ಮತ ಎಣಿಕೆ ಏಜೆಂಟರಿಗೆ ಟೆಂಗಿನಕಾಯಿ ಮಾರ್ಗದರ್ಶನ

| Published : Jun 03 2024, 01:15 AM IST / Updated: Jun 03 2024, 08:08 AM IST

ಮತ ಎಣಿಕೆ ಏಜೆಂಟರಿಗೆ ಟೆಂಗಿನಕಾಯಿ ಮಾರ್ಗದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಗ್ರಾಮೀಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಏಜೆಂಟರ ಸಭೆಯನ್ನು ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ನಡೆಸಿದರು.

 ಹುಬ್ಬಳ್ಳಿ : ಲೋಕಸಭಾ ಚುನಾವಣೆಯ ಫಲಿತಾಂಶ ಜೂ. 4ರಂದು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಶನಿವಾರ ಧಾರವಾಡ ಗ್ರಾಮೀಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಏಜೆಂಟರ ಸಭೆಯನ್ನು ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕರು, ಸಾಕಷ್ಟು ಚುನಾವಣೆಗಳಲ್ಲಿ ಮತ ಎಣಿಕೆ ಏಜೆಂಟರಾಗಿ ಕೆಲಸ ಮಾಡಿದ್ದೀರಿ. ಅಲ್ಲಿ ನಾವು ಯಾವ ರೀತಿ ಇರಬೇಕು, ಮತ್ತೆ ಪ್ರತಿ ಬೂತಿನ ಫಲಿತಾಂಶದ ಎಲ್ಲ ಅಭ್ಯರ್ಥಿಗಳ ಅಂಕಿ-ಸಂಖ್ಯೆಗಳನ್ನು ಪಕ್ಷ ನೀಡಿದ ದಾಖಲೀಕರಣ ಪತ್ರದಲ್ಲಿ ದಾಖಲಿಸಬೇಕು. ಶಿಸ್ತು ಬದ್ಧವಾಗಿ ಕಾರ್ಯನಿರ್ವಹಣೆ ಮತ್ತು ಸಕಾಲಕ್ಕೆ ಹಾಜರಿದ್ದು ಕೌಂಟಿಂಗ್ ಮುಗಿಯುವ ವರೆಗೆ ಸ್ಥಳದಲ್ಲಿಯೇ ಇರುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು.

ಈ ವೇಳೆ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಶಶಿಮೌಳಿ ಕುಲಕರ್ಣಿ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ಸುಭಾಷ ಚವ್ಹಾಣ, ಶಂಕರ ಮುಗದ, ಮಹಾಂತೇಶ ಶ್ಯಾಗೋಟಿ, ಶಿವಾನಂದ ಗುಂಡಗೋವಿ, ರುದ್ರಪ್ಪ ಅರಿವಾಳ, ಮೃತ್ಯುಂಜಯ ಹಿರೇಮಠ, ಷಣ್ಮುಖ ಗುರಿಕಾರ ಸೇರಿದಂತೆ ಹಲವರಿದ್ದರು.