ಬಾಗಲಕೋಟೆ ವಿಧಾನಸಭಾ ಉಪಚುನಾವಣೆ-2026 ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.50 ಲಕ್ಷ ನಗದನ್ನು ಎಸ್ಎಸ್‌ಟಿ ಮತ್ತು ಎಫ್ಎಸ್‌ಟಿ ತಂಡ ವಶಕ್ಕೆ ಪಡೆದುಕೊಂಡಿದೆ.

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆ-2026 ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹2.50 ಲಕ್ಷ ನಗದನ್ನು ಎಸ್ಎಸ್‌ಟಿ ಮತ್ತು ಎಫ್ಎಸ್‌ಟಿ ತಂಡ ವಶಕ್ಕೆ ಪಡೆದುಕೊಂಡಿದೆ. ಕುಳಗೇರಿ ಚೆಕ್‌ಪೋಸ್ಟ್‌ನಲ್ಲಿ ಆರ್.ಎಲ್.ನದಾಫ್ ನೇತೃತ್ವದ ಎಸ್.ಎಸ್.ಟಿ ತಂಡ ಹಾಗೂ ರಮೇಶ ಮಾಡಬಾಳ ನೇತೃತ್ವದ ಎಫ್ಎಸ್‌ಟಿ ತಂಡ ಬುಧವಾರ ಸಂಜೆ ವಾಹನ ತಪಾಸಣೆ ವೇಳೆ ಹುಬ್ಬಳ್ಳಿಯಿಂದ ಗೋಕಾಕ್ ತಾಲೂಕಿನ ಕೌಜಲಗಿ ಕಡೆ ಹೊರಟಿದ್ದ ಕಾರು ತಪಾಸಣೆ ವೇಳೆ ನಗದು ಜಪ್ತಿ ಮಾಡಲಾಗಿದೆ. ಬಾದಾಮಿ ತಾಲೂಕು ವ್ಯಾಪ್ತಿಯ ಜಾಲಿಹಾಳ ಚೆಕ್‌ಪೋಸ್ಟ್‌ನಲ್ಲಿ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ₹64 ಸಾವಿರ ಮತ್ತು ₹75 ಸಾವಿರ ನಗದು ಜಪ್ತಿ ಮಾಡಲಾಗಿದೆ. ಬಾಗಲಕೋಟೆ ತಾಲೂಕಿನ ಟಕ್ಕಳಕಿ ಚೆಕ್ ಪೋಸ್ಟ್‌ನಲ್ಲಿ ₹65 ಸಾವಿರ ನಗದನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾಧಿಕಾರಿ ಸಂತೋಷ ಜಗಲಾಸರ ತಿಳಿಸಿದ್ದಾರೆ.