ಸಾರಾಂಶ
ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಜೇನು ಕಚ್ಚಿಸಿಕೊಂಡ ಗಾಯಾಳುವನ್ನು ಡಿಎಚ್‌ಒ ಡಾ.ಚಿದಂಬರ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಬಸವಾಪುರ ಗ್ರಾಮದ ಬಳಿ ಸಾವನ್ನಪ್ಪಿದ ಅಂತ್ಯ ಸಂಸ್ಕಾರ ನಡೆಯುವ ವೇಳೆ ಚಿತೆಗೆ ಬೆಂಕಿ ಇಟ್ಟ ಸಮಯದಲ್ಲಿ ಮರದ ಮೇಲಿದ್ದ ಜೇನು ಹುಳುಗಳು ಶವ ಸಂಸ್ಕಾರಕ್ಕೆ ಬಂದಿದ್ದವರನ್ನು ಕಚ್ಚಿ ಗಾಯಗೊಳಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.ಹೆಜ್ಜೇನಿಗೆ ಗಾಯಗೊಂಡ ೧೮ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಲ್ಲಿ ಮುಖ ಊದಿ ಕೊಂಡಿತ್ತು. ಜೇನು ಕಚ್ಚಿದ ಹಿನ್ನೆಲೆ ಅಲರ್ಜಿಯಾಗಿ ೧೮ ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರಲ್ಲಿ ೪ ಮಂದಿಯನ್ನು ಶನಿವಾರ ಬೆಳಗ್ಗೆ ಮನೆಗೆ ಕಳುಹಿಸಲಾಗಿದೆ ಎಂದು ಸಾರ್ವಜನಿಕ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು.
ಬಸವಾಪುರ ಗ್ರಾಮದ ವ್ಯಕ್ತಿಯೊಬ್ಬರು ಶುಕ್ರವಾರ ಸಾವನ್ನಪ್ಪಿದ್ದು, ಅವರ ಅಂತ್ಯ ಸಂಸ್ಕಾರ ಸಂಜೆ ನಡೆಯುವ ವೇಳೆ ಜೇನು ದಾಳಿಯ ವೇಳೆ ಸುಮಾರು ೪೦ ಮಂದಿಗೆ ಗಾಯಗೊಂಡಿದ್ದಾರೆ. ಹೆಚ್ಚು ಗಾಯಗೊಂಡವರನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರು ಹಂಗಳ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ. ಜೇನು ದಾಳಿ ಸಮಯದಲ್ಲಿ ಕೆಲವರು ಓಡಿ ಹೋಗಿದ್ದಾರೆ. ಇದ್ದವರಲ್ಲಿ ಮಹಿಳೆಯರು ಹೆಚ್ಚು ಗಾಯಗೊಂಡಿದ್ದಾರೆ.ಡಿಎಚ್‌ಒ ಭೇಟಿ: ಗುಂಡ್ಲುಪೇಟೆ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರ ಭೇಟಿ ನೀಡಿ ಜೇನು ಕಚ್ಚಿಸಿಕೊಂಡವರ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಶ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ಇದ್ದರು.
ತಾಲೂಕಿನ ಬಸವಾಪುರ ಗ್ರಾಮದಲ್ಲಿ ಶುಕ್ರವಾರ ಶವ ಸಂಸ್ಕಾರದ ವೇಳೆ ಜೇನು ಕಚ್ಚಿ ೪೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ೧೮ ಮಂದಿ ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ.-ಅಲೀಂ ಪಾಶ, ತಾಲೂಕು ಆರೋಗ್ಯಾಧಿಕಾರಿಜೇನು ಕಚ್ಚಿದ ಹಿನ್ನೆಲೆ ಬಸವಾಪುರ ಗ್ರಾಮದ ೧೮ ಮಂದಿ ಶುಕ್ರವಾರ ರಾತ್ರಿ ಅಡ್ಮಿಟ್ ಆಗಿದ್ದರು. ೧೮ ಗಾಯಾಳುಗಳಲ್ಲಿ ೪ ಮಂದಿ ಶನಿವಾರ ಬೆಳಗ್ಗೆ ಡಿಸ್ಚಾರ್ಜ್ ಆಗಿದ್ದಾರೆ. ಶನಿವಾರ ಒಬ್ಬರು ಬಂದಿದ್ದರು. ಎಲ್ಲಾ ಹುಷಾರಾಗಿದ್ದಾರೆ.-ಡಾ.ಮಂಜುನಾಥ್, ಆಡಳಿತ ವೈದ್ಯಾಧಿಕಾರಿ