ಸಾರಾಂಶ
ಫೆ.೫ ರಿಂದ ೭ನೇ ತಾರೀಕಿನವರೆಗೂ ೯ ವರ್ಷಕ್ಕೊಮ್ಮೆ ನಡೆಯುವ ತ್ಯಾರನಹಳ್ಳಿ ಸಿದ್ದೇಶ್ವರಸ್ವಾಮಿ, ಬಿರೇಶ್ವರ, ಭತ್ತೇಶ್ವರ, ಶ್ರೀ ಈರಮುದ್ದಮ್ಮ ದೇವರುಗಳ ಜಾತ್ರೆ ಪ್ರಯುಕ್ತ ಉತ್ಸವದ ಅರಿವು ಮೂಡಿಸುವ ಸಂಬಂಧ ಗ್ರಾಮಗಳಲ್ಲಿ ಬಸವನ ಕರೆತಂದು ಬಂಡಾರ ಪೂಜೆ ನೆರವೇರಿಸಿ, ತೆಂಗಿನಕಾಯಿ ಪವಾಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕುರುಬ ಸಮಾಜದ ದ್ಯಾವರ ಉತ್ಸವದ ಪ್ರಯುಕ್ತ ಸಂಪ್ರದಾಯದಂತೆ ತೆಂಗಿನಕಾಯಿ ಪವಾಡ ಕಾರ್ಯಕ್ರಮ ಬಂಗಾರಪೇಟೆ ಸಮೀಪ ನೆರವೇರಿತು.ಬಂಗಾರಪೇಟೆ ತಾಲೂಕಿನ ದೇವಗಾನಹಳ್ಳಿಯಲ್ಲಿ ಬಸವನ ಪೂಜೆ ಹಾಗೂ ಬಂಡಾರ ಪೂಜೆ ಹಮ್ಮಿಕೊಳ್ಳಲಾಗಿತ್ತು, ತಾಲೂಕಿನ ತ್ಯಾರನಹಳ್ಳಿಯ ಶ್ರೀ ಬೀರೇಶ್ವರ, ಸಿದ್ಧೇಶ್ವರ ದೇವಾಲಯದ ದ್ಯಾವರ ಉತ್ಸವದ ಹಿನ್ನೆಲೆ ದೇವಗಾನಹಳ್ಳಿ ಗ್ರಾಮದಲ್ಲಿ ಉತ್ಸವದ ಆಚರಣೆ ಕಳೆಗಟ್ಟಿತು.
ಬಲಹರಿ, ಬಲಹರಿ ಎಂದು ಕುರುಬ ಸಮಾಜದ ಒಬ್ಬೊಬ್ಬ ಗುರುಗಳು ಬಸವನ ಎದುರು ಮೈ ಮರೆತು ತೆಂಗಿನಕಾಯಿ ಒಡೆಸಿಕೊಳ್ಳುವಾಗ ತೆಂಗಿನಕಾಯಿ ನೋಡ ನೋಡುತ್ತಿದ್ದಂತೆ ಒಡೆದು ಚೂರಾಗುತ್ತಿತ್ತು. ಈ ವೇಳೆ ತೆಂಗಿನಕಾಯಿ ಚೂರು, ಚೂರು ಆಗುವುದನ್ನು ಗಮನಿಸಿದ ಸಾರ್ವಜನಿಕರು ಕೆಲಹೊತ್ತು ಆಶ್ಚರ್ಯ ಚಕಿತರಾದರು.ಫೆ.೫ ರಿಂದ ೭ನೇ ತಾರೀಕಿನವರೆಗೂ ೯ ವರ್ಷಕ್ಕೊಮ್ಮೆ ನಡೆಯುವ ತ್ಯಾರನಹಳ್ಳಿ ಸಿದ್ದೇಶ್ವರಸ್ವಾಮಿ, ಬಿರೇಶ್ವರ, ಭತ್ತೇಶ್ವರ, ಶ್ರೀ ಈರಮುದ್ದಮ್ಮ ದೇವರುಗಳ ಜಾತ್ರೆ ಪ್ರಯುಕ್ತ ಉತ್ಸವದ ಅರಿವು ಮೂಡಿಸುವ ಸಂಬಂಧ ಗ್ರಾಮಗಳಲ್ಲಿ ಬಸವನ ಕರೆತಂದು ಬಂಡಾರ ಪೂಜೆ ನೆರವೇರಿಸಿ, ತೆಂಗಿನಕಾಯಿ ಪವಾಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಅದ್ಧೂರಿ ದ್ಯಾವರ ಉತ್ಸವದಲ್ಲಿ ಬಂಗಾರಪೇಟೆ ತಾಲೂಕಿನ ನೂರಾರು ಗ್ರಾಮಗಳ ಕುರುಬ ಸಮಾಜದ ಸಾವಿರಾರು ಜನರು ಭಾಗಿಯಾಗುತ್ತಾರೆ. ಫೆಬ್ರವರಿ ೨ ರಂದು ದೇವರ ಕೂಟ ಸೇರುವುದು, ಫೆ ೫ ರಂದು ದೇವತಾ ಕಾರ್ಯ, ಕುಲಬಾಂಧವರ ಕಾಣಿಕೆ, ಸಂಜೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ.