ಸಿಎಂ ಸಿದ್ದರಾಮಯ್ಯಗೆ ಕನ್ನಡರಾಮಯ್ಯ ಎಂದು ಹೆಸರಿಡಬೇಕು: ಸಚಿವ ತಂಗಡಗಿ

| Published : Oct 06 2024, 01:23 AM IST

ಸಿಎಂ ಸಿದ್ದರಾಮಯ್ಯಗೆ ಕನ್ನಡರಾಮಯ್ಯ ಎಂದು ಹೆಸರಿಡಬೇಕು: ಸಚಿವ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

CM Siddaramaiah should be named Kannadaramaiah: Minister Thangadagi

ಕನ್ನಡಪ್ರಭ ವಾರ್ತೆ ರಾಯಚೂರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡರಾಮಯ್ಯ ಎಂದು ಹೆಸರಿಡಬೇಕೆಂದು ಹಿಂದುಳಿದ ವರ್ಗಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು. ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಯಚೂರು ಜಿಲ್ಲಾಡಳಿತದಿಂದ ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಕಾರ್ಯಕ್ರಮದಲ್ಲಿ ಮಾತನಾಡಿ, ಐದು ವರ್ಷಗಳ ಹಿಂದೆ ಮಾಜಿ ಸಿಎಂ ದೇವರಾಜ ಅರಸು ಅವರ ಕಾಲದಲ್ಲಿ ಕರ್ನಾಟಕ ನಾಮಕರಣಗೊಂಡಿತು ಇದೀಗ ಆಧುನಿಕ ದೇವರಾಜ ಅರಸು ಎನಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರ ಆಡಳಿತದ ಸಮಯದಲ್ಲಿಯೇ ಸರ್ಕಾರದಿಂದ ಕರ್ನಾಟಕ ಸಂಭ್ರಮ 50 ಆಚರಿಸಲಾಗುತ್ತಿದೆ. ಅಷ್ಟೇ ಅಲ್ಲದೇ ರಾಜ್ಯದ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾದವರು ಸಿದ್ದರಾಮಯ್ಯ ಅವರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸಹಿ ಕನ್ನಡದಲ್ಲಿ ಇದೆ. ಕಡತಗಳು ಸಹ ಕನ್ನಡದಲ್ಲಿ ಇರಬೇಕು ಎಂದು ಆದೇಶವನ್ನು ಸಹ ಮಾಡಿದ್ದಾರೆ. ನ.1ರೊಳಗಾಗಿ ವಿಧಾನಸೌಧದ ಮುಂದೆ ಭುವನೇಶ್ವರಿ ಪ್ರತಿಮೆ ಮಾಡಲು ಹೇಳಿದ್ದು, ಸಿಎಂ ಸಿದ್ದರಾಮಯ್ಯ ಅವರು ಅಲ್ಲದೆ ವಿಧಾನಸೌಧದಲ್ಲಿ ನಮಗೆ ಸಂಧಿ, ವ್ಯಾಕರಣದ ಬಗ್ಗೆ ತಿಳಿಸುತ್ತಾರೆ. ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಅದ್ದರಿಂದ ಅವರನ್ನು ಕನ್ನಡರಾಮಯ್ಯ ಎಂದು ಕರೆಯಬೇಕು ಎಂದರು.

ಹೆಸರಾಯ್ತು ಕರ್ನಾಟಕ, ಉಸಿರಾಯ್ತು ಕನ್ನಡ ಎಂಬ ಕಾರ್ಯಕ್ರಮದಡಿ ಈ ವರ್ಷ ನ.1 ರೊಳಗಾಗಿ ನಾಲ್ಕು ಕಾರ್ಯಕ್ರಮ ಮಾಡಲು ಚಿಂತನೆ ಮಾಡಿದ್ದೇವೆ. ಮೊದಲ ಕಾರ್ಯಕ್ರಮ ಮೈಸೂರಿನಿಂದ ಮಾಡಲಾಗಿದೆ. ಮೈಸೂರಿನಲ್ಲಿ 15 ಗೋಷ್ಠಿಗಳು ಮಾಡಿಲಾಯಿತು. ಮಹಾರಾಷ್ಟ್ರದ ಗಡಿ ಭಾಗದಲ್ಲಿ ಯಶ್ವಸಿ ಕನ್ನಡ ಕಾರ್ಯಕ್ರಮ ಮಾಡಿಲಾಗಿದ್ದು, ಇದೀಗ ಕಲ್ಯಾಣ ಕರ್ನಾಟಕದ ಗಡಿ ಭಾಗವಾದ ರಾಯಚೂರಿನಲ್ಲಿ ಮೂರನೇ ಕಾರ್ಯಕ್ರಮವಾಗಿ ಗೋಕಾಕ್‌ ಚಳವಳಿ ಹಿನ್ನೋಟ-ಮುನ್ನೋಟ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.

--------------------

05ಕೆಪಿಆರ್‌ಸಿಆರ್ 12: ರಾಯಚೂರಿನ ಕೃಷಿ ವಿವಿಯಲ್ಲಿ ನಡೆದ ಗೋಕಾಕ್‌ ಚಳವಳಿ ಹಿನ್ನೋಟ-ಮುನ್ನೋಟ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

=================

(ಹೆಚ್ಚುವರಿ ಚಿತ್ರ )05ಕೆಪಿಆರ್‌ಸಿಆರ್ 13: ರಾಯಚೂರಿನ ಕೃಷಿ ವಿವಿಯಲ್ಲಿ ನಡೆದ ಗೋಕಾಕ್‌ ಚಳವಳಿ ಹಿನ್ನೋಟ-ಮುನ್ನೋಟ ಕಾರ್ಯಕ್ರಮನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು.