ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಗ್ರಾಮೀಣ ಪರಿಸರದಲ್ಲಿ ಸಹಕಾರಿ ಬ್ಯಾಂಕ್‌ಗಳು ಜನರಿಗೆ ಉತ್ತಮ ಸೇವೆ ನೀಡುವ ಜೊತೆಗೆ ಆರ್ಥಿಕತೆಗೆ ನೆರವು ನೀಡುವ ಮೂಲಕ ಆಧಾರ ಸ್ತಂಭವಾಗಿದೆ. ಜನರ ಸಹಕಾರದಿಂದ ಮಾತ್ರ ಸಹಕಾರಿ ಬ್ಯಾಂಕ್ ಯಶಸ್ವಿಯಾಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.ಕಿನ್ನಿಗೋಳಿ ಬೆತ್ಲೇಮ್ ಸ್ಟಾರ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ ಹಳೆಯಂಗಡಿಯ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿಯ ಮೂರನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ಅಧ್ಯಕ್ಷ ವಂಸಂತ್ ಬೆರ್ನಾಡ್ ಅವರ ನೇತೃತ್ವದಲ್ಲಿ ಪ್ರಥಮ ವರ್ಷದಲ್ಲೇ ಲಾಭ ಪಡೆದುಕೊಂಡು ಇದೀಗ ಮೂರನೇ ಶಾಖೆ ಆರಂಭಿಸಿರುವುದ ದೊಡ್ಡ ಸಾಧನೆಯಾಗಿದೆ. ಸಹಕಾರ ಚಳವಳಿಗೆ ಸದಾ ತನ್ನ ಬೆಂಬಲವಿದ್ದು, ಪ್ರಿಯದರ್ಶಿನಿ ಸೊಸೈಟಿಗೆ ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ೫ ಲಕ್ಷ ರು. ನೀಡುವುದಾಗಿ ಘೋಷಿಸಿದರು.ಮೂಲ್ಕಿ ಸೀಮೆ ಅರಸ ಎಂ. ದುಗ್ಗಣ್ಣ ಸಾವಂತರು ಸೊಸೈಟಿಯ ಭದ್ರಾತಾ ಕೊಠಡಿ ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸವಲತ್ತುಗಳು ದೊರೆಯಲು ಸೊಸೈಟಿಯು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನ ಯಶಸ್ವಿಯಾಗಲೆಂದು ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ, ಸೊಸೈಟಿಯು ಬಡವರ ಅಸಹಾಯಕರ ಧ್ವನಿಯಾಗಿದ್ದು, ಶೀಘ್ರದಲ್ಲಿ ೫೦ ಶಾಖೆ ತೆರೆಯಲೆಂದು ಹೇಳಿದರು.ಪ್ರಿಯದರ್ಶಿನಿ ಸ್ವಸಹಾಯ ಗುಂಪಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಚಾಲನೆ ನೀಡಿದರು. ಅಮೃತ ನಗದು ಪತ್ರ ಠೇವಣಿಯನ್ನು ಕೊಸೆಸಾಂವ್ ಅಮ್ಮ ಚರ್ಚ್ ಕಿನ್ನಿಗೋಳಿಯ ಧರ್ಮಗುರು ಫಾವುಸ್ತಿನ್ ಲುಕಾಸ್ ಲೋಬೋ ಬಿಡುಗಡೆಗೊಳಿಸಿದರು. ಠೇವಣಿ ಪತ್ರವನ್ನು ದುರ್ಗಾದಯ ಕಿನ್ನಿಗೋಳಿಯ ಮಾಲಕ ಸೀತಾರಾಮ ಶೆಟ್ಟಿ ಬಿಡುಗಡೆಗೊಳಿಸಿದರು. ಉಳಿತಾಯ ಖಾತೆಯ ಪಾಸ್‌ಬುಕ್ಕನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಡಾ.ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ವಿತರಿಸಿದರು. ಮಾಸಿಕ ಠೇವಣಿ ಪತ್ರವನ್ನು ಸಿ.ಎಸ್.ಐ ಅಮ್ಮನ್ ಮೆಮೊರಿಯಲ್ ಚರ್ಚ್ ಹಳೆಯಂಗಡಿ ಸಭಾಪಾಲಕ ಅಮೃತ್ ರಾಜ್ ಖೋಡೆ ಬಿಡುಗಡೆಗೊಳಿಸಿದರು. ಪ್ರಥಮ ವಾಹನ ಸಾಲವನ್ನು ಪಾವಂಜೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಸೂರ್ಯ ಕುಮಾರ್ ವಿತರಿಸಿದರು. ನಿತ್ಯನಿಧಿ ಪಾಸ್‌ಬುಕ್ಕನ್ನು ಲಯನ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜ ವಿತರಿಸಿದರು.
ಇನ್ನರ್‌ವೀಲ್ ಕ್ಲಬ್ ಕಿನ್ನಿಗೋಳಿಯ ಅಧ್ಯಕ್ಷೆ ಸವಿತಾ ಶೆಟ್ಟಿ, ಗುತ್ತಕಾಡು ಖಲಿರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಕಿನ್ನಿಗೋಳಿ ಧರ್ಮ ಕೇಂದ್ರ - ಪಾಲನಾ ಮಂಡಳಿ ಉಪಾಧ್ಯಕ್ಷ ವಿಲಿಯಂ ಡಿಸೋಜ, ಎ.ಪಿ.ಎಂ.ಸಿ.ಯ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೈಲಾ ಸಿಕ್ವೇರ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಎಚ್.ಮಯ್ಯದ್ದಿ, ದ.ಕ. ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಜಯಂತಿ, ಕಿನ್ನಿಗೋಳಿ ಕಾಳಿಕಾಂಬ ಜ್ಯುವೆಲರ್ಸ್ ಮಾಲಕ ಯೋಗೀಶ್ ಆಚಾರ್ಯ, ಬೆತ್ಲೇಮ್ ಸ್ಟಾರ್ ಕಾಂಪ್ಲೇಕ್ಸ್ ಮಾಲಕ ಕೆ. ದೀಪಕ್ ಎ. ರೊಡ್ರಿಗಸ್, ಕಟ್ಟಡದ ಮಾಲಿಕ ಗೋಪಾಲಕೃಷ್ಣ, ಸೊಸೈಟಿ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ಮುಖ್ಯ ಕಾರ್ಯನಿರ್ವಹಣಾದಿಕಾರಿ ಸುದರ್ಶನ್, ನಿರ್ದೇಶಕರಾದ ಡಾ.ಗಣೇಶ್ ಅಮೀನ್ ಸಂಕಮಾರ್, ಗೌತಮ್ ಜೈನ್, ಉಮಾನಾಥ್ ಜೆ. ಶೆಟ್ಟಿಗಾರ್, ಗಣೇಶ್ ಪ್ರಸಾದ್ ದೇವಾಡಿಗ, ತನುಜಾ ಶೆಟ್ಟಿ, ವಿಜಯ ಕುಮಾರ್ ಸನಿಲ್, ಮಿರ್ಜಾ ಅಹಮ್ಮದ್, ನವೀನ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.ಪ್ರಿಯದರ್ಶಿನಿ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾಡ್ ಪ್ರಸ್ತಾವಿಸಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವದಿಕಾರಿ ಸುದರ್ಶನ್ ವಂದಿಸಿದರು. ಪ್ರಕಾಶ್ ಆಚಾರ್ ಹಾಗೂ ಅಕ್ಷತಾ ಶೆಟ್ಟಿ ನಿರೂಪಿಸಿದರು.