ದಕ್ಷಿಣ ಕನ್ನಡಕ ಜಿಲ್ಲಾ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ನಡೆಯುವ 5ನೇ ವರ್ಷದ ಉಡುಪಿ - ಉಚ್ಚಿಲ ದಸರಾ - 2026ರಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ.

ಉಚ್ಚಿಲ : ದಕ್ಷಿಣ ಕನ್ನಡಕ ಜಿಲ್ಲಾ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ನಡೆಯುವ 5ನೇ ವರ್ಷದ ಉಡುಪಿ - ಉಚ್ಚಿಲ ದಸರಾ - 2026ರಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ.

11ರಂದು ಆರಂಭವಾಗಲಿರುವ ಉಡುಪಿ - ಉಚ್ಚಿಲ ದಸರದ 2ನೇ ದಿನ ಮಹಿಳಾ ದಸರವನ್ನಾಗಿ ಆಚರಿಸಲಾಗುತ್ತಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಿದ ಅವರನ್ನು ಮೊಗವೀರ ಸಮುದಾಯದ ಪರವಾಗಿ ಅಭಿನಂದಿಸಲಾಗುತ್ತದೆ. ಮೊಗವೀರ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರ ಗಮನ ಸೆಳೆದು, ಮುಂದಿನ ಬಜೆಟ್‌ನಲ್ಲಿ ಅವುಗಳಿಗೆ ಪರಿಹಾರ ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜಿ ಡಾ. ಜಿ. ಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ವಹಿಸಲಿದ್ದು, ಗೌರವ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಭಾಗವಹಿಸುತ್ತಾರೆ, ಜಿಲ್ಲೆಯ ಸಂಸದರು, ಶಾಸಕರು ಉಪಸ್ಥಿತರಿರುತ್ತಾರೆ, ಸುಮಾರು 10 ಸಾವಿರ ಮಹಿಳೆಯರು ಈ ಮಹಿಳಾ ದಸರದಲ್ಲಿ ಭಾಗವಹಿಸುತ್ತಾರೆ ಎಂದರು.

ಪ್ರತಿನಿತ್ಯ ಸಚಿವರ ಭೇಟಿ: ರಾಜ್ಯದ ಎಲ್ಲ ಸಚಿವರನ್ನು ಉಡುಪಿ - ಉಚ್ಚಿಲಾ ದಸರಾಕ್ಕೆ ಆಹ್ವಾನಿಸಲಾಗಿದೆ. 11ರಿಂದ 21ರ ನಡುವೆ ಒಬ್ಬೊಬ್ಬ ಸಚಿವರು ಭಾಗವಹಿಸದ್ದಾರೆ ಎಂದು ಡಾ. ಶಂಕರ್ ಹೇಳಿದರು.

ಉಡುಪಿ - ಉಚ್ಚಿಲಾ ದಸರಾ ಮಹೋತ್ಸವದ ಅಂಗವಾಗಿ ರಾ.ಹೆ.ಯಲ್ಲಿ 10 ಕಿ.ಮೀ. ವಿನೂತನ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡುತ್ತಿದ್ದು, 10ರಂದು ಸಂಜೆ ಇದನ್ನು ಉದ್ಘಾಟಿಸಲಾಗುತ್ತದೆ.

11ರಂದು ಬೆಳಗ್ಗೆ 9.30ಕ್ಕೆ ಶಾರದೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆ ನಡೆಯಲಿದ್ದು, 10.30ಕ್ಕೆ ರಾಜ್ಯ ಮುಜರಾಯಿ, ಬಂದರು, ಮೀನುಗಾರಿಕಾ ಸಚಿವ ಕೆ.ಎಸ್.ಬಸವಂತಪ್ಪ ಉಡುಪಿ - ಉಚ್ಚಿಲಾ ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು.

ನಿತ್ಯ ವೈವಿಧ್ಯ ಕಾರ್ಯಕ್ರಮ: 11ರಂದು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ - ನೃತ್ಯೋತ್ಸವ, 13ರಂದು ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ, 15ರಂದು ರಂಗೋಲಿ ಸ್ಪರ್ಧೆ, 16ರಂದು ಮುದ್ದಮಕ್ಕಳಿಗಾಗಿ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, 17ರಂದು ಚಿತ್ರಕಲಾ ಸ್ಪರ್ಧೆ ಮತತ್ತು ಪೊಣ್ಣುಪಿಲಿ ನಲಿಕೆ ಸ್ಪರ್ಧೆ, ಸಂಜೆ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ, 18ರಂದು ದಸರಾ ಕವಿಗೋಷ್ಠಿ ಮತ್ತು ಪುರುಷರ ಹುಲಿವೇಷ ಸ್ಪರ್ಧೆ - ಪಿಲಿ ಪಂಥ, ಸಾಮೂಹಿಕ ಕುಣಿತ ಭಜನೆ ಸ್ಪರ್ಧೆ, 20ರಂದು ರಾತ್ರಿ ದಾಂಡಿಯಾ ರಾಸ್ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳ‍ು ನಡೆಯಲಿವೆ.ಶೋಭಾಯಾತ್ರೆ: ಕೊನೆಯ ದಿನ ವಿಜಯದಶಮಿಯಂದು ಅ.11ರಂದು ಮಧ್ಯಾಹ್ನ 3 ಗಂಟೆಯಿಂದ ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳ ವಿರ್ಸಜನಾ ಮೆರವಣಿಗೆ - ವಿಶ್ವಪ್ರಸಿದ್ಧ ಶೋಭಾಯಾತ್ರೆ ನಡೆಯಲಿದೆ. ಉಚ್ಚಿಲ ಮಹಾಲಕ್ಷ್ಮೀ ದೇವಾಲಯದಿಂದ ಹೊರಟು ಕಾಪು ದೀಪಸ್ತಂಭದ ಬಳಿ ಕಡಲಿನಲ್ಲಿ ವಿಸರ್ಜನೆ ನಡೆಯುತ್ತದೆ. ಈ ಸಂದರ್ಭದಲ್ಲಿ ಕಾಶಿಯಿಂದ ಬಂದ ಪಂಡಿತರು ಗಂಗಾರತಿ ನಡೆಸಲಿದ್ದಾರೆ. ಸುಮಾರು 1000 ಮಂದಿ ಮಹಿಳೆಯರು ದುರ್ಗೆಯರಿಗೆ ಆರತಿ ಎತ್ತಿ ಬೀಳ್ಕೊಡಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಪ್ರ.ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಮಲ್ಪೆ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಎಸ್.ಸುವರ್ಣ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೆರ ಮಲ್ಪೆ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ಮೊಗವೀರ ಮಹಿಳಾ ಮಹಾಜನ ಸಂಘದ ಅಧ್ಯಕ್ಷ ಕವಿತಾ ಶರತ್ ಮತ್ತು ಪ್ರಮುಖರಾದ ಸುಗುಣಾ, ಮನೋಜ್ ಕಾಂಚನ್, ಸತೀಶ್ ಕುಂದರ್, ಸತೀಶ್ ಅಮೀನ್ ಪಡುಕರೆ ಮುಂತಾದವರಿದ್ದರು.