಸ್ಥಳ ಪರಿಶೀಲಿಸಿದ ಎಸ್ಪಿ ಸೋನಾವಣೆ

| Published : Jan 28 2024, 01:18 AM IST

ಸಾರಾಂಶ

ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ಯಾವುದೇ ಭದ್ರತಾ ಲೋಪವಾಗದಂತೆ ಮುನ್ನೆಚ್ಚರಿಕೆಯಾಗಿ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಫೆ.2ರಂದು ನಾನಾ ಅಭಿವೃದ್ಧಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ಯಾವುದೇ ಭದ್ರತಾ ಲೋಪವಾಗದಂತೆ ಮುನ್ನೆಚ್ಚರಿಕೆಯಾಗಿ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

ಎಂಜಿವಿಸಿ ಕಾಲೇಜಿನ ಆವರಣದಲ್ಲಿನ ಹೆಲಿಪ್ಯಾಡ್‌, ವಿಬಿಸಿ ಹೈಸ್ಕೂಲ್‌ ಮೈದಾನದಲ್ಲಿ ಜರುಗುವ ಬೃಹತ್‌ ಕಾರ್ಯಕ್ರಮದ ವೇದಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮುಖ್ಯಮಂತ್ರಿಗಳ ಆಗಮನದ ಮಹಾದ್ವಾರ ಬಳಿ ಸಾರ್ವಜನಿಕರು ಹಾಗೂ ಯಾವುದೇ ಖಾಸಗಿ ವಾಹನಗಳು ನಿಲ್ಲದಂತೆ ಸಂಪೂರ್ಣ ಬಿಗಿ ಬಂದೋಬಸ್ತ್‌ ಒದಗಿಸಬೇಕು. ಮತಕ್ಷೇತ್ರದಿಂದ ಕಾರ್ಯಕ್ರಮ ಬರುವ ಸಾರ್ವಜನಿಕರ ಪ್ರತ್ಯೇಕ ಮಹಾದ್ವಾರ ನಿರ್ಮಿಸುವುದರ ಜೊತೆಗೆ ಸುತ್ತಲು ಬ್ಯಾರಿಕೇಡ್ ಅಳವಡಿಸಬೇಕು ಎಂಬುವುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಿದರು.

ಈ ವೇಳೆ ಸಿಪಿಐ ಮಲ್ಲಿಕಾರ್ಜುನ ತಳಸಿಗೇರಿ, ತಹಶೀಲ್ದಾರ ಬಲರಾಮ ಕಟ್ಟಿಮನಿ, ಪಿಎಸೈ ಸಂಜಯಕುಮಾರ ತಿಪ್ಪಾರೆಡ್ಡಿ, ಕ್ರೈಂ ಪಿಎಸೈ ಮನ್ನಾಬಾಯಿ ಇತರರು ಇದ್ದರು.