ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವರ ಹತ್ಯಕಾಂಡ ನಡೆದ ವಿವಿಧ ದುರಂತ ಸ್ಥಳಗಳಲ್ಲಿ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿತು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ರಾಜಸೀಟ್‌ನಲ್ಲಿ ಸಾವಿರಾರು ಕೊಡವರನ್ನು ಬರ್ಬರವಾಗಿ ಹತ್ಯೆಗೈದು ತಾಳತ್ತ್ಮನೆ ಕಡಿದಾದ ಕಂದಕಕ್ಕೆ ಕೆಳದಿ ರಾಜರು ತಳ್ಳಿದರು. ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆಯ ಪಿತೂರಿಯಲ್ಲಿ ಕೊಡವ ನಾಯಕರ ದಾರುಣ ಹತ್ಯೆಗಳು ನಡೆದವು. ದೇವಟ್‌ಪರಂಬ್‌ನಲ್ಲಿ ಟಿಪ್ಪು ಸುಲ್ತಾನ್‌ನ ಪಡೆಗಳು, ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದಳದೊಂದಿಗೆ ಸೇರಿಸಿಕೊಂಡು ಸಾವಿರಾರು ಕೊಡವರನ್ನು ಕಗ್ಗೊಲೆ ನಡೆಸಿದವು. ಈ ಸಂತ್ರಸ್ತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಸಿಎನ್‌ಸಿ ಪ್ರಾರ್ಥಿಸಿದೆ ಮತ್ತು ಗುರಿಗಳ ಸಾಧನೆಗೆ ದಿವ್ಯ ಆತ್ಮಗಳಿಂದ ಆಶೀರ್ವಾದವನ್ನು ಕೋರಲಾಗಿದೆ ಎಂದರು.ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ನಂದಿನೆರವಂಡ ರೇಖಾ ನಾಚಪ್ಪ, ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಮುದ್ದಿಯಡ ಲೀಲಾವತಿ, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಪಟ್ಟಮಾಡ ಕುಶ, ಅಜ್ಜಿಕುಟ್ಟೀರ ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.