ಬಜೆಟ್‌ ಸಭೆ ಕಾರಣ ಮಳಿಗೆ ಹರಾಜು ವಿಳಂಬ

| Published : Apr 08 2025, 12:33 AM IST

ಸಾರಾಂಶ

ಸ್ಲಂ ಬೋರ್ಡ್ ನಿಂದ 20 ಜನರಿಗೆ ಹಕ್ಕುಪತ್ರ ಬಂದಿದೆ ಅದರ ಬಗ್ಗೆ ಸ್ಲಂ ಭೋರ್ಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀಡಲು ಕ್ರಮ ವಹಿಸುತ್ತೇನೆ., ಪ್ರಧಾನವಾಗಿ ಪಿಂಚಣಿ, ವೃದ್ಧಾಪ್ಯ ವೇತನ, ಭಾಗ್ಯಲಕ್ಷ್ಮೀ ಹಣ ಬ್ಯಾಂಕಿನಲ್ಲಿ ವಿಳಂಭ, ನಿವೇಶನ ಕೊಡಿ, ಖಾತಾ ಸಮಸ್ಯೆ ಪರಿಹರಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮೂಲಕ ಕ್ಷೇತ್ರದ ನಗರದ ವಾರ್ಡ್ ಗಳ ಭೇಟಿ ಮಾಡುವ ಮೂಲಕ ಎಲ್ಲ ಮತದಾರರ ಸಮಸ್ಯೆಗಳನ್ನ ಆಲಿಸುವ ಯೋಜನೆಯಡಿ 8 ನೇ ವಾರ್ಡ್ ನಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಶಾಸಕ ಪ್ರದೀಪ್ ಈಶ್ವರ್ ಭೇಟಿ ನೀಡಿ ವಾರ್ಡ್ ನಲ್ಲಿ ಸಂಚರಿಸಿ ಮನೆ,ಮನೆ ಬೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ನಗರದಲ್ಲಿ ಈವರೆಗೂ 13 ವಾರ್ಡ್ ಗಳ ಭೇಟಿ ಮುಗಿದಿದೆ. ಇಂದು 8ನೇ ವಾರ್ಡ್ ನ ಅರ್ಧ ಭಾಗ ಮುಗಿದಿದೆ ನಾಳೆ ಉಳಿದ ಅರ್ಧ ಬಾಗ ಪರ್ಯಟನೆ ಮಾಡಿ ಮುಗಿಸುತ್ತೇನೆ. 16 ಮನೆಗಳಿಗೆ ಯುಜಿಡಿ ಸಂಪರ್ಕಕೇಳಿದ್ದು ಅವರಿಗೆ ಸಂಪರ್ಕಕ್ಕೆ ಲೈನ್ ಹಾಕಲು ಹೇಳಿದ್ದೇನೆ. ಎಂಟರಿಂದ ಹತ್ತು ಬೀದಿ ದೀಪಗಳನ್ನು ಕೇಳಿದ್ದಾರೆ. ಅದನ್ನು ಸಂಜೆಯ ಒಳಗಾಗಿ ಹಾಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

20 ಜನರಿಗೆ ಹಕ್ಕುಪತ್ರ

ಸ್ಲಂ ಬೋರ್ಡ್ ನಿಂದ 20 ಜನರಿಗೆ ಹಕ್ಕುಪತ್ರ ಬಂದಿದೆ ಅದರ ಬಗ್ಗೆ ಸ್ಲಂ ಭೋರ್ಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀಡಲು ಕ್ರಮ ವಹಿಸುತ್ತೇನೆ., ಪ್ರಧಾನವಾಗಿ ಪಿಂಚಣಿ, ವೃದ್ಧಾಪ್ಯ ವೇತನ, ಭಾಗ್ಯಲಕ್ಷ್ಮೀ ಹಣ ಬ್ಯಾಂಕಿನಲ್ಲಿ ವಿಳಂಭ, ನಿವೇಶನ ಕೊಡಿ, ಖಾತಾ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.

ನಗರಸಭೆ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಮುಂದೆ ಹೋಗಲು ಕಾರಣ ಬಜೆಟ್ ಮೀಟಿಂಗ್ ಮತ್ತು ಹರಾಜು ಪ್ರಕ್ರಿಯೆ ಒಂದೇ ದಿನ ಇಟ್ಟು ಕೊಂಡಿದ್ದರಿಂದ ಮುಂದೆ ಹೋಗಿದೆ. ಬಜೆಟ್ ಮಾರ್ಚ್ ನಲ್ಲಿಯೇ ಮುಗಿದು ಅಂಗೀಕಾರ ವಾಗ ಬೇಕಿತ್ತು. ಇಲ್ಲದಿದ್ದಲ್ಲಿ ಪೌರ ಕಾರ್ಮಿಕರಿಗೆ, ಅಧಿಕಾರಿಗಳಿಗೆ ಸಂಬಳ ಮತ್ತು ನಗರದ ಸ್ವಚ್ಚತೆ,ಅಭಿವೃದ್ದಿಗೆ ಹಣ ಬಿಡುಗಡೆಯಾಗದೆ ತೊಂದರೆಯಾಗುತ್ತಿತ್ತು. ಈಗಲೂ ಸಹಾ ಒಂದುವಾರ ವಿಳಂಬವಾಗಿದೆ ಅಷ್ಟೇ ಹೊರತು ನನಗೂ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಮುಂದೆ ಹೋವುದಕ್ಕೂ ಸಂಬಂಧವಿಲ್ಲ ಎಂದರು.

ಮೀಸಲು ಅರಣ್ಯವ್ಯಾಪ್ತಿಗೆ ಜಮೀನು

ಡೀಮ್ಡ್ ಫಾರೆಸ್ಟ್ ಬಗ್ಗೆ ಸಂಸದ ಡಾ.ಕೆ.ಸುಧಾಕರ್ ಹೇಳಿಕೆಗೆ ಪ್ರತಿಕ್ರಯಿಸಿ ಅಂದು ಜಿಲ್ಲಾಧಿಕಾರಿ ಯಾಗಿದ್ದುದು ಆರ್.ಲತ. ಅಂದು ಸಚಿವರಾಗಿದ್ದುದು ಇಂದಿನ ಸಂಸದರು. ರೈತರ ಜಮೀನುಗಳನ್ನು ಡೀಮ್ಡ್ ಫಾರೆಸ್ಟ್ ಗೆ ಯಾರು ಸೇರಿಸಿಬಿಟ್ಟಿದ್ದಾರೆ ಎಂದು ಅವರೇ ಹೇಳ ಬೇಕು.ಆಗ ಬಿಜೆಪಿ ಸರ್ಕಾರ ಇತ್ತು, ಯಾರು ಮುಖ್ಯಮಂತ್ರಿಗಳು ಇದ್ದರು ಎಂಬುದನ್ನು ತಿಳಿದುಕೊಂಡು ಮಾಹಿತಿ ಕೊಡಲು ಹೇಳಿ ಎಂದರು.

ಈ ವೇಳೆ ಪೌರಾಯುಕ್ತ ಮನ್ಸೂರ್ ಆಲಿ, ನಗರಸಭೆ ಸದಸ್ಯರಾದ ಕಣಿತಹಳ್ಳಿ ವೆಂಕಟೇಶ್,ಅಂಬರೀಶ್,ಅಫ್ಜಲ್, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್,ಮುಖಂಡರಾದ ವೆಂಕಟ್, ಪೆದ್ದನ್ನ, ಬಾಬಾಜಾನ್ ಮತ್ತಿತರರು ಇದ್ದರು.