ಸಾರಾಂಶ
ಹುಕ್ಕೇರಿ : ಮೂರು ದಶಕಕ್ಕೂ ಹೆಚ್ಚು ಕಾಲ ರಾಜಕೀಯದ ಮೂಲಕ ಜನಸೇವೆಯಲ್ಲಿ ತೊಡಗಿರುವ ಮುತ್ಸದ್ಧಿ ರಾಜಕಾರಣಿ ಸಚಿವ ಸತೀಶ ಜಾರಕಿಹೊಳಿ ಮುಂದಿನ ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಒಲಿದು ಬರಲಿದೆ ಎಂದು ಯರನಾಳ ಬ್ರಹ್ಮಾನಂದ ಸ್ವಾಮೀಜಿ ಭವಿಷ್ಯ ನುಡಿದರು.
ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆಡಿಪಿ) ಸಮಿತಿ ನೂತನ ಸದಸ್ಯ, ಸಚಿವ ಜಾರಕಿಹೊಳಿ ಆಪ್ತ ಬಸವರಾಜ ಕೋಳಿ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಮಿತಭಾಷಿ ಸತೀಶ ಸಿಎಂ ಆಗುವ ಎಲ್ಲ ಅರ್ಹತೆ ಹೊಂದಿದ್ದಾರೆ ಎಂದರು.ಕೆಡಿಪಿ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿರುವ ಬಸವರಾಜ ಕೋಳಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ವಿಶ್ವಾಸವಿದೆ. ಈ ಮೂಲಕ ಜಿಲ್ಲೆಯ ಎಸ್ಸಿ, ಎಸ್ಟಿ ಜನರ ಏಳಿಗೆಗೆ ಸೇವೆ ಸಲ್ಲಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಈ ಹಿಂದೆಯೂ ಬಸವರಾಜ ಕೋಳಿ ಜಿಲ್ಲಾಮಟ್ಟದ ಎಸ್ಸಿ,ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾಗಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.
ಸಚಿವರ ಆಪ್ತ ಸಹಾಯಕ ಪಾಂಡು ಮನ್ನಿಕೇರಿ, ಮುಖಂಡರಾದ ಮುಕುಂದ ಮಠದ, ವೃಷಭ ಪಾಟೀಲ, ಸಂತೋಷ ಮುಡಸಿ, ಸುರೇಶ ಹುಣಶ್ಯಾಳಿ, ದಿಲೀಪ ಹೊಸಮನಿ, ಮಹೇಶ ಹಟ್ಟಿಹೊಳಿ, ಮೌನೇಶ ಪೋತದಾರ, ಗೋಪಾಲ ಮಠದ, ಶಾನೂಲ್ ತಹಶೀಲ್ದಾರ, ಅವಿನಾಶ ನಲವಡೆ, ತಬರೇಜ್ ಮತ್ತಿತರರು ಉಪಸ್ಥಿತರಿದ್ದರು.
ರಾಜಕೀಯ ಜೊತೆಗೆ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ, ಔದ್ಯೋಗಿಕ ಕ್ಷೇತ್ರಕ್ಕೂ ಸತೀಶ ಜಾರಕಿಹೊಳಿ ಅನನ್ಯ ಕೊಡುಗೆ ನೀಡಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದ ಸರ್ವ ಸಮುದಾಯಗಳನ್ನು ಸಮಾನವಾಗಿ ಕಾಣುತ್ತ ನೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದಾರೆ. ದಲಿತ ಸಮಾಜಕ್ಕೆ ಸಿಎಂ ನೀಡಬೇಕೆನ್ನುವ ಕೂಗು ಕೇಳಿ ಬರುತ್ತಿದ್ದು, ಮುಂದಿನ ಬಾರಿ ಸತೀಶ ಜಾರಕಿಹೊಳಿ ಸಿಎಂ ಸ್ಥಾನ ಒಲಿದು ಬರಲಿದೆ.
;Resize=(128,128))
;Resize=(128,128))
;Resize=(128,128))