ಸಾರಾಂಶ
-ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ
----ಕನ್ನಡಪ್ರಭ ವಾರ್ತೆ ಸುರಪುರ
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರುಅಂಬೇಡ್ಕರ್ ಅವರ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆ ಸರಿಯಲ್ಲ ಎಂದು ದೂರಿ, ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟದವರು ಹಸನಾಪುರ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಬಳಿಕ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರರ ಮುಖಾಂತರ ಸಲ್ಲಿಸಲಾಯಿತು.ಮುಖಂಡರು ಮಾತನಾಡಿ, ದೇಶಕ್ಕೆ ಸಂವಿಧಾನ ಬರೆಯುವುದರ ಮೂಲಕ ಸರ್ವರಿಗೂ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯ ಒದಗಿಸಿಕೊಟ್ಟು ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದರು.
ಗೃಹ ಸಚಿವರು ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ಖಂಡನೀಯ. ಅಮಿತ್ ಶಾ ಅವರ ಭಾರತೀಯ ಪೌರತ್ವ ರದ್ದು ಮಾಡಿ ಹಾಗೂ ಕ್ಯಾಬಿನೆಟ್ ನಿಂದ ವಜಾಗೊಳಿಸಿ ಅವರನ್ನು ದೇಶದ್ರೋಹ ಪ್ರಕರಣದಡಿಯಲ್ಲಿ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.ಒಕ್ಕೂಟದ ಮುಖಂಡರಾದ ವೆಂಕಟೇಶ ಹೊಸಮನಿ, ನಾಗಣ್ಣ ಕಲ್ಲದೇವನಹಳ್ಳಿ, ಮಾನಪ್ಪ ಕರಡಕಲ್, ಆದಪ್ಪ ಹೊಸಮನಿ, ಭೀಮರಾಯ ಸಿಂದಗೇರಿ, ರಾಹುಲ್ ಹುಲಿಮನಿ, ಅಹ್ಮದ್ ಪಠಾಣ, ಮಲ್ಲಯ್ಯ ಕಮತಗಿ, ಶ್ರೀನಿವಾಸನಾಯಕ, ಭೀಮಣ್ಣಗೌಡ ಹೇಮನೂರು, ವೆಂಕಟೇಶ ಬೇಟೆಗಾರ್, ರವಿಚಂದ್ರ ಸಾಹುಕಾರ, ದಾನಪ್ಪ ಲಕ್ಷ್ಮಿಪೂರ, ನಿಂಗಣ್ಣ ಗೋನಾಲ, ಹಣಮಂತ ಹೊಸಮನಿ, ಮರೆಪ್ಪ ಗುತ್ತೇದಾರ, ಮಾಳಪ್ಪ ಕಿರದಳ್ಳಿ, ಮಲ್ಲು ಬಿಲ್ಲವ್, ಶಿವಶಂಕರ ಹೊಸಮನಿ, ರಾಜು ದೊಡ್ಡಮನಿ, ರಮೇಶ ಅರಿಕೇರಿ, ಮಾನಪ್ಪ ಬಳಬಟ್ಟಿ, ಮಲ್ಲು ಮುಷ್ಠಳ್ಳಿ, ಪ್ರಕಾಶ ಕಟ್ಟಿಮನಿ, ಮಲ್ಲು ಕೆಸಿಪಿ, ವಿಶ್ವನಾಥ ಹೊಸಮನಿ, ಮಾನಪ್ಪ ಕಲ್ಲದೇವನಹಳ್ಳಿ, ರಾಯಪ್ಪ ಕರಡಕಲ್, ನಾಗರಾಜ್ ಗೋಗಿಕರ್, ರವಿಂಚಂದ್ರ ಬೊಮ್ಮನಹಳ್ಳಿ, ಮಹೇಶ ಯಾದಗಿರಕರ್, ಬಸವರಾಜ ಶೆಳ್ಳಗಿ, ಚಂದಪ್ಪ ಪಂಚಮ್, ವೈಜನಾಥ ಹೊಸಮನಿ, ಜೆಟ್ಟೆಪ್ಪ ನಾಗರಾಳ, ಶಿವಣ್ಣ ನಾಗರಾಳ, ಗೋಪಾಲ್ ಗೋಗಿಕೇರಾ, ಭಾಗನಾಥ ಗುತ್ತೇದಾರ, ಡಿ.ಲಾಲಸಾಬ್, ಶರಣಪ್ಪ ತೆಗ್ಗಳ್ಳಿ, ಬಸವರಾಜ ಬೊಮ್ಮನಹಳ್ಳಿ, ರಾಮಪ್ಪ ಸುಗೂರು, ಅವಿನಾಶ ಹೊಸಮನಿ, ನೂರಂದಪ್ಪ ಚಂದ್ಲಾಪೂರ, ದೇವಪ್ಪ ಬೋನ್ಹಾಳ, ಮಲ್ಲಪ್ಪ ಸತ್ಯಂಪೇಟ್, ಶರಣು ಹುಲಿಮನಿ, ಲಂಕೆಪ್ಪ ಬೊಮ್ಮನಹಳ್ಳಿ, ಸತೀಶ ಯಡಿಯಾಪುರ, ಭೀಮಾಶಂಕರ ಹೊಸಮನಿ, ಹಣಮಂತ ಕೊಡ್ಲಿ, ಮುತ್ತು ಕಂಬಾರ, ಮಲ್ಲು ಅಮ್ಮಾಪುರ ಇದ್ದರು.
------ಫೋಟೊ: ಸುರಪುರ ನಗರದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆ ಖಂಡಿಸಿ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
21ವೈಡಿಆರ್7: