ಶಿಸ್ತು ಪಾಲನೆಗೆ ನೀತಿ ಸಂಹಿತೆ ಜಾಗೃತಿ ಅಗತ್ಯ: ಡಾ.ಜಗನ್ನಾಥ ಚವ್ಹಾಣ

| Published : May 31 2024, 02:20 AM IST

ಶಿಸ್ತು ಪಾಲನೆಗೆ ನೀತಿ ಸಂಹಿತೆ ಜಾಗೃತಿ ಅಗತ್ಯ: ಡಾ.ಜಗನ್ನಾಥ ಚವ್ಹಾಣ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜುಗಳಲ್ಲಿನ ನೀತಿ ಸಂಹಿತೆಗಳು ವಿದ್ಯಾರ್ಥಿಗಳ ಮನೋವಿಕಾಸಕ್ಕೆ ದಾರಿಯಾಗುತ್ತದೆ. ಶಿಸ್ತು ಪಾಲನಗೆ ವಿದ್ಯಾರ್ಥಿಗಳಿಗೆ ನೀತಿ ಸಂಹಿತೆಗಳ ಬಗ್ಗೆ ಅರಿವು ಅಗತ್ಯ ಎಂದು ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾಲೇಜುಗಳಲ್ಲಿನ ನೀತಿ ಸಂಹಿತೆಗಳು ವಿದ್ಯಾರ್ಥಿಗಳ ಮನೋವಿಕಾಸಕ್ಕೆ ದಾರಿಯಾಗುತ್ತದೆ. ಶಿಸ್ತು ಪಾಲನಗೆ ವಿದ್ಯಾರ್ಥಿಗಳಿಗೆ ನೀತಿ ಸಂಹಿತೆಗಳ ಬಗ್ಗೆ ಅರಿವು ಅಗತ್ಯ ಎಂದು ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಹೇಳಿದರು.

ಬ.ವಿ.ವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆಯ ವಿದ್ಯಾರ್ಥಿಗಳ ಕಲ್ಯಾಣ ವಿಭಾಗದಡಿಯಲ್ಲಿ ನೀತಿ ಸಂಹಿತೆ ಕುರಿತು ಜಾಗೃತಿ ಕಾರ್ಯಕ್ರಮ ಕುರಿತು ಮಾತನಾಡಿದರು.

ಮಹಾವಿದ್ಯಾಲಯ ದಲ್ಲಿನ ನೀತಿ ಸಂಹಿತೆಗಳ ಅಧ್ಯಯನಗಳು ಅವುಗಳ ಪರಿಣಾಮಕಾರಿ ಅನುಷ್ಠಾನ ಕಲಿಕೆಯ ಪ್ರಕ್ರಿಯೆಯಾಗಿದೆ. ಅವುಗಳನ್ನು ರೂಢಿಸಿಕೊಳ್ಳವುದರಿಂದ ಶಿಸ್ತುಬದ್ಧ ಜೀವನ ಹಾಗೂ ಮನೋವಿಕಾಸಕ್ಕೆ ದಾರಿಯಾಗಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗಿರಿಜಾ ನಾವದಗಿ, ನೀತಿ ಸಂಹಿತೆಯಲ್ಲಿರುವ ತತ್ವಗಳ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಪ್ರೇರೇಪಿಸುತ್ತದೆ ಎಂದರು.

ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ರಾಮಕೃಷ್ಣ ತ್ಯಾಪಿ ಅವರು ಸ್ವಾಗತಿಸಿದರು. ಸೀತಲ್ ಬಾರ್ಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.