ಸಾರಾಂಶ
ಸಿಎನ್ಆರ್ ರಾವ್ ಅವರು 60ಕ್ಕೂ ಹೆಚ್ಚು ಪುಸ್ತಕಗಳು, 1800ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಚಿಸಿರುವ ಅವರು ಯುವ ವಿಜ್ಞಾನಿಗಳಿಗೆ ಪ್ರೇರಣಾದಾಯಕರಾಗಿದ್ದಾರೆ
ಡಂಬಳ: ಸಿ.ಎನ್.ಆರ್. ರಾವ್ ಅವರು ಭಾರತ ಕಂಡ ಅದ್ಭುತ ವಿಜ್ಞಾನಿಗಳು. ಅವರ ಅಗಾಧ ವೈಜ್ಞಾನಿಕ ದೃಷ್ಟಿಕೋನ, ಅವರ ಲೇಖನಗಳು ಯುವಕರಿಗೆ ಮಾದರಿಯಾಗಿವೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಇತ್ತೀಚೆಗೆ ಬೆಂಗಳೂರಿನ ಅವರ ನಿವಾಸದಲ್ಲಿ ವಿಜ್ಞಾನಿ ಸಿಎನ್ಆರ್ ರಾವ್ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿ, ದೇಶದ ವಿಜ್ಞಾನ ಕ್ಷೇತ್ರದಲ್ಲಿ ಅವರ ಸೇವೆ ಗುರುತಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನೇಕ ಪ್ರಶಸ್ತಿ, ಪುರಸ್ಕಾರಗಳು ಮತ್ತು ಗೌರವ ದೊರೆತಿವೆ ಎಂದರು.ಅವರು ಭಾರತೀಯ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ್ದು, ವಿಶೇಷವಾಗಿ ನ್ಯಾನೋ ವಿಜ್ಞಾನ, ರಸಾಯನಶಾಸ್ತ್ರ ಮತ್ತು ವಸ್ತು ವಿಜ್ಞಾನದಲ್ಲಿ ಹೊಸ ದಾರಿಗಳನ್ನು ತೆರೆದಿದ್ದಾರೆ. 60ಕ್ಕೂ ಹೆಚ್ಚು ಪುಸ್ತಕಗಳು, 1800ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಚಿಸಿರುವ ಅವರು ಯುವ ವಿಜ್ಞಾನಿಗಳಿಗೆ ಪ್ರೇರಣಾದಾಯಕರಾಗಿದ್ದಾರೆ ಎಂದರು.ಈ ವೇಳೆ ಗ್ರೇಟರ್ ಬೆಂಗಳೂರು ಸಮಿತಿ ಸದಸ್ಯ ಬಿ.ಎಸ್. ಪಾಟೀಲ ಹಾಗೂ ಮುಖಂಡ ಟಿ. ಈಶ್ವರ ಇತರರು ಇದ್ದರು. ಸಂಭ್ರಮದ ನಮ್ಮೂರ ದಸರಾ
ಗದಗ: ನಗರದಲ್ಲಿ ಎಸ್‌ಎಸ್‌ಕೆ ಸಮಾಜದಿಂದ ಆಚರಿಸುತ್ತಿರುವ ಅದ್ಧೂರಿ ದಸರಾ ಉತ್ಸವದ ಸಂಭ್ರಮ ನೋಡಿ ಬಹಳ ಸಂತೋಷವಾಗಿದೆ. 150 ವರ್ಷಗಳ ಇತಿಹಾಸ ಹೊಂದಿರುವ ಜಗದಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ಕಣ್ತುಂಬಿಕೊಂಡಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಹಳೆ ಸರಾಫ್ ಬಜಾರದ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಭಾಸ್ಕರಸಾ ಪವಾರ ಸಭಾಂಗಣದ ದಸರಾ ದರ್ಬಾರ ವೇದಿಕೆಯಲ್ಲಿ ಜರುಗಿದ ನಮ್ಮೂರ ದಸರಾ- 2025ರ 5ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಮಾತನಾಡಿ, ನಮ್ಮಲ್ಲಿರುವ ದುಷ್ಟಶಕ್ತಿಗಳನ್ನು ದೂರ ಮಾಡಲು ನವರಾತ್ರಿ ಉತ್ಸವ ಆಚರಣೆ ಮುಖ್ಯವಾಗಿದೆ. ಈ ಹಬ್ಬದಲ್ಲಿ ಪೂಜೆ ಮತ್ತು ಪ್ರಾರ್ಥನೆ ಮಾಡುವ ಮೂಲಕ ನಮ್ಮಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಈ ವೇಳೆ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಅಧ್ಯಕ್ಷತೆ ವಹಿಸಿದ್ದರು. ಆನಂದಸ್ವಾಮಿ ಜಿ. ಗಡ್ಡದೇವರಮಠ, ಪ್ರಭು ಬುರಬುರೆ, ಆರ್.ಕೆ. ಹಬೀಬ(ಬುಡ್ಡಣ್ಣ), ರಾಜು ಬದಿ, ವಿನೋದ ಶಿದ್ಲಿಂಗ, ಅನಿಲ ಖಟವಟೆ, ಸಿಪಿಐ ಡಿ.ಬಿ. ಪಾಟೀಲ, ಪಿಎಸ್‌ಐ ರೇಣುಕಾ ಮುಂಡೆವಾಡಿ, ಸುರೇಶಕುಮಾರ ಬದಿ, ಬಲರಾಮ ಬಸವಾ, ಪರಶುರಾಮ ಬದಿ, ವಿಷ್ಣುಸಾ ಶಿದ್ಲಿಂಗ, ಮಾರುತಿ ಪವಾರ, ಪ್ರಕಾಶ ಬಾಕಳೆ, ಅಂಬಾಸಾ ಖಟವಟೆ ಸೇರಿದಂತೆ ಪ್ರಮುಖರು ಇದ್ದರು. ರವಿ ಶಿದ್ಲಿಂಗ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಬಲರಾಮ ಬಸವಾ ವಂದಿಸಿದರು.