ಸಾರಾಂಶ
-ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಕನ್ನಡಪ್ರಭ ವಾರ್ತೆ ವಿಜಯಪುರ
ರೈತರ ಆರ್ಥಿಕ ಚೈತನ್ಯಕ್ಕೆ ಸಹಕಾರ ಸಂಘಗಳ ಪಾತ್ರ ಮಹತ್ವದ್ದು. ಸಂಘಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಟಿ.ನಾಗರಾಜ್ ತಿಳಿಸಿದರು.ಪಟ್ಟಣದ ಓಂಕಾರೇಶ್ವರ ಕಲ್ಯಾಣ ಮಂಟಪದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘದಲ್ಲಿ ಪಡೆದ ಸಾಲ ನಿಗದಿತ ಸಮಯದಲ್ಲಿ ಮರುಪಾವತಿಸಿ, ಪುನಃ ಸಾಲ ಪಡೆದುಕೊಳ್ಳುವ ಮೂಲಕ ಸಂಘದ ಏಳಿಗೆಗೆ ಸಹಕರಿಸಬೇಕು. ರೈತರು ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತಾರೋ ಅದೇ ಉದ್ದೇಶಕ್ಕಾಗಿ ಸಾಲ ಬಳಸಬೇಕು ಎಂದು ಹೇಳಿದರು.
ನಂದಿನಿ ಶಾಲೆ ಕಾರ್ಯದರ್ಶಿ ಬಿ.ಚೇತನ್‌ಗೌಡ ಮಾತನಾಡಿ, ಸಂಘ ಕಳೆದ ವರ್ಷ ಹೆಚ್ಚು ಲಾಭ ಗಳಿಸಿತ್ತು. ಈ ಬಾರಿ ಕಡಿಮೆ ಲಾಭ ಗಳಿಸಿದೆ. ಸಂಘ ಮುಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಸ್ಥೆ ಮಾಡಿ ಚಿನ್ನಾಭರಣ ಸಾಲ ನೀಡಿ ಎಲ್ಲಾ ರೈತರಿಗೂ ಅನುಕೂಲ ಮಾಡಬೇಕು ಎಂದರು.ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮ್ ಸುಂದರ್ ಮಾತನಾಡಿ, ಸಂಘ ೨೬೪೭ ಮಂದಿ ಸದಸ್ಯರನ್ನು ಹೊಂದಿದೆ. ೨೩/೨೪ ನೇ ಸಾಲಿನ ಸದಸ್ಯರ ಷೇರು ೨೬,೮೨,೨೯೯.೨೫ ಸಂಗ್ರಹಿಸಲಾಗಿದೆ, ಎಸ್‌ಎಫ್‌ಡಿಎ ಷೇರು, ೧೬೦, ಸರಕಾರದ ಷೇರು ೫೦.೫೦೦, ಸರ್ಕಾರದ ಸದಸ್ಯರಿಗೆ ಉಚಿತ ಬಿಪಿಎಲ್. ಎಸ್‌ಸಿ/ಎಸ್‌ಟಿ ಅಲ್ಪಸಂಖ್ಯಾತರ ಷೇರು ೫,೧೩,೯೦೦ ಸ್ವಸಹಾಯ ಸಂಘಕ್ಕೆ ೩೦೦೦ ಪಡೆದಿದೆ. ೧.೧೦ ಕೋಟಿ ಹೂಡಿಕೆ ಇದೆ. ಪುಸ್ತಕ ವರ್ಷದಲ್ಲಿ ೧೩,೫೦,೩೨೮ ಲಕ್ಷ ನಿವ್ವಳ ಲಾಭ ಗಳಿಸಿದೆ. ರೈತರು ಇನ್ನು ಹೆಚ್ಚಿಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ವೀರಣ್ಣ, ಶಿವಾನಂದ, ನಿರ್ದೇಶಕರಾದ ವಿ.ಎಂ.ನಾಗರಾಜ್, ಮುನಿರಾಜು, ಬೈರಪ್ಪ, ಎಂ.ರಾಜಣ್ಣ, ಮಂಜುಳಾ, ನಂದಕುಮಾರ್, ಸೌಭಾಗ್ಯಮ್ಮ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪ್ರಕಾಶ್, ಕೇಶವ್, ಸೀನಪ್ಪ, ನಟಶೇಖರ್ ಮತ್ತಿತರರು ಹಾಜರಿದ್ದರು.