ಸಹಕಾರ ಸಂಘಗಳ ಕಾಯ್ದೆ, ನಿಯಮಗಳು ಪದೇಪದೇ ಬದಲಾವಣೆ: ಕಾಡೇನಹಳ್ಳಿ ರಾಮಚಂದ್ರು

| Published : Jun 26 2024, 12:30 AM IST

ಸಹಕಾರ ಸಂಘಗಳ ಕಾಯ್ದೆ, ನಿಯಮಗಳು ಪದೇಪದೇ ಬದಲಾವಣೆ: ಕಾಡೇನಹಳ್ಳಿ ರಾಮಚಂದ್ರು
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಸಂಘಗಳಲ್ಲಿ ನಡೆಯುವ ಚುನಾವಣೆಗಳು ಪಾರದರ್ಶಕ, ಪಕ್ಷಾತೀತವಾಗಿ ನಡೆಯಬೇಕಿದೆ. ಸಂಘಗಳ ಕಾರ್‍ಯದರ್ಶಿಗಳು ಎಚ್ಚರಿಕೆಯಿಂದ ಬೈಲ ಪ್ರಕಾರ ಮತದಾರರ ಪಟ್ಟಿಗಳನ್ನು ತಯಾರಿಸಿ ನಿಯಮಾನುಸಾರ ಚುನಾವಣೆ ನಡೆಸಬೇಕು. ಸಹಕಾರ ಸಂಘಗಳ ಕಾಯ್ದೆಗಳು ಪದೇಪದೇ ಬದಲಾವಣೆಗಳಾಗುವುದರಿಂದ ಈ ಬಗ್ಗೆ ಅರಿವು ಮೂಡಿಸಿಕೊಂಡು ಚುನಾವಣೆ ವೇಳೆ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ಒಕ್ಕೂಟದಿಂದ ತರಬೇತಿ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಹಕಾರ ಸಂಘಗಳ ಕಾಯ್ದೆ, ನಿಯಮಗಳು ಪದೇಪದೆ ಬದಲಾವಣೆ ಆಗುವುದರಿಂದ ಕಾರ್ಯದರ್ಶಿಗಳು ತರಬೇತಿ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಅರಿವು ಮೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ನಡೆದ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ನಡೆದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಗಳಲ್ಲಿ ನಡೆಯುವ ಚುನಾವಣೆಗಳು ಪಾರದರ್ಶಕ, ಪಕ್ಷಾತೀತವಾಗಿ ನಡೆಯಬೇಕಿದೆ. ಸಂಘಗಳ ಕಾರ್‍ಯದರ್ಶಿಗಳು ಎಚ್ಚರಿಕೆಯಿಂದ ಬೈಲ ಪ್ರಕಾರ ಮತದಾರರ ಪಟ್ಟಿಗಳನ್ನು ತಯಾರಿಸಿ ನಿಯಮಾನುಸಾರ ಚುನಾವಣೆ ನಡೆಸಬೇಕು ಎಂದರು.

ಸಹಕಾರ ಸಂಘಗಳ ಕಾಯ್ದೆಗಳು ಪದೇಪದೇ ಬದಲಾವಣೆಗಳಾಗುವುದರಿಂದ ಈ ಬಗ್ಗೆ ಅರಿವು ಮೂಡಿಸಿಕೊಂಡು ಚುನಾವಣೆ ವೇಳೆ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ಒಕ್ಕೂಟದಿಂದ ತರಬೇತಿ ನೀಡಲಾಗುತ್ತಿದೆ ಎಂದರು.

ನಿರ್ದೇಶಕ ಶಿವಕುಮಾರ್ ಮಾತನಾಡಿ, ಪ್ರತಿಯೊಬ್ಬ ಕಾರ್‍ಯದರ್ಶಿಗಳಿಗೆ ಸಹಕಾರ ಸಂಘಗಳ ಕಾಯ್ದೆ, ಸುತ್ತೂಲೆಗಳ ಹಾಗೂ ಬೈಲಗಳ ಬಗ್ಗೆ ಅರಿವು ಇರಬೇಕು. ಈ ಹಿಂದೆ ನಡೆಯುತ್ತಿದ್ದ ಚುನಾವಣೆಗೂ ಇದೀಗ ನಡೆಯುತ್ತಿರುವ ಚುನಾವಣೆಗಳಿಗೂ ಸಾಕಷ್ಟು ವ್ಯತ್ಯಾಸ, ಬದಲಾವಣೆಗಳಾಗಿವೆ ಎಂದರು.

ಸಂಘಗಳಲ್ಲಿ ನಿಮಾನುಸಾರವಾಗಿ ಚುನಾವಣೆಗಳನ್ನು ನಡೆಸಬೇಕಾಗಿದೆ. ವ್ಯತ್ಯಾಸಗಳಾದರೆ ಸಾಕಷ್ಟು ತೊಂದರೆಯಾಗುತ್ತದೆ. ಹಾಗಾಗಿ ಇಂತಹ ಶಿಬಿರಗಳ ಮೂಲಕ ಮಾಹಿತಿಪಡೆದುಕೊಂಡು ಪಾರದರ್ಶಕವಾಗಿ ಚುನಾವಣೆಗಳನ್ನು ನಡೆಸಬೇಕು ಎಂದು ಮನವಿ ಮಾಡಿದರು.

ನಿವೃತ್ತ ಅಪರ ನಿಬಂಧಕ ಎಚ್.ಎಸ್.ನಾಗರಾಜಯ್ಯ ಮಾತನಾಡಿ, ಸಹಕಾರ ಸಂಘಗಳಲ್ಲಿ ಚುನಾವಣೆ ನಿಭಾಯಿಸುವುದು ಬಹಳ ಮುಖ್ಯ. ಸಂಘದ ಆಡಳಿತ ಮಂಡಳಿ ಮತ್ತು ಪದಾಧಿಕಾರಿಗಳ ಚುನಾವಣೆ ನಡಯುತ್ತದೆ. ಸಂಘದ ಸಿಇಒಗಳು ಕಾಯ್ದೆಯನ್ನು ಓದಿ ಮನನ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಸಲಹೆ ನೀಡಿದರು.

ಪಾಂಡವಪುರ ಉಪವಿಭಾಗದ ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗಪಟ್ಟಣ ಸಹಕಾರ ಸಂಘಗಳ ಕಾರ್ಯನಿರ್ವಾಹಕರು ಭಾಗವಹಿಸಿ ಚುನಾವಣಾ ವಿಚಾರವಾಗಿ ತರಬೇತಿ ಪಡೆದರು.

ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆ ಸಹಾಯಕ ನಿಬಂಧಕ ಆರ್.ನಾಗಭೂಷಣ್, ಒಕ್ಕೂಟದ ನಿರ್ದೇಶಕರಾದ ವಿ.ಎಸ್.ನಿಂಗೇಗೌಡ, ಯು.ಸಿ.ಶಿವಕುಮಾರ್, ಕೆ.ಎಸ್.ಪ್ರೇಮ, ಇಲಾಖೆ ಸಿಇಒ ಟಿ.ಶಿವಕುಮಾರ್, ವ್ಯವಸ್ಥಾಪಕ ಎಂ.ಆರ್.ಪ್ರಮೋದನ್ ಸೇರಿದಂತೆ ಹಲವರು ಇದ್ದರು.