ನೀತಿ ಸಂಹಿತೆ: ಖುದ್ದು ವಾಹನ ಪರಿಶೀಲಿಸಿದ ಡಿಸಿ ಶುಭಾ ಕಲ್ಯಾಣ್‌, ಎಸ್ಪಿ ಕೆ.ವಿ. ಅಶೋಕ್

| Published : Apr 07 2024, 01:45 AM IST

ನೀತಿ ಸಂಹಿತೆ: ಖುದ್ದು ವಾಹನ ಪರಿಶೀಲಿಸಿದ ಡಿಸಿ ಶುಭಾ ಕಲ್ಯಾಣ್‌, ಎಸ್ಪಿ ಕೆ.ವಿ. ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ಅನಿರೀಕ್ಷಿತವಾಗಿ ಜಂಟಿ ಭೇಟಿ ನೀಡಿ ಪರಿಶೀಲಿಸಿದರು. ಇದಲ್ಲದೆ ಚೆಕ್‌ಪೋಸ್ಟ್ ಮಾರ್ಗವಾಗಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ಸೇರಿ ವಿವಿಧ ವಾಹನಗ ಳನ್ನು ಕೆಲಹೊತ್ತು ತಾವೇ ಖುದ್ದಾಗಿ ತಪಾಸಣೆ ನಡೆಸಿ ಕರ್ತವ್ಯನಿರತ ಅಧಿಕಾರಿ/ಸಿಬ್ಬಂದಿಗೆ ಮಾದರಿಯಾದರು.

ಕನ್ನಡಪ್ರಭ ವಾರ್ತೆ ತುಮಕೂರುಲೋಕಸಭಾ ಸಾರ್ವತ್ರಿಕ ಚುನಾವಣೆ ಮಾದರಿ ನೀತಿ ಸಂಹಿತೆ ಪಾಲನೆಗಾಗಿ ಸ್ಥಾಪಿಸಿರುವ ಕುಣಿಗಲ್ ವಿಧಾನಸಭಾ ಕ್ಷೇತ್ರದ ಚೆಕ್‌ಪೋಸ್ಟ್ ಹಾಗೂ ವಲ್ನರೆಬಲ್ ಮತಗಟ್ಟೆ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ಅನಿರೀಕ್ಷಿತವಾಗಿ ಜಂಟಿ ಭೇಟಿ ನೀಡಿ ಪರಿಶೀಲಿಸಿದರು. ಇದಲ್ಲದೆ ಚೆಕ್‌ಪೋಸ್ಟ್ ಮಾರ್ಗವಾಗಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ಸೇರಿ ವಿವಿಧ ವಾಹನಗ ಳನ್ನು ಕೆಲಹೊತ್ತು ತಾವೇ ಖುದ್ದಾಗಿ ತಪಾಸಣೆ ನಡೆಸಿ ಕರ್ತವ್ಯನಿರತ ಅಧಿಕಾರಿ/ಸಿಬ್ಬಂದಿಗೆ ಮಾದರಿಯಾದರು.ಜಿಲ್ಲೆಯ ಕುಣಿಗಲ್ ತಾಲೂಕು ಹುತ್ರಿದುರ್ಗ ಹೋಬಳಿ ಬೇಗೂರು ಗ್ರಾಮ ಪಂಚಾಯತಿ ವ್ಯಾಪ್ತಿ ಅಂಚೆಪಾಳ್ಯದಲ್ಲಿ ಸ್ಥಾಪಿಸಿ ರುವ ಚೆಕ್‌ಪೋಸ್ಟ್ ಗಳಿಗೆ ಭೇಟಿ ನೀಡಿ ಚುನಾವಣಾ ಕಾರ್ಯನಿರತ ಅಧಿಕಾರಿ ಸಿಬ್ಬಂದಿ ತಪಾಸಣಾ ಕಾರ್ಯ ನಿರ್ವಹಣೆ ಯನ್ನು ಪರಿಶೀಲಿಸಿದರು. ಚುನಾವಣೆ ಮುಕ್ತಾಯವಾಗುವವರೆಗೂ ಚೆಕ್‌ಪೋಸ್ಟ್ ಗಳಲ್ಲಿ ತಪಾಸಣೆ ಕಾರ್ಯವನ್ನು ನಿರಂತರವಾಗಿ ನಡೆಸಬೇಕು. ದಾಖಲೆಗಳಿಲ್ಲದೆ ನಗದು, ಸಾಮಗ್ರಿ, ಚಿನ್ನಾಭರಣ, ಮದ್ಯ ಹಾಗೂ ವಾಣಿಜ್ಯ ಸರಕುಗಳನ್ನು ವಾಹನಗಳಲ್ಲಿ ಸಾಗಾಟ ಮಾಡುವುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ದಾಖಲೆ ರಹಿತ ನಗದು, ಸಾಮಗ್ರಿ ದೊರೆತರೆ ನಿಯಮಾನುಸಾರ ಪ್ರಕರಣ ದಾಖಲಿಸಬೇಕೆಂದು ಕಾರ್ಯನಿರತ ಅಧಿಕಾರಿ/ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.ವಲ್ನರೆಬಲ್ ಮತಗಟ್ಟೆ ಪ್ರದೇಶಗಳಿಗೆ ಭೇಟಿ:

ನಂತರ ವಲ್ನರೆಬಲ್ ಮತಗಟ್ಟೆ ಪಟ್ಟಿಯಲ್ಲಿರುವ ಕಿತ್ನಮಂಗಲ ಪಂಚಾಯತಿ ಮುನಿಯನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಜಿಲ್ಲಾಧಿಕಾರಿ, ಏಪ್ರಿಲ್ 26 ರಂದು ಮತಗಟ್ಟೆಗೆ ತೆರಳಿ ನಿರ್ಭೀತಿಯಿಂದ ಮತದಾನ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು. ಮುನಿಯನಪಾಳ್ಯ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆಯಿಂದ ಮತದಾನ ಮಾಡುವವರಿಗೆ ನಮೂನೆ 12 ಡಿ ವಿತರಿಸಿರುವ ಬಗ್ಗೆ ಮಾಹಿತಿ ಕೇಳಿದಾಗ ಉತ್ತರಿಸಿದ ಮತಗಟ್ಟೆ ಮಟ್ಟದ ಅಧಿಕಾರಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಾಪಾಧ್ಯಾ ಯಿನಿ ಮಮತಾ ಬಿ.ಆರ್. ಈಗಾಗಲೇ 85 ವಯೋಮಾನದ ಸಾಕಮ್ಮ ಹಾಗೂ ಹನುಮಮ್ಮ ಅವರಿಗೆ ನಿಗದಿತ ನಮೂನೆ ಯನ್ನು ವಿತರಿಸಲಾಗಿದೆ ಎಂದು ವಿವರಣೆ ನೀಡಿದರು. ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿ ವಾಟರ್ ಪ್ಯೂರಿಫೈಯರ್ ಅನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಪಿಡಿಒ ವಾಸು ಅವರಿಗೆ ಸೂಚನೆ ನೀಡಿದರು.ಮತದಾರರೊಂದಿಗೆ ಸಂವಾದ:

ಬಳಿಕ ಮತ್ತೊಂದು ವಲ್ನರೆಬಲ್ ಮತಗಟ್ಟೆಯೆಂದು ಗುರುತಿಸಿರುವ ಸಂತೆ ಮಾವತ್ತೂರು ಗ್ರಾಮ ಪಂಚಾಯತಿ ಮೋದೂರು ಗ್ರಾಮಕ್ಕೆ ಭೇಟಿ ನೀಡಿ ಮತದಾರರೊಂದಿಗೆ ಸಂವಾದ ನಡೆಸಿದ ಅವರು, ಮತದಾನ ದಿನದಂದು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ತಪ್ಪದೇ ಮತದಾನ ಮಾಡಬೇಕು. ಚುನಾವಣಾ ಅಕ್ರಮಗಳು ನಡೆದಲ್ಲಿ ಕಂಟ್ರೋಲ್ ರೂಂ ಸಂಖ್ಯೆ ೧೯೫೦ಗೆ ಕರೆ ಮಾಡಿ ದೂರು ನೀಡಬೇಕೆಂದರು.ವಲ್ನರೆಬಲ್ ಮತಗಟ್ಟೆ ಪಟ್ಟಿಯಿಂದ ಕೈಬಿಡಲು ಗ್ರಾಮಸ್ಥರ ಮನವಿ: ಮೋದೂರು ಗ್ರಾಮದ ಮತಗಟ್ಟೆಯನ್ನು ವಲ್ನರೆಬಲ್ ಪಟ್ಟಿಯಿಂದ ಕೈಬಿಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸೌಲಭ್ಯ ಒದಗಿಸಬೇಕೆಂದು ಗ್ರಾಮಸ್ಥರೆಲ್ಲ ಒಕ್ಕೊರಲಿನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ತಪಾಸಣಾ ವಹಿ ಪರಿಶೀಲನೆ...ತರುವಾಯ ನಿಡಸಾಲೆ ಗ್ರಾಮ ಪಂಚಾಯತಿ ನಿಡಸಾಲೆಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ವಾಹನ ತಪಾಸಣೆ ಸಂಬಂಧ ನಿರ್ವಹಿಸುತ್ತಿರುವ ವಹಿಯನ್ನು ಪರಿಶೀಲಿಸಿದರು. ಚೆಕ್‌ಪೋಸ್ಟ್ ಗ ಳಲ್ಲಿ ಬೆಳಕು, ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಬೇಸಿಗೆ ಇರುವುದರಿಂದ ಚೆಕ್‌ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿ ರುವವರಿಗೆ ಕುಡಿಯಲು ಮಜ್ಜಿಗೆ ನೀಡಬೇಕೆಂದು ಸಹಾಯಕ ಚುನಾವಣಾಧಿಕಾರಿ ಜಿ. ಮಹೇಶ್ ಅವರಿಗೆ ಸೂಚನೆ ನೀಡಿದರು.ತಪಾಸಣೆ ಚುರುಕುಗೊಳಿಸಿ:ಕೆ.ವಿ. ಅಶೋಕ್ ಮಾತನಾಡಿ ನಿಡಸಾಲೆ ಚೆಕ್‌ಪೋಸ್ಟ್ ಗಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇರುವುದರಿಂದ ತನಿಖಾಧಿಕಾರಿಗಳನ್ನೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡುವ ಮೂಲಕ ತಪಾಸಣೆ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವನಾಥ್, ವಿವಿಧ ಗ್ರಾಮ ಪಂಚಾಯತಿ ಪಿಡಿಓಗಳು, ವಿವಿಧ ಇಲಾಖಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.