ಸಾರಾಂಶ
ಮಾ.18ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಶನಿವಾರ ಬೆಳಗ್ಗೆ ಕೇಸರಿಮಯ ಆಗಿದ್ದ ನಗರ ರಾತ್ರಿವೇಳೆಯೇ ಖಾಲಿ, ಖಾಲಿ ಎಂಬಂತಾಗಿತ್ತು. ದೇಶಾದ್ಯಂತ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಶಿವಮೊಗ್ಗದಲ್ಲಿ ಚುನಾವಣೆ ಅಧಿಕಾರಿಗಳ ಸೂಚನೆಯಂತೆ ಎಲ್ಲ ಫೆಕ್ಲ್‌ಗಳನ್ನು ತೆರವುಗೊಳಿಸಲಾಗಿದೆ.
ಶಿವಮೊಗ್ಗ: ಮಾ.18ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಶನಿವಾರ ಬೆಳಗ್ಗೆ ಕೇಸರಿಮಯ ಆಗಿದ್ದ ನಗರ ರಾತ್ರಿವೇಳೆಯೇ ಖಾಲಿ, ಖಾಲಿ ಎಂಬಂತಾಗಿತ್ತು. ಸಂಹಿತೆ ಜಾರಿಯಾದ ಬಳಿಕ ಚುನಾವಣೆ ಅಧಿಕಾರಿಗಳ ಸೂಚನೆಯಂತೆ ಎಲ್ಲ ಫೆಕ್ಲ್‌ಗಳನ್ನು ತೆರವುಗೊಳಿಸಲಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಲ್ಲಮಪ್ರಭು ಮೈದಾನದವರೆಗೆ ರಸ್ತೆಯಲ್ಲಿ ಬಿಜೆಪಿ ಧ್ವಜಗಳನ್ನು ಹಾಕಲಾಗಿತ್ತು. ಪ್ರಮುಖ ವೃತ್ತಗಳನ್ನು ಅಲಂಕರಿಸಲಾಗಿದೆ. ಪ್ರಧಾನಿ ಮೋದಿ ಮತ್ತು ರಾಘವೇಂದ್ರ ಭಾವಚಿತ್ರಗಳಿರುವ ಅಲಂಕೃತ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಇವುಗಳನ್ನು ತೆರವುಗೊಳಿಸಲಾಗಿದೆ.ಇನ್ನು ಪ್ರಧಾನಿ ಭೇಟಿ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲಾಗಿದೆ. ಬಿ.ಎಚ್. ರಸ್ತೆಯಲ್ಲಿ ಡಾಂಬರೀಕರಣ, ರಸ್ತೆ ಇಕ್ಕೆಲಗಳಲ್ಲಿ ಇದ್ದ ಕಸ, ಮಣ್ಣು ತೆರವು ಮಾಡಲಾಗಿದೆ. ಕಳೆದ ಎರಡು ದಿನದಿಂದ ಪೌರ ಕಾರ್ಮಿಕರು ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಸಹ್ಯಾದ್ರಿ ಕಾಲೇಜು ಮುಂಭಾಗ ಇದ್ದ ಹಂಪ್‌ಗಳನ್ನು ತೆರವು ಮಾಡಲಾಗಿದೆ.
- - - (ಫೋಟೋಗಳು): -16ಎಂಜಿಕೆಪಿ08: ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಶನಿವಾರ ಬೆಳಗ್ಗೆ ಎಂಆರ್‌ಎಸ್ ವೃತ್ತದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ನೀತಿ ಸಂಹಿತೆ ಜಾರಿ ಬಳಿಕ ತೆರವುಗೊಳಿಸಿರುವುದು.- - -
-16ಎಂಜಿಕೆಪಿ06:ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಶನಿವಾರ ಬೆಳಗ್ಗೆ ನಗರದ ಎಂಆರ್‌ಎಸ್ ವೃತ್ತದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ಗಳು.
- - --16ಎಂಜಿಕೆಪಿ07:
ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಶನಿವಾರ ಬೆಳಗ್ಗೆ ನಗರದ ಅಮೀರ್ ಅಹಮ್ಮದ್ ವೃತ್ತದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ಗಳು.