ನಾಳೆ ಹಟ್ಟಿ ಚಿನ್ನದಗಣಿಗೆ ಸಿಎಂ

| Published : Aug 04 2025, 11:45 PM IST

ನಾಳೆ ಹಟ್ಟಿ ಚಿನ್ನದಗಣಿಗೆ ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರ ವ್ಯಾಪ್ತಿಯ ಹಟ್ಟಿ ಚಿನ್ನದಗಣಿ ಪಟ್ಟಣಕ್ಕೆ ಕಾರ್ಮಿಕರಿಗಾಗಿ ನಾನಾ ಅಭಿವೃದ್ಧಿ ಕಾಮಗಾರಿಗಳು ಶಂಕುಸ್ಥಾಪನೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ. ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರು ಯಶಸ್ವಿ ಮಾಡೋಣ ಎಂದು ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿನ್ನದ ಗಣಿ ಕಂಪನಿಯ ಅನುದಾನದಲ್ಲಿ ಹಟ್ಟಿ ಪಟ್ಟಣದಲ್ಲಿ ಕಾರ್ಮಿಕರಿಗಾಗಿ 912 ವಸತಿ ಸಮುಚ್ಛಯಗಳ ನಿರ್ಮಾಣ, ₹25 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣದ ಅಭಿವೃದ್ಧಿ ಸೇರಿದಂತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಕ್ಷೇತ್ರಕ್ಕೆ ಆಗಮಿಸುವ ಮುಖ್ಯ ಮಂತ್ರಿಗಳನ್ನು ಅದ್ಧೂರಿಯಾಗಿ ಸ್ವಾಗತಿಸೋಣ ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕೆಂದು ಕರೆ ನೀಡಿದರು.

ಎಂಎಲ್ಸಿ ಚುನಾವಣೆಯಲ್ಲಿ ಶರಣಗೌಡ ಬಯ್ಯಾಪುರ ಗೆಲುವಿಗೆ ಅವರಿ ಹಿಂದೆ ಈಗ ಓಡಾಡುತ್ತಿರುವವರಿಗೆ ಜವಾಬ್ದಾರಿ ಕೊಟ್ಟಿದ್ದೆವು. ಅದರಂತೆ ಕೆಲಸ ಮಾಡಿದ್ದರಿಂದ ಶರಣ ಗೌಡ ಬಯ್ಯಾಪುರ ಗೆದ್ದು ಎಂಎಲ್ಸಿಯಾದರೂ ನಾವು ಬೆಂಬಲಿಸದೇ ಇದ್ದರೆ ಇವರೆಲ್ಲಿ ಎಂಎಲ್ಸಿ ಆಗುತ್ತಿದ್ದರು. ಹೌದು, ನಾನು ವ್ಯಾಪಾರ ಜೊತೆಗೆ ರಾಜಕಾರಣ ಮಾಡುತ್ತೇನೆ. ರಾಜಕಾರಣದ ಮೂಲಕ ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ಆದರೆ ಎಂಎಲ್ಸಿ ಬಯ್ಯಾಪುರ ತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವುದಿಲ್ಲ ಎಂದು ತಿವಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ನಾಯಕ, ಶಿವಶಂಕರಗೌಡ, ಪುರಸಭೆ ಸದಸ್ಯ ಮಹ್ಮದ್ ರಫಿ, ಹಿರಿಯ ಮುಖಂಡ ನ್ಯಾಯವಾದಿ ಮುದಕಪ್ಪ, ಎಂ.ಲಿಂಗರಾಜ ಹಟ್ಟಿ ಸೇರಿದಂತೆ ಇದ್ದರು.