ಸಾರಾಂಶ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಜನಸಾಮಾನ್ಯರನ್ನು ಶೋಷಣೆ ಮಾಡಿ ಅಗತ್ಯ ಪದಾರ್ಥಗಳ ಬೆಲೆ ಹೆಚ್ಚಿಸುತ್ತ ಬಂದಿದೆ.
ಕನ್ನಡಪ್ರಭ ವಾರ್ತೆ ಯಮಕನಮರಡಿ
ರಾಜ್ಯ ಸರ್ಕಾರ ಧೋರಣೆ ಮತ್ತು ಬೆಲೆ ಏರಿಕೆ ಖಂಡಿಸಿ ಯಮಕನಮರಡಿಯಲ್ಲಿ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜು ಹುಂದ್ರಿ ನೇತೃತ್ವದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಬಸ್‌ನಿಲ್ದಾಣದಿಂದ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಉಪತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿ ಡಿ.ಬಿ.ಮಠಪತಿಗೆ ಮನವಿ ಸಲ್ಲಿಸಿದರು.
ಉತ್ತರ ಮಂಡಲ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ದಕ್ಷಿಣ ಮಂಡಲ ಅಧ್ಯಕ್ಷ ಅಪ್ಪಯ್ಯ ಜಾಜರಿ, ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ ನಾಶಿಪುಡಿ, ಸಚಿನ ಶಿಂದೆ, ಭರಮಾ ಸನದಿ, ರಮೇಶ ತಹಸೀಲ್ದಾರ್, ಚಂದ್ರಕಾಂತ ನಾರವೇಕರ್, ಶಾನುರ್ ಮುಚ್ಚಂಡಿ, ಸಂಗೀತಾ ಮಸೂತಿ, ಚೇತನ್ ಪಾಟೀಲ್, ರವಿ ಹಂಜಿ, ಈರಣ್ಣ ಗುರವ, ಬಸವರಾ ಪೂಜೇರಿ, ಬಾಳಯ್ಯ ತವಗಮಠ, ಯಲ್ಲಪ್ಪ ಗಡಕರಿ, ರಾಜನ ಮಠಪತಿ, ಮುರುಗೇಶ ಹಿರೇಮಠ, ಈರಪ್ಪ ಪಾಟೀಲ, ಶೆಟ್ಟು ಪೂಜೇರಿ, ಬಸವಣ್ಣಿ ಬಳೆಗಾರ, ಪರಶುರಾವ ಪಾಟೀಲ, ಚಂದ್ರಕಾಂತ ಕಾಪಸಿ ಇತರರಿದ್ದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಜನಸಾಮಾನ್ಯರನ್ನು ಶೋಷಣೆ ಮಾಡಿ ಅಗತ್ಯ ಪದಾರ್ಥಗಳ ಬೆಲೆ ಹೆಚ್ಚಿಸುತ್ತ ಬಂದಿದೆ. ಅಲ್ಲದೆ ವಿದ್ಯುತ್ ದರ ಹೆಚ್ಚಿಸಿ ಜನಸಾಮಾನ್ಯರ ಬೆನ್ನೆಲುಬು ಮುರಿಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಿದ್ದರಾಮಯ್ಯನವರ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ.
-ಬಸವರಾಜು ಹುಂದ್ರಿ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ.